ಹೊನ್ನಾವರ:ಸಾಮಾಜಿಕ ಜಾಲತಾಣಗಳು ಕೋಮುಗಲಭೆ ಸೃಷ್ಟಿಸುವ, ಸಾಮಾಜಿಕ ಶಾಂತಿಗೆ ಭಂಗ ತರುತ್ತಿರುವುದು ಅಪಾಯದ ಬೆಳವಣಿಗೆ ಎಂದು ಹಿರಿಯ ಪತ್ರಕರ್ತ, ಸಾಧನಾ ಪ್ರಶಸ್ತಿ ಪುರಸ್ಕøತ ಗಂಗಾಧರ ಹಿರೇಗುತ್ತಿ ಕಳವಳ ವ್ಯಕ್ತಪಡಿಸಿದರು.
ಅವರು ತಾಲೂಕು ಪತ್ರಕರ್ತ ಸಂಘವು ಏರ್ಪಡಿಸಿದ್ದ ಸನ್ಮಾನ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಉದ್ಘಾಟಸಿ ಪತ್ರಕರ್ತರ ಸಂಘ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿದೇಶದಲ್ಲಿ ಹಸುವನ್ನು ಕಸಾಯಿಖಾನೆಯಲ್ಲಿ ವಧೆ ಮಾಡುವ ಚಿತ್ರಣವುಳ್ಳ, ಕ್ಲಿಪ್ಪಿಂಗ್‍ಗಳನ್ನು ನಮ್ಮಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರಿಸಿ ಕೋಮುಭಾವನೆ ಹರಡವ ಪರಿ, ಅದೇರೀತಿ ದೇಶದ ಬಿ.ಜೆ.ಪಿ ಪಕ್ಷದ ಮುಖಂಡರನ್ನು ಹೊರತುಪಡಿಸಿ ಉಳಿದೆಲ್ಲಾ ವಿರೋಧ ಪಕ್ಷದ ಮುಖಂಡರನ್ನು 11 ನಾಯಿಗಳಚಿತ್ರಣವುಳ್ಳ ಕ್ಲಿಪ್ಪಿಂಗ್‍ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವಿರೋಧ ಪಕ್ಷದ ಮುಖಂಡರುಗಳನ್ನು ಟೀಕಿಸುವ ರೀತಿಗಳು ಉಗ್ರವಾದಿ ಬಿನ್ಲಾಡೆನ್ ಮನಸ್ಥಿತಿಗೆ ಸಮಾನವಾದದು.ನಮ್ಮ ನಡುವೆ ಇರುವ ಮನುವಾದಿ ಮನಸ್ಸಿನ ಜನರ ಕೃತ್ಯವನ್ನು ಅರೆಯದ ಅಮಾಯಕರು. ಅಂತಹವರು ಕಳುಹಿಸಿದ ವಾಟ್ಸಪ್‍ಗಳನ್ನು ನೋಡಿ ಇತರರಿಗೆ ತಾವು ಪಾರ್ವಡ ಮಾಡುವುದು ದೇಶವು ಅಪಾಯದೆಡೆಗೆ ಸಾಗುತ್ತಿರುವ ಸಂದೇಶವನ್ನು ತೋರಿಸುತ್ತದೆ ಎಂದರು.
ತಾನು ಪತ್ರಕರ್ತನಾಗಿ ಪತ್ರಿಕಾ ಕ್ಷೇತ್ರಕ್ಕೆ ಆಗಮಿಸಿದ ಸಮಯಕ್ಕಿಂತಲೂ ಈಗ ನನ್ನ ಮನಸ್ಸು ಹೆಚ್ಚು ಆನಂದವಾಗಿದೆ. ಸಮಾಜವನ್ನು ನಾನು ನೋಡುವ ರೀತಿ ಬದಲಾಗಿದೆ. ಭಾಷೆ-ಜಾತಿ-ಧರ್ಮಗಳು ಮನುಷ್ಯ ಕಲ್ಪಿತ ಗೋಡೆಗಳು ಎಂಬ ಸತ್ಯವನ್ನು ಅರಿತು ನಮ್ಮ ಬಾಹ್ಯ ಮತ್ತು ಆಂತರಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಅಂದಾಗ ನಾವು ದುಡಿಯುತ್ತಿರುವ ಪತ್ರಿಕಾ ಕ್ಷೇತ್ರಕ್ಕೂ ನ್ಯಾಯ ದೊರಕಿಸಿದಂತಾಗುತ್ತದೆ ಎಂದರು.
ಭತ್ಕಳ ಡಿ.ಎಸ್.ಪಿ ವೆಲೆಂಟನ್ ಡಿಸೋಜಾ ಮಾತನಾಡಿ, ಸೈಬರ್ ಅಪರಾದಗಳ ಪತ್ತೆ ಸವಾಲಿನ ಕೆಲಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಕುರಿತು ಜಾತಿ, ಧರ್ಮಗಳ,ದೇಶದ ಭದ್ರತೆಯ ಕುರಿತು ಮಾತನಾಡುವಾಗ ಜಾಗೃತರಾಗಿರಬೇಕು.ಮಿತಿ ಮೀರಿದರೆ ಅದು ಅಪರಾಧವಾಗುತ್ತದೆ ಎಂದರು.
ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಯೋಗೇಶ ರಾಯ್ಕರ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಿ.ಹೆಗಡೆ ಮಾತನಾಡಿದರು.
ಎಚ್.ಎಂ.ಮಾರುತಿ ಸ್ವಾಗತಿಸಿದರು.ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣಮೂರ್ತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಮುರುಳೀಧರ ಗಾಯತೊಂಡೆ ವಂದಿಸಿದರು.
ಪತ್ರಕರ್ತರಾದ ಗಜು ಗೋಕರ್ಣ, ದಿನೇಶ ಹೆಗಡೆ, ಸತೀಶ ತಾಂಡೇಲ್, ಎಂ.ಎನ್.ಸುಬ್ರಹ್ಮಣ್ಯ, ಸುಧೀರ್ ಕಡ್ನೀರು, ಗೋಪಾಲ್ ಕೃಷ್ಣ ಭಟ್ಟ, ಜಿ.ಎಚ್.ನಾಯ್ಕ ಉಪಸ್ಥಿತರಿದ್ದರು.
Leave a Comment