ಹಳಿಯಾಳ:-
ಮಾರ್ಚ 23 ಇಂದಿನಿಂದ ಎಪ್ರಿಲ್ ದಿ.6 ರ ವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಳಿಯಾಳ ತಾಲೂಕಿನಲ್ಲಿ 7 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು 2502 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಯಲು ಅನುಕೂಲವಾಗುವಂತೆ 154 ಕೊಠಿ ಮೇಲ್ವಿಚಾರಕರನ್ನು ಹಾಗೂ 7 ಸಿಟಿಂಗ್ ಸ್ಕ್ವಾಡ್ ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ವೈದ್ಯಕೀಯ ಸೇವೆ ವ್ಯವಸ್ಥೆ, ತಾಲೂಕಾ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ವೀಕ್ಷಕರನ್ನಾಗಿ ನೇಮಿಸಲಾಗಿದೆ ಹಾಗೂ ತಾಲೂಕಾ ಮಟ್ಟದ ಸಂಚಾರಿ ವಿಚಕ್ಷಕದಳ ರಚಿಸಿರುವುದಾಗಿ ಹೇಳಿರುವ ಇಲಾಖೆ ಪಟ್ಟಣದ ಶಿವಾಜಿ ಪ್ರೌಢಶಾಲೆಯಲ್ಲಿ455, ಕಾರ್ಮೇಲ್ ಪ್ರೌಢಶಾಲೆಯಲ್ಲಿ 449, ಮುರ್ಕವಾಡದ ಸರ್ಕಾರಿ ಪ್ರೌಢಶಾಲೆಯಲ್ಲಿ 411, ತೇರಗಾಂವ ಸ ಪ್ರೌಢಶಾಲೆಯಲ್ಲಿ 266, ಜನತಾ ವಿದ್ಯಾಲಯ ದಾಂಡೇಲಿಯಲ್ಲಿ 408, ಬಂಗೂರನಗರದ ಪಪೂ ಕಾಲೇಜಿನಲ್ಲಿ 241 ಹಾಗೂ ದಾಂಡೇಲಿಯ ಸೆಂಟ್ ಮೈಕಲ್ ಪ್ರಾಥಮಿಕ ಶಾಲೆಯಲ್ಲಿ 272 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ತಿಳಿಸಲಾಗಿದೆ.
Leave a Comment