ಹಳಿಯಾಳ :- 2017-18ನೇ ಸಾಲಿನ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಹಳಿಯಾಳದ ಉದ್ಯೋಗ ವಿದ್ಯಾನಗರದಲ್ಲಿರುವ ಕೆ.ಎಲ್.ಎಸ್.ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಪರೀಕ್ಷೆಗೆ ಹಾಜರಾದ 117 ವಿದ್ಯಾರ್ಥಿಗಳಲ್ಲಿ 105 ವಿದ್ಯಾರ್ಥಿಗಳು ಉತ್ತೀರ್ಣರಾಗಿ 89.74% ಫಲಿತಾಂಶವನ್ನು ವಿದ್ಯಾಲಯ ದಾಖಲಿಸಿದೆ. ವಿದ್ಯಾರ್ಥಿನಿ ಲಕ್ಷ್ಮೀ ಅಶೋಕ ಅಗಸಿಮನಿ 90.17% (541/600) ಶಾಲೆಗೆ ಪ್ರಥಮ, ನಿಶಾತ್ ನಾಶೀರ್ ಚಿಕ್ಕೋಡಿ 534(89%) ದ್ವೀತಿಯ ಹಾಗೂ ಕಿರಣ ನಾಗೇಂದ್ರ ಸಾಂಬ್ರಾಣಿಕರ 88.83% (533/600) ಪಡೆದು ತೃತೀಯ ಸ್ಥಾನ ಪಡೆದಿದ್ದು ವಿದ್ಯಾರ್ಥೀಗಳಿಗೆ ಶಾಲಾ ಶಿಕ್ಷಕರು, ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.


Leave a Comment