ಹೊನ್ನಾವರ: ಹಿಂದೂತ್ವ ನಮ್ಮ ಆರಾಧನೆಯ ಬಿಂದು. ನಮ್ಮ ಬದುಕು ಸಂಸ್ಕ್ರತಿ, ಸಂಸ್ಕಾರದ ಕೇಂದ್ರ. ಇಲ್ಲಿ ಕೆಲವರು ಹಿಂದೂತ್ವದ ಬಗ್ಗೆ ಅರಿವಿಲ್ಲದೇ ಢೋಂಗಿತನ ಮತ್ತು ಖೋಟಾ ಹಿಂದುವಾದವನ್ನು ಪ್ರದರ್ಶಿಸುತ್ತಿದ್ದಾರೆ. ಧರ್ಮಕ್ಕೋಸ್ಕರವೇ ಬದುಕಬೇಕು, ಧರ್ಮಕ್ಕೋಸ್ಕರವೇ ರಾಜಕಾರಣ ಮಾಡಬೇಕು ಅದನ್ನು ಬದುಕಿನಲ್ಲಿ ತೋರಿಸಿಕೊಡಬೇಕು. ನೀವು ಸ್ವಂತಿಕೆಯಿಂದ ಬದುಕಿ ಯಾರು ನೀಡುವ ಭಿಕ್ಷೆಗೆ ಅಂಗಲಾಚದಿರಿ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಹಾಗೂ ಉದ್ಯಮಶೀಲತಾ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಅವರು ತಾಲೂಕಿನಲ್ಲಿ ಕುಮಟಾ ಮತ್ತು ಭಟ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿದರು. ರಾಜಕಾರಣ ಎನ್ನುವುದು ಬರುತ್ತೆ ಹೋಗುತ್ತೆ ಹಲವು ಬುಡವಿಲ್ಲದ ಬೇರುಗಳು ಪ್ರತ್ಯಕ್ಷವಾಗುತ್ತದೆ. ಇದು ರಾಜಕಾರಣ ಅಲ್ಲ, ಹಿಂದೂ ಧರ್ಮದ ರಕ್ಷಣೆ ಆಗಬೇಕು. ಕಾಂಗ್ರೆಸ್ ಇದು ಕೆಟ್ಟ ಪರಂಪರೆ ಹಾಗೂ ಕೆಟ್ಟ ಸ್ವಭಾವ. ದೇಶ ವಿಭಜಿಸಿ ಜಾತಿ ಜಾತಿಗಳ ಮದ್ಯೆ ವಿಷ ಬೀಜ ಬಿತ್ತುವ ನೀಚ ಸಂಸ್ಕøತಿಯುಳ್ಳ ಈ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬೇಕು. ನಮ್ಮ ಬದುಕು ನಾಲ್ಕು ಜನರ ಎದುರು ತಲೆ ಎತ್ತಿ ನಿಲ್ಲುವಂತಾಗಬೇಕು. ಮತವನ್ನು ಹಣಕ್ಕೇ ಮಾರಿಕೊಳ್ಳಬೇಡಿ. 70 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮತದಾರರಿಗೆ ಸರಾಯಿಕೊಟ್ಟು ಮಲಗಿಸಿದೆ, ಇದು ಅವರ ಪಾಪದ ಫಲ, ಇನ್ನು ನೀವು ಎಚ್ಚರಗೊಳ್ಳದಿದ್ದಲ್ಲಿ ನಿಮಗೆ ಉಳಿಗಾಲವಿಲ್ಲ ಎಂದರು.
ವೇದಿಕೆಯಲ್ಲಿ ಅಭ್ಯರ್ಥಿ ದಿನಕರ ಶೆಟ್ಟಿ, ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರೀ, ಬಿಜೆಪಿ ತಾಲೂಕಾ ಅದ್ಯಕ್ಷ ಸುಬ್ರಾಯ ನಾಯ್ಕ, ಲೋಕೇಶ ಮೇಸ್ತ, ಉಮೇಶ ನಾಯ್ಕ, ಗಣೇಶ ಪೈ ಮತ್ತಿತರರು ಉಪಸ್ಥಿತರಿದ್ದರು.
Leave a Comment