• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮೇ.17 ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಚಿವ ದೇಶಪಾಂಡೆ ಬಣ್ಣ ಬಯಲು ಮಾಡುತ್ತೇನೆ – ಸುನೀಲ್ ಹೆಗಡೆ.

May 1, 2018 by Yogaraj SK Leave a Comment

ಹಳಿಯಾಳ:- ಪ್ರತಿ ಚುನಾವಣೆಯಲ್ಲಿ ಒಂದು ನಾಟಕವಾಡುವ ಸಚಿವ ಆರ್.ವಿ.ದೇಶಪಾಂಡೆ ಈ ಚುನಾವಣೆಯಲ್ಲಿ ಕಾಳಿನದಿ ನೀರಾವರಿ ಯೋಜನೆ ಜಾರಿ ಆಗಿದೆ ಎನ್ನುವ ರಾಜಕೀಯ ನಾಟಕವಾಡಿದ್ದು ಮೇ.17ಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶಪಾಂಡೆ ಬಣ್ಣ ಬಯಲು ಮಾಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು.  ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ದೇಶಪಾಂಡೆ ಅವರು ಪತ್ರಿಕೆ ಒಂದರಲ್ಲಿ ಕಾಳಿನದಿ ನೀರಾವರಿ ಯೋಜನೆ ಅನುಷ್ಠಾನವಾಗುತ್ತಿರುವ ಕುರಿತು ಹೇಳಿದ್ದು ಅದು ಶುದ್ದ ಸುಳ್ಳಾಗಿದ್ದು ಚುನಾವಣೆ ಗಿಮಿಕ್ ಆಗಿದೆ ಅಲ್ಲದೇ ನೀರಾವರಿ ಯೋಜನೆ ಪೈಪಲೈನ್ ಮೂಲಕ ಮಾಡಲು ಬರುವುದಿಲ್ಲ ಬದಲಾಗಿ ಕೆನಾಲ್ ಮೂಲಕ ಯೋಜನೆ ಜಾರಿ ಮಾಡಬೇಕಾಗುತ್ತದೆ ಆದರೇ ಇದು ನೀರಾವರಿ ಯೋಜನೆ ಆಗಿರದೆ ಧಾರವಾಡ ಜಿಲ್ಲೆ ಅಳ್ನಾವರಕ್ಕೆ ನೀರು ಕೊಟ್ಟು ಹಳಿಯಾಳ ಕ್ಷೇತ್ರದ ಜನತೆಗೆ ದ್ರೋಹ ಬಗೆಯುವ ಯೋಜನೆ ಆಗಿದೆ ಎಂದು ಆರೋಪಿಸಿದರು.  ನೀರಾವರಿ ಯೋಜನೆ ನಾಟಕವಾಗಿದೆ ಎನ್ನುವ ಹೇಳಿಕೆಗೆ ಈಗಲೂ ತಾವು ಬದ್ದರಿದ್ದು ದೇಶಪಾಂಡೆಗೆ 2 ವರ್ಷಗಳ ಕಾಲಾವಧಿ ನೀಡುತ್ತೇನೆ ಅಷ್ಟರಲ್ಲಿ ಅವರು ನೀರಾವರಿ ಯೋಜನೆ ಜಾರಿಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸಿದ ಮೇಲೆಯೇ ಚುನಾವಣೆ ಎದುರಿಸೊಣ ಅಲ್ಲಿಯವರೆಗೂ ಕ್ಷೇತ್ರದಲ್ಲಿ ಚುನಾವಣೆ ಮುಂದುಡುವಂತೆ ಚುನಾವಣಾ ಆಯೋಗಕ್ಕೆ ಆಗ್ರಹಿಸೊಣ ಎಂದು ಸವಾಲ್ ಹಾಕಿದ ಸುನೀಲ್ ಹೆಗಡೆ ಕಳೆದ ಚುನಾವಣೆಯಲ್ಲಿ ಹಾಗೂ ಆಯ್ಕೆಯಾದ ಬಳಿಕ  ಕ್ಷೇತ್ರವನ್ನು ಸಿಂಗಾಪೂರ ಮಾಡುತ್ತೇನೆ ಎಂದಿದ್ದ ತಾವು ಈಗ ಏಕೆ ಮತದಾರರ ಬಳಿ ಮತಯಾಚನೆಗೆ ತೆರಳುತ್ತಿದ್ದೀರಿ ನೀವು ಅಭಿವೃದ್ದಿ ಮಾಡಿರುವುದು ನಿಜವೇ ಆದರೇ ಜನರು ನಿಮ್ಮನ್ನು ಆಯ್ಕೆ ಮಾಡುತ್ತಾರೆ ಅದಕ್ಕಾಗಿ ಇಬ್ಬರು ಈ ಕ್ಷಣದಿಂದಲೇ ಪ್ರಚಾರ ಕಾರ್ಯ ಮೊಟಕು ಗೊಳಿಸಿ  ಮನೆಯಲ್ಲಿ ಕುಳಿತುಕೊಳ್ಳಣ ಜನರಿಗೆ ಆಯ್ಕೆ ಮಾಡಲು ಅವಕಾಶ ನೀಡೊಣ ಎಂದು ಹೆಗಡೆ ದೇಶಪಾಂಡೆಗೆ ಇನ್ನೊಂದು ಸವಾಲ್ ಹಾಕಿದರು.  ಮೊನ್ನೆ ರಾಮನಗರಕ್ಕೆ ಬಂದಿದ್ದ ಕೇಂದ್ರ ಸಚಿವ ಗಡ್ಕರಿ ಅವರು ಹಳಿಯಾಳ ಕ್ಷೇತ್ರದಲ್ಲಿ ನೀರಾವರಿ ಯೋಜನೆ, ಎಲ್ಲೆಡೆ ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ್ ಪೆನಲ್ ಅಳವಡಿಸಿ ರೈತರಿಗೆ ಆದಾಯ ತರುವ ಯೋಜನೆ ಮಾಡಲು 1000ಕೋಟಿ ರೂ. ಅನುದಾನ ನೀಡುವ ಭರವಸೆ ನಿಡಿದ್ದಾರೆಂದರು.  ಚುನಾವಣೆ ಹಿನ್ನೆಲೆ ದೇಶಪಾಂಡೆ ಅವರು ರುಡಸೆಟ್‍ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಚುನಾವಣಾ ಆಯೋಗಕ್ಕೆ ಸಾಕ್ಷಿ ಆಧಾರಗಳ ಸಮೇತ ದೂರು ನೀಡಲಾಗಿದೆ ಎಂದ ಅವರು ಕ್ಷೇತ್ರದಲ್ಲಿ ಚುನಾವಣಾಧಿಕಾರಿಗಳು ಪಕ್ಷಪಾತ ಮಾಡುತ್ತಿದ್ದು ಹೀಗೆ ಮುಂದುವರೆದರೇ ಬೆಂಗಳೂರು ಚುನಾವಣಾ ಆಯೋಗಕ್ಕೆ ದೂರು ನೀಡಲಾಗವುದು ಎಂದು ಎಚ್ಚರಿಕೆ ನೀಡಿದರು.   ಕ್ಷೇತ್ರದಲ್ಲಿ ಎಷ್ಟು ಉದ್ಯೋಗಾವಕಾಶಗಳನ್ನು ದೇಶಪಾಂಡೆ ಸೃಷ್ಠಿಸಿದ್ದಾರೆ ? ಮರಾಠರನ್ನು 2ಎಗೆ ಹಾಗೂ ಕುಣಬಿ ಜನರನ್ನು ಎಸ್‍ಟಿ ವರ್ಗಕ್ಕೆ ಸೇರಿಸದ ಅವರು ಕ್ಷೇತ್ರದಲ್ಲಿ ರಾಷ್ಟ್ರಪುರುಷ ಶಿವಾಜಿ ಮಹಾರಾಜರ ಪುಥ್ಥಳಿ ಸ್ಥಾಪನೆಗೆ ಅವಕಾಶ ನೀಡದೆ ಮಹಾಪುರುಷನ ಮೂರ್ತಿಗಳು ರಸ್ತೆಯ ಮೇಲೆ ನಿಲ್ಲಬೇಕಾದ ದೌರ್ಭಾಗ್ಯ ಹಿಂದೂಗಳಿಗೆ ಬಂದೊದಗಿದ್ದು  ಬಿಜೆಪಿ ಅಧಿಕಾರಕ್ಕೆ ಬಂದ 1 ತಿಂಗಳಲ್ಲಿ ಮೂರ್ತಿ ಸ್ಥಾಪನೆಗೆ ಅನುಮತಿ ನೀಡಲಾಗುವುದು ಎಂದು ಭರವಸೆ ನೀಡಿದರು.  ಈ ಸಂದರ್ಭದಲ್ಲಿ ಶಿವಾಜಿ ನರಸಾನಿ, ತುಕಾರಾಮ ಮಾಂಜ್ರೇಕರ, ಸಂತೊಷ ರೆಡೆಕರ, ಸೊನಪ್ಪಾ ಸುಣಕಾರ, ಎಸ್.ಎ.ಶೆಟವಣ್ಣವರ, ವಿಎಮ್. ಪಾಟೀಲ್ ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Trending Tagged With: 1000ಕೋಟಿ ರೂ. ಅನುದಾನ, BJP candidate, press meet, sunil hegde, x mla, ಅಧಿಕಾರಕ್ಕೆ, ಅವಕಾಶ ನೀಡದೆ ಮಹಾಪುರುಷನ ಮೂರ್ತಿಗಳು, ಕಾಳಿನದಿ ನೀರಾವರಿ ಯೋಜನೆ, ಕ್ಷೇತ್ರದ ಜನತೆಗೆ ದ್ರೋಹ ಬಗೆಯುವ ಯೋಜನೆ, ಚುನಾವಣೆಯಲ್ಲಿ ಒಂದು ನಾಟಕವಾಡುವ, ಧಾರವಾಡ ಜಿಲ್ಲೆ ಅಳ್ನಾವರ, ಪುಥ್ಥಳಿ ಸ್ಥಾಪನೆಗೆ, ಬಣ್ಣ ಬಯಲು ಮಾಡುತ್ತೇನೆ, ಬಂದ ಮೇಲೆ, ಬಿಜೆಪಿ ಸರ್ಕಾರ, ಮೇ.17, ರಾಷ್ಟ್ರಪುರುಷ ಶಿವಾಜಿ ಮಹಾರಾಜರ, ರೈತರ ಹೊಲಗಳಿಗೆ ನೀರು ಹರಿಸಿದ, ಶುದ್ದ ಸುಳ್ಳಾಗಿದ್ದು ಚುನಾವಣೆ ಗಿಮಿಕ್, ಸಚಿವ ಗಡ್ಕರಿ, ಸಚಿವ ದೇಶಪಾಂಡೆ, ಸುನೀಲ್ ಹೆಗಡೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar