• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಾಷ್ಟ್ರ ಪುರುಷರು, ಕ್ರಾಂತಿಕಾರಿಗಳನ್ನು ಅವಮಾನಿಸುವ, ರೈತರು, ಯುವಕರ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರವನ್ನು ಕಿತ್ತೋಗೆಯಿರಿ – ಯೋಗಿ ಆದಿತ್ಯನಾಥ

May 4, 2018 by Yogaraj SK Leave a Comment

ಹಳಿಯಾಳ:- ರಾಷ್ಟ್ರಪುರುಷರು, ಕ್ರಾಂತಿಕಾರಿಗಳನ್ನು ಸದಾ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡುವ ಹಾಗೂ ಅಗೌರವ ನೀಡುತ್ತಾ ಕೇವಲ ಭ್ರಷ್ಟಾಚಾರವನ್ನೇ ಮೂಲಮಂತ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೇಸ್ ಸರ್ಕಾರವನ್ನು ಈ ಬಾರಿ ಕಿತ್ತೊಗೆಯಿರಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಜಿ ಕರೆ ನೀಡಿದರು.  ಶುಕ್ರವಾರ ಹಳಿಯಾಳಕ್ಕೆ ಆಗಮಿಸಿದ ಅವರು ಇಲ್ಲಿಯ ಶ್ರೀ ಶಿವಾಜಿ ಮೈದಾನದಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾವೇಶವನ್ನು ಉಧ್ಘಾಟಿಸಿ ಮಾತನಾಡಿದರು.  ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದರು ಅವರಿಗೆ ಪರಿಹಾರ ನೀಡದೆ ಸಿದ್ದರಾಮಯ್ಯ ಸರ್ಕಾರ ನಿರಂತರ ಭ್ರಷ್ಟಾಚಾರದಲ್ಲಿ ಕಾಲಕಳೆಯುತ್ತಿದ್ದು ಕರ್ನಾಟಕದ ಸಿದ್ದರಾಮಯ್ಯ ಅವರು ಕಾಂಗ್ರೇಸ್‍ನ ಎಟಿಎಮ್ ಇದ್ದಂತೆ ಅವರು ರಾಜ್ಯದ ಸಂಪತ್ತು ಲೂಟಿ ಮಾಡುವುದರಲ್ಲೇ ಕಾಲಹರಣ ಮಾಡಿ ರೈತರನ್ನು, ಯುವಕರನ್ನು ಅತಂತ್ರ ಸ್ಥಿತಿಯಲ್ಲಿಟ್ಟು ರಾಜ್ಯದ ಮತದಾರರಿಗೆ ದ್ರೋಹ ಬಗೆದಿದ್ದಾರೆಂದರು.  ರಾಷ್ಟ್ರೀಯ ಪುರುಷರನ್ನು, ಕ್ರಾಂತಿಕಾರಿಗಳನ್ನು ಸದಾಕಾಲ ಅವಮಾನಿಸುವ ಕಾಂಗ್ರೇಸ್ ಸರ್ಕಾರ ಮಠ ಮಂದಿರಗಳ ಆಸ್ತಿ ಕಬಳಿಸಲು ಹುನ್ನಾರ ನಡೆಸಿದ್ದು ದೌರ್ಭಾಗ್ಯದ ಸಂಗತಿಯಾಗಿದ್ದು ಇಂತಹ ಸರ್ಕಾರ ಆಡಳಿತ ನಡೆಸಲು ಯೋಗ್ಯವಿಲ್ಲ ಎಂದು ಕಿಡಿ ಕಾರಿದರು.  ಸಿದ್ದರಾಮಯ್ಯ ಅವರೇ ಉತ್ತರ ಪ್ರದೇಶ ಸರ್ಕಾರದ ಜೊತೆ ನಿಮ್ಮನ್ನು  ತುಲನೆ ಮಾಡಬೇಡಿ ಹಾಗೇನಾದರು ಮಾಡಿದರೇ ನೀವು ಕ್ಷಣ ಮಾತ್ರ ನಿಮ್ಮ ಸ್ಥಾನದಲ್ಲಿ ಉಳಿಯುವುದಿಲ್ಲ ನಾವು ಓಟ ಬ್ಯಾಂಕ್ ರಾಜಕಾರಣ ಮಾಡುವರಲ್ಲ  ಭ್ರಷ್ಟಾಚಾರ ಮುಕ್ತ, ಗುಂಡಾಗಿರಿ ಮುಕ್ತ ಪಾರದರ್ಶಕ ಆಡಳಿತ ನಮ್ಮದು ಎಂದರು.  ರಾಷ್ಟ್ರಪುರುಷ ಶಿವಾಜಿ ಮಹಾರಾಜರಂತಹ ವ್ಯಕ್ತಿಯ ಪುಥ್ಥಳಿ ಸ್ಥಾಪನೆಗೆ ಅವಕಾಶ ನೀಡದೆ ಅವರಿಗೆ ಅಗೌರವ ತೋರುವ ಕಾಂಗ್ರೇಸ್ ಸರ್ಕಾರವನ್ನು ಮೊದಲು ಕಿತ್ತೊಗೆಯಿರಿ ಕರ್ನಾಟಕ ನೆಲದಲ್ಲಿ ರಾಷ್ಟ್ರಪುರುಷರು, ಸಂತರು, ಕ್ರಾಂತಿಕಾರಿಗಳಿಗೆ ಗೌರವ ನೀಡುವ, ಅಭಿವೃದ್ದಿ ಪರ ಬಿಜೆಪಿ ಪಕ್ಷ ಬೆಂಬಲಿಸಿ ಎಂದ ಯೋಗಿ ಅವರು  ಹಳಿಯಾಳ ಕ್ಷೇತ್ರದಲ್ಲಿ  ಅಭ್ಯರ್ಥಿ ಸುನೀಲ್ ಹೆಗಡೆ ಅವರನ್ನು ಬಹುಮತಗಳಿಂದ ಆರಿಸಿ ತನ್ನಿ  ಹಳಿಯಾಳ ಕ್ಷೇತ್ರದಲ್ಲಿ ಕೈಗಾರಿಕೆ, ನೀರಾವರಿ ಯೋಜನೆ, ನೀರಿನ ಸಮಸ್ಯೆ ಪರಿಹಾರ ಸೇರಿದಂತೆ ಶಿವಾಜಿ ಮಹಾರಾಜರ ಪುಥ್ಥಳಿ ಸ್ಥಾಪನೆ ಮಾಡಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.  ಹಿಂದೂಗಳ ಪೂಜನೀಯ ಗೋಮಾತೆಯ ಭಕ್ಷಣೆ ಮಾಡುವ ಬಗ್ಗೆ ಸಮರ್ಥನೆಯ  ಮಾತನಾಡುವ ಶಾಸಕರನ್ನು ಹೊಂದಿರುವ ಸಿದ್ದರಾಮಯ್ಯ ನವರೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲಾಗುವುದು ಎಂದು ಘೊಷಿಸಿದರು.  ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಸಚಿವ ಆರ್.ವಿ.ದೇಶಪಾಂಡೆ ಸುಧಿರ್ಘ 35 ವರ್ಷ ಆಡಳಿತ ನಡೆಸಿದರು ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿ ಮಾಡಿಲ್ಲ, ನೀರಾವರಿ ಯೋಜನೆಗಳಲ್ಲಿ, ಕುಡಿಯುವ ನೀರಿಗೆ ಸಮಸ್ಯೆಗೆ ಪರಿಹಾರ ನೀಡದೆ ಇರುವ ಅವರನ್ನು ಸೋಲಿಸಿ ನನ್ನನ್ನು ಗೆಲ್ಲಿಸಿದರೇ ಕ್ಷೇತ್ರದಲ್ಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸಿ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವುದಾಗಿ ಹೇಳಿದರು.   ಸುಮಾರು 12 ಸಾವಿರಕ್ಕೂ ಅಧಿಕ ಜನ ಸೇರಿದ್ದ ಸಮಾವೇಶ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿಡಿ ಹೆಗಡೆ, ಹನುಮಂತ ಕೊಟಬಾಗಿ, ಮಂಗೇಶ ದೇಶಪಾಂಡೆ, ವಿಜಯಕುಮಾರ ಗುಪ್ತಾ,  ಸ್ವಾಮೀಜಿಗಳಾದ ಮಂಜುನಾಥ ಮಹಾರಾಜ, ಹಂಡಿಬಡಂಗನಾಥ ಸ್ವಾಮೀಜಿ, ಸಾಗರನಾಥ ಮಹಾರಾಜ, ತಾಲೂಕಾಧ್ಯಕ್ಷರಾದ ಶಿವಾಜಿ ನರಸಾನಿ, ತುಕಾರಾಮ, ಬಸವರಾಜ ಕಳಸೆಟ್ಟಿ ಶ್ರೀಕಾಂತ ಹೂಲಿ, ಶ್ರೀಪತಿ ಭಟ್, ವಿಎಮ್ ಪಾಟಿಲ್, ಪ್ರಮುಖರು ಇದ್ದರು.

 

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Trending Tagged With: 12 ಸಾವಿರಕ್ಕೂ ಅಧಿಕ ಜನ, ಕಿತ್ತೋಗೆಯಿರಿ, ಕ್ರಾಂತಿಕಾರಿಗಳನ್ನು ಅವಮಾನಿಸುವ, ಯುವಕರ ವಿರೋಧಿ, ಯೋಗಿ ಆದಿತ್ಯನಾಥ, ರಾಷ್ಟ್ರ ಪುರುಷರು, ರೈತರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar