ಹಳಿಯಾಳ:-
ವಾಹನ ತಯಾರಿಕೆಯ ದಿಗ್ಗಜ ಟೊಯೊಟಾ ಕಿರ್ಲೋಸ್ಕರ ಮೊಟರ್ಸ್, ವಿವಿಧ ಡೀಲರ್ಸಗಳು ನಡೆಸಿದ ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ 70 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಗುಣಮಟ್ಟ ಸೇವೆಯನ್ನು ನೀಡುವಲ್ಲಿ ನುರಿತ ತಂತ್ರಜ್ಞರ ಅವಶ್ಯಕತೆಯಿದ್ದು, ದೇಶಪಾಂಡೆ ಖಾಸಗಿ ಕೈಗಾರಿಕಾ ಸಂಸ್ಥೆಯು ಟೊಯೊಟಾ ಕಿರ್ಲೋಸ್ಕರ ಮೊಟರ್ಸ್ನ ಜೊತೆಗೆ ಪರಸ್ಪರ ಒಡಂಬಡಿಕೆ ಮಾಡಿದ್ದು, ಮೆಕ್ಯಾನಿಕ್ ಮೋಟರ್ ವೆಹಿಕಲ್ , ಅಟೋಮೋಟಿವ್ ಬಾಡಿ ರೀಪೆರ್, ಅಟೋಮೋಟಿವ್ ಪೇಂಟ್ ರೀಪೆರ್ ಹಾಗೂ ವೆಲ್ಡರ್ ವಿಭಾಗದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಟೊಯೋಟಾದ ಅಧಿಕಾರಿ ಸತ್ಯಪ್ರಕಾಶ ತಿಳಿಸಿದ್ದಾರೆ. ಗೊವಾ ಮತ್ತು ಕರ್ನಾಟಕ ರಾಜ್ಯದ ಪ್ರಸಿದ್ಧ ಡಿಲರ್ಗಳಾದ ಶÀರಾಯು ಟೊಯೋಟಾ, ಗೋವಾ, ಪ್ಯಾಲಸ್ ಟೊಯೋಟಾ, ಮೈಸೂರ್, ಬಿಜೆಯಸ್ ಟೊಯೋಟಾ ಹೊಸಪೇಟೆ, ಶೋಧಾ ಟೊಯೋಟಾ, ಹುಬ್ಬಳ್ಳಿ, ವಿವಾ ಟೊಯೋಟಾ ಬೆಂಗಳೂರು, ನಂದಿ ಟೊಯೋಟಾ, ಬೆಂಗಳೂರು, ರವಿಂದು ಟೊಯೋಟಾ ಬೆಂಗಳೂರುನ ಅಧಿಕಾರಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
Leave a Comment