ಹಳಿಯಾಳ: ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ಗ್ರಾಮೀಣ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ವಿದ್ಯಾರ್ಥಿಗಳು 2017-18 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ವಿಭಾಗ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಳಿಯಾಳದ ಮಹಾವಿದ್ಯಾಲಯದ ಆವರಣದಲ್ಲಿ 2 ದಿನಗಳ ಕಾಲ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ವಿಭಾಗದಡಿಯಲ್ಲಿ ಬರುವ ಒಟ್ಟೂ 10 ತಾಂತ್ರಿಕ ಮಹಾವಿದ್ಯಾಲಯದ ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಮಹಾವಿದ್ಯಾಲಯದ ತಂಡವು ಒಂದು ಇನ್ನಿಂಗ್ಸ್ ಮುನ್ನಡೆಯಿಂದ ಧಾರವಾಡದ ಎಸ್.ಡಿ.ಎಮ್. ಮಹಾವಿದ್ಯಾಲಯದ ತಂಡವನ್ನು ಸೋಲಿಸಿ ವಿಜಯಶಾಲಿಯಾಗಿ ಹೊರಹೊಮ್ಮಿತು. ಮಹಾವಿದ್ಯಾಲಯದ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ||ವಿ.ವಿ.ಕಟ್ಟಿ ಹಾಗೂ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದು ಮಹಾವಿದ್ಯಾಲಯದ ಖೋ-ಖೋ ತಂಡಕ್ಕೆ ದೈಹಿಕ ಶಿಕ್ಷಣ ನಿರ್ದೇಶಕರಾದ ಜಿ.ಎಸ್. ಯಳ್ಳೂರ ಮಾರ್ಗದರ್ಶನ ನೀಡಿದ್ದರು. ಈ ತಂಡವು ದಿ.10-04-2018 ರಂದು ಬೆಂಗಳೂರಿನ SಎಅIಖಿ ಕಾಲೇಜಿನಲ್ಲಿ ನಡೆಯಲಿರುವ ವಿ.ತಾ.ವಿ.ಅಂತರ್ ವಿಭಾಗ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಬಾಗವಹಿಸಲಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
Leave a Comment