ದಾಂಡೇಲಿ : ಈ ಸಲದ ಚುನಾವಣೆ ಭವಿಷ್ಯದ ಕ್ಷೇತ್ರದ ಪ್ರಗತಿಯ ದಿಕ್ಸೂಚಿ. ಕ್ಷೇತ್ರದ ಮತದಾರರು ಶರವೇಗದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಮತ್ತು ಮುಂದೆ ಮಾಡಲಿರುವ ಆರ್.ವಿ. ದೇಶಪಾಂಡೆಯವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ, ಕ್ಷೇತ್ರದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದ್ದಾರೆ ಎಂದು ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆಯವರ ಪ್ರಸಾದ ದೇಶಪಾಂಡೆ ಭವಿಷ್ಯ ನುಡಿದರು.ದಾಂಡೇಲಿ : ಈ ಸಲದ ಚುನಾವಣೆ ಭವಿಷ್ಯದ ಕ್ಷೇತ್ರದ ಪ್ರಗತಿಯ ದಿಕ್ಸೂಚಿ. ಕ್ಷೇತ್ರದ ಮತದಾರರು ಶರವೇಗದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಮತ್ತು ಮುಂದೆ ಮಾಡಲಿರುವ ಆರ್.ವಿ. ದೇಶಪಾಂಡೆಯವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ, ಕ್ಷೇತ್ರದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದ್ದಾರೆ ಎಂದು ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆಯವರ ಪ್ರಸಾದ ದೇಶಪಾಂಡೆ ಭವಿಷ್ಯ ನುಡಿದರು. ಕಳೆದ ನಾಲ್ಕುವರೆ ವರ್ಷಗಳಲ್ಲಿ ದೇಶಪಾಂಡೆ ಅವರು ಈ ಕ್ಷೇತ್ರದಲ್ಲಿ ಮಾಡಿದ ಕೆಲಸ ಕಾರ್ಯಗಳು ಅಭೂತಪೂರ್ವ. ಅವರು ತಂದ ಅನುದಾನಗಳು, ಯೋಜನೆಗಳು, ಕಾರ್ಯಕ್ರಮಗಳೆ ಅವರ ಗೆಲುವಿನಲ್ಲಿ ಅದರಲ್ಲೂ ಅತ್ಯಧಿಕ ಮತಗಳ ಅಂತರದ ಗೆಲುವಿಗೆ ಪ್ರಮುಖ ಸಹಕಾರಿಯಾಗಲಿದೆ. ನೋಡಿ, ದಾಂಡೇಲಿ ತಾಲೂಕು ರಚನೆಯಿರಬಹುದು, ಕೋಟಿ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಭಿವೃದ್ಧಿಯ ಹೊನಲನ್ನೆ ಹರಿಸಿರುವ ಸಚಿವರ ಪರವಾಗಿ ಕ್ಷೇತ್ರದಲ್ಲೆಡೆ ಭರ್ಜರಿ ಅಲೆಯಿದೆ. ಇದು ಅವರ ಗೆಲುವಿನ ಅಂತರವನ್ನು ಹೆಚ್ಚಿಸಲಿದೆ. ಚುನಾವಣೆ ಅಂದ ಮೇಲೆ ಸಾಧನೆಯನ್ನು ಮನೆ ಮನಗಳಿಗೆ ಮುಟ್ಟಿಸುವ ಕೆಲಸ ಮಾಡಲೆಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನನಗೆ ಬಹಳ ಖುಷಿಯಾಗುವುದು ಏನೆಂದರೇ, ನಮ್ಮ ಕ್ಷೇತ್ರದ ಜನರಿಗೆ ದೇಶಪಾಂಡೆಯವರ ಮೇಲೆ ಅಪಾರವಾದ ವಿಶ್ವಾಸವಿದೆ. ದೇಶಪಾಂಡೆ ಬಳಿ ಸಮಸ್ಯೆಗಳನ್ನು ಹೇಳಿಕೊಂಡು ಹೋದರೇ ಅದಕ್ಕೆ ತ್ವರಿತಗತಿಯಲ್ಲಿ ಪರಿಹಾರ ಸಿಗುತ್ತದೆ ಎಂಬ ಬಲವಾದ ನಂಬಿಕೆ ಕ್ಷೇತ್ರದ ಜನರಿಗೆ ಇದೆ. ಇದೇ ನಮ್ಮ ಗೆಲುವಿನ ನಂಬಿಕೆಯನ್ನು ಇಮ್ಮಡಿಗೊಳಿಸಿದೆ. ದೇಶಪಾಂಡೆ ಅವರ ಕ್ರಿಯಾಶೀಲತೆ, ಬತ್ತದ ಉತ್ಸಾಹ, ತಾಂತ್ರಿಕ ಯುಗಕ್ಕೆ ಬೇಕಾದ ಅವರ ಚಿಂತನೆಯ ಲಹರಿಗಳು, ಯೋಜನೆಗಳು, ಹೊಸ ಹೊಸ ಯೋಚನೆ, ಯೋಜನೆಗಳನ್ನು ಕಾರ್ಯಗತಗೊಳಿಸುವ ಅವರ ಕಾರ್ಯವೈಖರಿ ಹಾಗೂ ವಿಶೇಷವಾಗಿ ನುಡಿದಂತೆ ನಡೆಯುವ ಮತ್ತು ನಡೆದಂತೆ ನುಡಿಯುವ ಅವರ ಗುಣಸ್ವಭಾವ ನಮಗೆ ಪ್ರೇರಣಾದಾಯಿಯಾಗಿದೆ. ಅಭಿವೃದ್ಧಿಯಲ್ಲಿ ಧರ್ಮವಿರಬೇಕು, ಆದ್ರೆ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಬಾರದು. ಹುಟ್ಟು ಸಾವು ಸಹಜ ಅಂದ್ಮೇಲೆ, ಜಾತಿ, ಧರ್ಮ, ಭಾಷೆಯನ್ನು ಮೀರಿ ನಿಂತು ನಾವೆಲ್ಲರೂ ಒಂದೇ ಎಂಬ ಭಾತೃತ್ವದಡಿ ಸಮರಸವೆ ಜೀವನ ಎಂಬುವುದನ್ನು ಮೈಗೂಡಿಸಿ, ಎಲ್ಲರೊಂದಿಗೆ ಎಲ್ಲರಂತೆ ಬಾಳಬೇಕು. ಚುನಾವಣೆ ಬರುತ್ತೆ ಹೋಗುತ್ತೆ ಚುನಾವಣೆ ಬಂದಾಗ ಅಭಿವೃದ್ಧಿಯ ಕನಸುಗಳನ್ನು, ಕಾರ್ಯಗಳನ್ನು ಮರೆತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದಿದೆಯಲ್ಲಾ, ಅದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗುತ್ತದೆ. ಈ ಎಲ್ಲ ದೃಷ್ಟಿಯಿಂದ ದೇಶಪಾಂಡೆಯವರು ವಿಭಿನ್ನವಾಗಿ ನಿಲ್ಲುತ್ತಾರೆ. ಅವರಲ್ಲಿಯೂ ಮಾನವೀಯ ಗುಣ, ಎಲ್ಲ ಧರ್ಮಿಯರನ್ನು ಸಮಾನಭಾವದಿಂದ, ವಿಶ್ವಾಸದಿಂದ ಕಾಣುತ್ತಾರೆ. ಇದು ಜಾತ್ಯಾತೀತ ವ್ಯವಸ್ಥೆಯ ಬಲವರ್ಧನೆಗೆ ಸಹಕಾರಿಯಾಗಲಿದೆ ಆರ್.ವಿ.ದೇಶಪಾಂಡೆಯವರ ಗೆಲುವು ಶತಸಿದ್ದ ಎಂದು ಪ್ರಸಾದ ಮತ್ತೊಮ್ಮೆ ಹೇಳಿದರು.
Leave a Comment