ಹಳಿಯಾಳ :
ಸ್ವಾತಂತ್ರ್ಯ ಯೋಧ ಭಗತಸಿಂಗ್, ಸುಖದೇವ, ರಾಜಗುರು ಇವರ ಬಲಿದಾನದ ಅಂಗವಾಗಿ ಹಳಿಯಾಳದ ಯುವಶಕ್ತಿ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ ಹುಬ್ಬಳ್ಳಿ ಹಾಗೂ ಧಾರವಾಡದ ಸಿವಿಲ್ ಆಸ್ಪತ್ರೆ ಸಹಯೋಗದಲ್ಲಿ ದಿ.23 ರಂದು ಪಟ್ಟಣದ ಜವಾಹರ ರಸ್ತೆಯಲ್ಲಿರುವ ಡಾ||ಶ್ರವಣ ಸೊಲ್ಲಾಪುರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಸಹ ಯುವಶಕ್ತಿ ಸೇವಾ ಸಂಘವು ‘ರಕ್ತದಾನಿಗಳು ಜೀವ ರಕ್ಷಕರು’, ನಿಮ್ಮ 5 ನಿಮಿಷದ ಸಮಯ ಇನ್ನೊಬ್ಬರ ಜೀವಿತಾವಧಿಯಾಗಿರುತ್ತದೆ’ ಎಂಬ ಧ್ಯೇಯವಾಕ್ಯದೊಂದಿಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಸಂಘದ ಪ್ರಮುಖ ವಿನಾಯಕ ಶಿಂಧೆ, ಪ್ರಕಾಶ ಕೊಣಪ್ಪನವರ ಪ್ರಕಟಣೆಯ ಮೂಲಕ ಕರೆ ನೀಡಿದ್ದಾರೆ.
Leave a Comment