ಹಳಿಯಾಳ:
ಯುವಕರು ತಮ್ಮ ವಿದ್ಯಾಭ್ಯಾಸ ಮತ್ತು ಸ್ಫರ್ಧಾತ್ಮಕ ಮನೋಬಾವದೊಂದಿಗೆ ರಾಷ್ಟ್ರದ ಹಿತಚಿಂತಕರಾಗಬೇಕು, ದಿನದಲಿತರ ಬಡವರ ಕಾಳಜಿಯನ್ನು ಮಾಡುವುದಲ್ಲದೇ ರಾಷ್ಟ್ರೀಯ ಐಕ್ಯತೆಯನ್ನು ಎತ್ತಿ ಹಿಡಿಯಬೇಕೆಂದು ತಾಲೂಕಿನ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಶೇಖರ ಲಮಾನಿ ಕರೆ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಕಾರವಾರ ಅರ್ಥಶಾಸ್ತ್ರ ವಿಭಾಗ ಹಾಗೂ ನವೋದಯ ಯುವಕ ಮಂಡಳ ಸಾತ್ನಳ್ಳಿ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ನೆರೆ-ಹೊರೆ ಯುವ ಸಂಸದ್ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು. ಹವಗಿ ಗ್ರಾ.ಪಂ. ಪಿಡಿಓ ಅನುಪಮಾ ಬಿ ಬೆನ್ನೂರ ಯುವಕರು ಕೆಂದ್ರ ಮತ್ತು ರಾಜ್ಯಗಳ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಸರಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು. ಯುವಕರು ಎಚ್ಚತ್ತುಕೊಂಡರೆ ಒಂದು ರಾಷ್ಟ್ರ ಸರ್ವಾಂಗಿಣ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು. ಸಾತ್ನಳ್ಳಿಯ ನವೋದಯ ಯುವಕ ಮಂಡಳ ಅಧ್ಯಕ್ಷ ಮತ್ತು ಉಪನ್ಯಾಸಕ ಡಾ. ರಾಮಾ ಗೌಡಾ ಮಾತನಾಡಿ ಯುವ ಸಂಘಟನೆಗಳು ರಾಷ್ಟ್ರ ರಕ್ಷಣೆಗೆ ಇರಬೇಕು ಅವು ಸಕಾರಾತ್ಮಕ ಚಿಂತನೆಗಳೊಂದಿಗೆ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಅಧಿಕಾರಿ ಡಾ|| ಮಾಲತಿ ಹಿರೇಮಠ, ಅರ್ಥಶಾಸ್ತ್ರದ ಮುಖ್ಯಸ್ಥೆ ಪರವಿನ ಶೇಖ, ನೆಹರು ಯುವ ಕೇಂದ್ರ ಸಿಬ್ಬಂದಿ ಮೀರಾ ನಾಯಕ ಮಾತನಾಡಿದರು. ಹೊನ್ನಕಾಂಬಳೆ ಅನ್ನಪೂರ್ಣ ಪಾಟೀಲ, ಉಪನ್ಯಾಸಕಿ ಸರೋಜಿನಿ ಬಾಂದಲಕರ ಇದ್ದರು.
Leave a Comment