ಹೊನ್ನಾವರ.ತಾಲೂಕಿನ ಕಾಸರಕೋqನÀ ಜನತಾ ವಿದ್ಯಾಲಯ ಶಾಲೆಯು ಈ ವರ್ಷ ಎಸ್.ಎಸ್.ಎಲ್.ಸಿಯಲ್ಲಿ 93.75% ಫಲಿತಾಂಶವನ್ನು ಪಡೆದು ತಾಲೂಕಿಗೆ ಉತ್ತಮ ಸ್ಥಾನವನ್ನುಗಳಿಸಿಕೊಂಡಿದೆ. ಪರೀಕ್ಷೆಗೆ ಕುಳಿತ 32 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ ಉನ್ನತ ಶ್ರೇಣಿ ಸಹಿತ ಪ್ರಥಮ ದರ್ಜೆ 04 ವಿದ್ಯಾರ್ಥಿಗಳು, ಪ್ರಥಮ ದರ್ಜೆ 24, ದ್ವಿತೀಯ ದರ್ಜೆಯಲ್ಲಿ 02 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ, ಸತೀಶ ಮಂಜುನಾಥ ತಾಂಡೇಲ 560/625 ಅಂಕದೊಂದಿಗೆ 89.60% ಫಲಿತಾಂಶ ಪಡೆದು ಶಾಲೆಗೆ ಮೊದಲ ಸ್ಥಾನದಲ್ಲಿದ್ದರೆ, ಚಂದ್ರೀಕಾ ತಿಮ್ಮ ಗೌಡ 554/625 ಅಂಕಪಡೆದು 88.64% ದೊಂದಿಗೆ ದ್ವಿತೀಯ ಹಾಗೂ ರಮ್ಯಾ ಚಂದ್ರಕಾಂತ ನಾಯ್ಕ 552/625, 88.32% ಫಲಿತಾಂಶ ಪಡೆದಿರುತ್ತಾರೆ. ಇವರೆಲ್ಲರು ಕೂಲಿ ಕಾರ್ಮಿಕರ ಬಡ ವಿದ್ಯಾರ್ಥಿಗಳಾಗಿದ್ದು, ಯಾವುದೇ ಟ್ಯೂಷನ್ ಪಾಠಕ್ಕೆ ಹೋಗದೆ ಮಾಡಿರುವ ಈ ಸಾಧನೆಯನ್ನು ಶಾಲೆಯ ಮುಖ್ಯಾಧ್ಯಾಪಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರ, ಸದಸ್ಯರು, ಪಾಲಕರು, ಊರ ನಾಗರಿಕರು ಅಭಿನಂದಿಸಿದ್ದಾರೆÉ.


Leave a Comment