ಹಳಿಯಾಳ:- 2016-17 ನೇ ಸಾಲಿನಲ್ಲಿ ಹಳಿಯಾಳ ತಾಲೂಕಿನ ಎಸ್.ಎಸ್.ಎಲ್.ಸಿ ಶೇಕಡಾ 70.31 ರಷ್ಟಿದ್ದ ಫಲಿತಾಂಶ ಪ್ರಸಕ್ತ 2017-18ನೇ ಸಾಲಿನಲ್ಲಿ ಶೇಕಡಾ 76.48 ಆಗಿದ್ದು ಉತ್ತಮ ಫಲಿತಾಂಶ ದಾಖಲಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷಾ ಫಲಿತಾಂಶ ಕಳೆದ ಭಾರಿಗಿಂತ ಸುಧಾರಣೆ ಕಂಡಿದ್ದು ತಾಲೂಕಿನ ಬಾಣಸಗೇರಿಯಲ್ಲಿಯ ಮುರಾರ್ಜಿ ವಸತಿ ಶಾಲೆ ಮತ್ತು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಳಿಯಾಳ ಶೇಕಡಾ 100 ರಷ್ಟು ಫಲಿತಾಂಶ ಹಾಗೂ ಸರ್ಕಾರಿ ಪ್ರೌಢ ಶಾಲೆ ಅರ್ಲವಾಡ ಮತ್ತು ಮಿಲಾಗ್ರೀಸ್ ಪ್ರೌಢ ಶಾಲೆ ಹಳಿಯಾಳ ಶೇಕಡಾ 97 ಫಲಿತಾಂಶ ಪಡೆದಿದ್ದು ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಶಿಕ್ಷಣಾಧಿಕಾರಿ ಮುಲ್ಲಾ ತಿಳಿಸಿದ್ದಾರೆ. ಇನ್ನೂ ಕಳೆದ ಭಾರಿಗಿಂತ ಫಲಿತಾಂಶ ಕಡಿಮೆಯಾದ ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ತಾಲೂಕಿನ ದಾಂಡೇಲಿಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಕುಳಿತ 38 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ತೆರ್ಗಡೆಯಾಗಿ ಶೇ.34.21 ಅತ್ಯಂತ ಕಡಿಮೆ ಫಲಿತಾಂಶ, ದಾಂಡೆಲಿಯ ವಿಶ್ವನಾಥ ಪ್ರೌಢಶಾಲೆ 47ರಲ್ಲಿ 17ವಿದ್ಯಾರ್ಥಿಗಳು ಉತ್ತೀರ್ಣರಾಗಿ 36.17% ಹಾಗೂ ಸದಾಕಾಲ ಕಳಪೆ ಫಲಿತಾಂಶ ದಾಖಲಿಸುವ ಹಳಿಯಾಳದ ಶಿವಾಜಿ ಪ್ರೌಢಾಶಾಲೆಯಲ್ಲಿ 162 ರಲ್ಲಿ 76 ವಿದ್ಯಾರ್ಥಿಗಳು ತೆರ್ಗಡೆಯಾಗಿ 46.91ಶೇಕಡಾ ಫಲಿತಾಂಶ ದಾಖಲಿಸಿ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ ಹಾಗೂ ಸ್ವಾಮಿ ವಿವೇಕಾನಂದ ಪ್ರೌಢಶಾಲೆ 47.83% ಫಲಿತಾಂಶ ದಾಖಲಿಸಿದೆ. ಇನ್ನೂ ತಾಲೂಕಿನ ಗ್ರಾಮಾಂತರ ಭಾಗದ ಸರ್ಕಾರಿ ಸರ್ಕಾರಿ ಪ್ರೌಢಶಾಲೆಗಳಾದ ಭಾಗವತಿ ಗ್ರಾಮ ಶೇ.90.91, ತೇರಗಾಂವ-91.38%, ಮಂಗಳವಾಡ-90.48%, ಸಾತ್ನಳ್ಳಿ-92.31%, ಜನಗಾ-93.44%, ಬಿ.ಕೆಹಳ್ಳಿ-90.38% ಹಾಗೂ ಮುರಾರ್ಜಿ ವಸತಿ ಪ್ರೌಢಶಾಲೆ ದಾಂಡೇಲಿ-95.24% ಹೀಗೆ 90ರ ಮೇಲ್ಪಟ್ಟು ಉತ್ತಮ ಫಲಿತಾಂಶ ದಾಖಲಿಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
Leave a Comment