ಹಳಿಯಾಳ:- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರಕ್ಕೆ ಪಕ್ಷೇತರನಾಗಿ ಸ್ಪರ್ದಿಸಲು ನಾಮಪತ್ರ ಸಲ್ಲಿಸಿದ್ದ ದಾಂಡೇಲಿಯ ರಾಜಶೇಖರ ಬೆಳ್ಳಿಗಟ್ಟಿ ಗುರುವಾರ ದಿ.26 ರಂದು ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದು ಈಗ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ 9 ಆಗಿದೆ. ಗುರುವಾರ ಹಾಗೂ ಶುಕ್ರವಾರ ದಿ.27ರ ಮಧ್ಯಾಹ್ನ 3 ಗಂಟೆಯವರಗೆ ನಾಮಪತ್ರ ಹಿಂಪಡೆಯಲು ಅವಕಾಶವಿದ್ದು 27 ಕ್ಕೆ ಸಾಯಂಕಾಲ 4.30ಗಂಟೆಗೆ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಭಜಂತ್ರಿ ತಿಳಿಸಿದ್ದಾರೆ.
Leave a Comment