ಹಳಿಯಾಳ:- 2018ರ ವಿಧಾನ ಸಭಾ ಚುನಾವಣೆಗೆ ಹಳಿಯಾಳ-ಜೋಯಿಡಾ ವಿಧಾನ ಸಭಾ (76) ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ದಿ.24 ಮಂಗಳವಾರದ ವರೆಗೆ 11 ಅಭ್ಯರ್ಥಿಗಳಿಂದ 25 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿ ಸಚಿವ ಆರ್.ವಿ.ದೇಶಪಾಂಡೆಯಿಂದ, ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ, ಜೆಡಿಎಸ್ನ ಕೆ.ಆರ್.ರಮೆಶ ಅವರಿಂದ ತಲಾ 4 ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಲಾಗಿದೆ. ಜೆಡಿಎಸ್ ಬಂಡಾಯ ಪಕ್ಷೇತರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ 3, ಬಿಜೆಪಿ 2ನೇ ಅಭ್ಯರ್ಥಿಯಾಗಿ ಮಾಜಿ ಶಾಸಕ ಸುನೀಲ್ ಹೆಗಡೆ ಪತ್ನಿ ಸುವರ್ಣಾ ಅವರಿಂದ 2, ಸಿಪಿಐಎಮ್ ಪಕ್ಷದ ಅಭ್ಯರ್ಥಿ ಯಮುನಾ ಗಾಂವಕರ 3, ಇಂಡಿಯನ್ ನ್ಯೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಜಹಾಂಗೀರಬಾಬಾ ಖಾನ್1, ಎಮ್ಇಪಿ ಪಕ್ಷದ ಅಭ್ಯರ್ಥಿ ಬಡೇಸಾಬ ಕಕ್ಕೇರಿ1, ಶಿವಸೇನೆಯಿಂದ ಶಂಕರ ಫಾಕ್ರಿ 1, ಪಕ್ಷೇತರ ಅಭ್ಯರ್ಥಿಗಳಾದ ಇಲಿಯಾಸ ಕಾಟಿ, ರಾಜಶೇಖರ ಬೆಳ್ಳಿಗಟ್ಟಿಯಿಂದ ತಲಾ 1 ನಾಮಪತ್ರ ಸಲ್ಲಿಸಲಾಗಿದೆ. ದಿ.25 ಬುಧವಾರದಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು. 26 ಹಾಗೂ 27 ನಾಮಪತ್ರ ಹಿಂಪಡೆಯಲು 2 ದಿನ ಕಾಲಾವಕಾಶವಿರುತ್ತದೆ. ಇನ್ನೂ 27 ಕ್ಕೆ ಸಾಯಂಕಾಲ 4.30ಗಂಟೆಗೆ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಭಜಂತ್ರಿ ತಿಳಿಸಿದ್ದಾರೆ.
Leave a Comment