ಹಳಿಯಾಳ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ತಾಲೂಕಾ ಘಟಕದವರು ವಿವಿಧ ಶಾಲೆಗಳಲ್ಲಿ ಸಸಿಗಳನ್ನು ನೆಟ್ಟು ಅರ್ಥಪೂರ್ಣವಾಗಿ ಪರಿಸರ ದಿನಾಚರಣೆ ಆಚರಿಸಿದರು. ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯವರ ವ್ಹಿ.ಡಿ. ಹೆಗಡೆ ಮಹಾವಿದ್ಯಾಲಯ, ಬಾಲಕಿಯರ ಸರಕಾರಿ ಪ್ರೌಢಶಾಲೆ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ. 3 ಹಾಗೂ ತಾಲೂಕಾ ಆಸ್ಪತ್ರೆಗಳಿಗೆ ತೆರಳಿ ಅಲ್ಲಿನ ಆವರಣದಲ್ಲಿ ವೃಕ್ಷಾರೋಪಣ ಮಾಡಿದರು. ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ನೇತೃತ್ವದಲ್ಲಿ ಪದಾಧಿಕಾರಿಗಳಾದ ಚಂದ್ರಕಾಂತ ದುರ್ವೆ, ಮಹೇಶ ಆನೆಗುಂದಿ, ಸುಧಾಕರ ಕುಂಬಾರ, ವಿನೋದ ದೊಡ್ಡಮನಿ, ಶ್ರೀಶೈಲ ಮಠದೇವರು, ಈರಯ್ಯಾ ಹಿರೇಮಠ, ವಿಜಯ ಫಡ್ನಿಸ್, ಚಂದ್ರಕಾಂತ ಅರಸಿನಗೇರಿ, ಮಂಜುನಾಥ ಹೊಂಡದಕಟ್ಟಿ, ಕಾಂತು ನೆವಗೇರಿ, ಅಣ್ಣಪ್ಪಾ ಬೆಳಗಾಂವಕರ ಇದ್ದರು.
Leave a Comment