ಹಳಿಯಾಳ:-
ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಚುನಾವಣಾ ಕಣಕ್ಕೆ ವೇದಿಕೆ ಸಿದ್ದವಾಗಿದ್ದು ಪ್ರಮುಖ ರಾಜಕೀಯ ಪಕ್ಷಗಳು ಹಳಿಯಾಳ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದ್ದು ಹಳಿಯಾಳ ಚುನಾವಣಾ ಕಣ ರಂಗೇರತೊಡಗಿದೆ. ಆಡಳಿತಾರೂಢ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ನೀರಿಕ್ಷೆಯಂತೆ ಸಚಿವ ಆರ್.ವಿ.ದೇಶಪಾಂಡೆ, ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಜೆಡಿಎಸ್ನಿಂದ ಬೆಂಗಳೂರಿನ ಉದ್ಯಮಿ ಕೆ.ಆರ್.ರಮೆಶ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಿವೆ.
ಬಿಜೆಪಿಯಿಂದ :- ಹಿರಿಯ ರಾಜಕಾರಣಿಯಾಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ವಿಡಿ ಹೆಗಡೆಯವರ ಪುತ್ರ ಸುನೀಲ್ ಹೆಗಡೆ ತಮ್ಮ ತಂದೆಯ ಜನಸಂಪರ್ಕದ ಪ್ರಭಾವದಿಂದ ಸಕ್ರೀಯವಾಗಿ ರಾಜಕೀಯದಲ್ಲಿ ಗುರುತಿಸಿಕೊಂಡು ಹಳಿಯಾಳ ಎಪಿಎಮ್ಸಿ ನಿರ್ದೇಶಕರಾಗಿ, ಪಟ್ಟಣ ಪಂಚಾಯತ ಅಧ್ಯಕ್ಷರಾಗಿ, ಅರ್ಬನ್ ಬ್ಯಾಂಕ್ ಚೆರಮನ್, ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷರಾಗಿ, ಸೇವಾದಳ ಯುವ ಘಟಕದ ಅಧ್ಯಕ್ಷರಾಗಿ, ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಸುನೀಲ್ ಹೆಗಡೆ 2008ರಲ್ಲಿ ಜೆಡಿಎಸ್ ಪಕ್ಷದಿಂದ ವಿಧಾನ ಸಭೆಗೆ ಸ್ಪರ್ದಿಸಿ ಸತತ 6 ಬಾರಿ ಗೆಲುವು ದಾಖಲಿಸುತ್ತ ಬಂದಿದ್ದ ಆರ್.ವಿ.ದೇಶಪಾಂಡೆಯವರನ್ನು 5425 ಮತಗಳ ಅಂತರದಿಂದ ಸೋಲಿಸಿದ್ದರು ಅಲ್ಲದೇ 2013ರಲ್ಲಿ ನಡೆದ ಚುನಾವಣೆಯಲ್ಲಿ 2ನೇ ಬಾರಿಗೆ ಸ್ಪರ್ದಿಸಿದಾಗ 5939 ಮತಗಳ ಅಂತರದಿಂದ ದೇಶಪಾಂಡೆ ವಿರುದ್ದ ಸೊಲನಭವಿಸಿದ್ದರು. ಈ ಹಿಂದೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ನ ಎಮ್.ಪಿ ಅಭ್ಯರ್ಥಿ ಶಿವಾನಂದ ನಾಯ್ಕ ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದರಿಂದ ಅಸಮಾಧಾನಗೊಂಡ ಸುನೀಲ್ ಹೆಗಡೆ ಆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರ ಸಂಪರ್ಕಕ್ಕೆ ಬಂದು ಬಳಿಕ ಹೆಗಡೆ ಹಾಗೂ ಜಿಲ್ಲೆಯ ಹಿರಿಯ ಬಿಜೆಪಿ ರಾಜಕಾರಣಿಗಳ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರಿ ಹಳಿಯಾಳದಲ್ಲಿ ಬಿಜೆಪಿಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೀಗ ನಿರಿಕ್ಷೆಯಂತೆ ಅವರಿಗೆ 2018ರ ವಿಧಾನ ಸಭಾ ಟಿಕೆಟ್ ಘೊಷಣೆಯಾಗಿದ್ದು ಧಾರ್ಮಿಕ ಕ್ಷೇತ್ರ ಉಳವಿಯಿಂದ ಅವರು ಪ್ರಚಾರ ಕಾರ್ಯ ಆರಂಭಿಸುವ ಮಾತು ಕೇಳಿಬರುತ್ತಿದೆ. ಆಡಳಿತಾರೂಢ ಕಾಂಗ್ರೇಸ್ನಿಂದ :- ಹಿರಿಯ ರಾಜಕಾರಣಿ 1983ರಿಂದ 2004ರವರೆಗೆ 6 ಅವಧಿಗಳ ಕಾಲ ಹಳಿಯಾಳ ಕ್ಷೇತ್ರದಿಂದ ಸ್ಪರ್ದಿಸಿ ಸತತ 6 ಬಾರಿ ಗೆಲುವು ದಾಖಲಿಸಿ ವಿರೋಧ ಪಕ್ಷದ ನಾಯಕರಾಗಿ, ಸಣ್ಣ ಕೈಗಾರಿಕಾ, ವಸತಿ ಮತ್ತು ನಗರಾಭಿವೃದ್ದಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಭೂತ ಸೌಕರ್ಯ ಅಭಿವೃದ್ದಿ ಹಾಗೂ ಸಹಕಾರ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಸಚಿವ ಆರ್.ವಿ.ದೇಶಪಾಂಡೆ ಅವರು 7ನೇ ಬಾರಿಗೆ 2008ರ ಚುನಾವಣೆಯಲ್ಲಿ ಸ್ಪರ್ದಿಸಿದಾಗ ಸುನೀಲ್ ಹೆಗಡೆಯವರ ವಿರುದ್ದ ಪರಾಭವಗೊಂಡರು. ಆದರೇ ಪ್ರಭಾವಿ ರಾಜಕಾರಣಿಯಾಗಿರುವ ದೇಶಪಾಂಡೆ 2008ರ ಸಪ್ಟೆಂಬರ್ ತಿಂಗಳಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮೀತಿ(ಕೆಪಿಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು ಬಳಿಕ ಮತ್ತೇ 7ನೇ ಬಾರಿಗೆ 2013ರಲ್ಲಿ ಮತ್ತೇ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದು ಈಗ ಮತ್ತೇ 8ನೇ ಬಾರಿಗೆ ಆಯ್ಕೆ ಬಯಸಿದ್ದು ನಿರೀಕ್ಷೆಯಂತೆ ಅವರಿಗೆ ಟಿಕೆಟ್ ದೊರೆತಿದೆ. ಜೆಡಿಎಸ್ನಿಂದ :- ಸದ್ಯ ಕ್ಷೇತ್ರದಲ್ಲಿ ಆಂತರಿಕ ಒಳಜಗಳಗಳು ಕಾರ್ಯಕರ್ತರು, ಮುಖಂಡರ ಭಿನ್ನಮತದಿಂದ ಕಂಗೆಟ್ಟಿರುವ ಜೆಡಿಎಸ್ ಪಕ್ಷಕ್ಕೆ ಸ್ಥಳೀಯರಿಗೆ ಆದ್ಯತೆ ನೀಡದೆ ಅಭ್ಯರ್ಥಿಯಾಗಿ ಬೆಂಗಳೂರಿನ ಉದ್ಯಮಿ ಕೆ.ಆರ್.ರಮೇಶ ಅವರನ್ನು ಘೊಷಿಸಲಾಗಿದೆ. ಇನ್ನೂ ಪಕ್ಷೇತರರಾಗಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ದಾಂಡೇಲಿಯ ಟಿ.ಆರ್.ಚಂದ್ರಶೇಖರ ಬಂಡಾಯ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಉಳಿದಂತೆ ಬಿಎಸ್ಪಿ, ಎನ್.ಸಿಪಿ ಪಕ್ಷಗಳಿಂದ ಟಿಕೆಟ್ ಪಡೆಯಲು ಹಲವಾರು ಪ್ರಮುಖರು ಲಾಬಿ ನಡೆಸುತ್ತಿದ್ದು ಕೆಲವೆ ದಿನಗಳಲ್ಲಿ ಈ ಪಕ್ಷಗಳಿಂದಲೂ ಹಳಿಯಾಳ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಘೊಷಣೆಯಾಗಲಿದ್ದಾರೆ.



ಬುದ್ಧಿವಂತರೇ ದೇಶಪಾಂಡೆ ಅವರನ್ನು ಕೆಳಗಿಳಿಸಿ. ಸುನಿಲ್ ಹೆಗಡೆ ಅವರನ್ನು ಬಿಜೆಪಿ ಮೋದಿ ಪರವಾಗಿ ಪ್ರಚಂಡ ಬಹುಮತದಿಂದ ಆರಿಸಿ ಗೆಲ್ಲಿಸಿ, ದೇಶಪಾಂಡೆ ಅವರು ಅಲಂಕರಿಸಿದ ಮಂತ್ರಿಗಿರಿಯನ್ನೇ ಇನ್ನೂ ಉತ್ತಮವಾಗಿ ಮಾಡಿ ತೋರಿಸಿ. ಆದರೆ ಕೊಳ್ಳಿ ದುಡ್ಡು ಹೊಡೆಯಲು ಚುನಾವಣೆಗೆ ನಿಲ್ಲಬೇಡಿ.