ಹಳಿಯಾಳ:- ಹಳಿಯಾಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಈ ಬಾರಿಯ ಎಸ್ಎಸ್ ಎಲ್ಸಿ ಫಲಿತಾಂಶ ನೂರಕ್ಕೆ ನೂರರಷ್ಟಾಗಿದ್ದು 6ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆಂದು ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಧಾನ ಪರಿಷತ್ ಮಾಜಿ ಸದಸ್ಯ ವ್ಹಿ.ಡಿ.ಹೆಗಡೆ ತಿಳಿಸಿದ್ದಾರೆ.ಹಳಿಯಾಳ:- ಹಳಿಯಾಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಈ ಬಾರಿಯ ಎಸ್ಎಸ್ ಎಲ್ಸಿ ಫಲಿತಾಂಶ ನೂರಕ್ಕೆ ನೂರರಷ್ಟಾಗಿದ್ದು 6ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆಂದು ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಧಾನ ಪರಿಷತ್ ಮಾಜಿ ಸದಸ್ಯ ವ್ಹಿ.ಡಿ.ಹೆಗಡೆ ತಿಳಿಸಿದ್ದಾರೆ. ಹಳಿಯಾಳ ತಾಲೂಕಿನ ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ಒಂದಾದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವು ಶೇಕಡಾ 100% ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ 48 ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 10 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿನಿ ಉಮ್ಮೇಉಮರಾ ಸಾವಂತವಾಡಿ (94.72%), ಗಣೇಶ ಬೆಳಗಾಂವಕರ (94.08%), ಕಾರ್ತಿಕ ಗರಗ (93.28%), ವೈಷ್ಣವಿ ಪೂಜಾರಿ (92.16%), ಆಸಿಮಅಹ್ಮ ಮುಲ್ಲಾ (92%), ನಯನ ಹೆಗಡೆ (90.4%), ಮಜುಹೇರ ತಡಕೋಡ (89.28), ಅಫಾಅಹ್ಮದ ಮುಲ್ಲಾ (88.16), ವಿಶ್ವರಾಧ್ಯಾ ಶ್ರೀಗುರುಮಠ (86.56%), ಮ.ಜೈದ ಬೇಪಾರಿ (85.92) ಗಳಿಸಿದ್ದಾರೆಂದು ಮಾಹಿತಿ ನೀಡಿದ್ದಾರೆ.
Leave a Comment