ಹಳಿಯಾಳ:- ಓರ್ವ ಪುರುಷ ಹಾಗೂ ವಿವಾಹಿತ ಗರ್ಭೀಣಿ ಮಹಿಳೆಯೊರ್ವಳು ಕಾಣೆಯಾದ ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ 2 ಪ್ರತ್ಯೇಕ ದೂರುಗಳು ದಾಖಲಾಗಿವೆ ಎಂದು ಪಿಎಸ್ಐ ಆನಂದಮೂರ್ತಿ ತಿಳಿಸಿದ್ದಾರೆ. ಗರ್ಭೀಣಿ ನಾಪತ್ತೆ :- ಖಾನಾಪೂರ ತಾಲೂಕಿನ ಬಾಳಗುಂದ ಗ್ರಾಮದ 22 ವರ್ಷ ವಯಸ್ಸಿನ ಗೃಹಿಣಿ ಸಂಗೀತಾ ಭೈರು ತೊರವತ ಹಳಿಯಾಳದ ಖಾಸಗಿ ಆಸ್ಪತ್ರೆಯಿಂದ ಕಾಣೆಯಾಗಿರುವ ತುಂಬು ಗರ್ಭೀಣಿಯಾಗಿದ್ದಾಳೆ. ಖಾನಾಪೂರದವರಾದ ಇವರು ಪಟ್ಟಣದ “ಡಾ.ಆಶಾ ಕ್ಲಿನಿಕ್” ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು ಮಾವ ಸಕ್ಕು ಬಾಬು ತೋರವತ ತಿಂಡಿ ತರಲೆಂದು ಹೊರಗೆ ಹೋಗಿ ಬರುವಷ್ಟರಲ್ಲಿ ಗರ್ಭೀಣಿ ನಾಪತ್ತೆಯಾಗಿದ್ದಾಳೆ. ಅಕ್ಕ-ಪಕ್ಕ ಎಲ್ಲೆಡೆ ಸಾಕಷ್ಟು ಹುಡುಕಾಟ ನಡೆಸಿದರು ಆಕೆ ಪತ್ತೆಯಾಗದ್ದರಿಂದ ಆಕೆಯ ಮಾವ ಮನೆಯವರಿಗೆ ವಿಷಯ ತಿಳಿಸಿದ್ದು. ಅವರೆಲ್ಲರು ಹಳಿಯಾಳಕ್ಕೆ ಬಂದು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪುರುಷ ಕಾಣೆ:- ಇನ್ನೊಂದು ಪ್ರಕರಣದಲ್ಲಿ ಹಳಿಯಾಳದ ಗುಡ್ನಾಪೂರಗಲ್ಲಿ ನಿವಾಸಿ ಟೇಲರಿಂಗ್ ವೃತ್ತಿ ಮಾಡುತ್ತಿದ್ದ 32 ವರ್ಷ ವಯಸ್ಸಿನ ಮಲ್ಲಿಕಾರ್ಜುನ ಶಂಕರ ಉಪ್ಪಾರ ದಿ.12-06-2018ರಿಂದ ಕಾಣೆಯಾಗಿರುವ ಬಗ್ಗೆ ಆತನ ತಾಯಿ ಕಲಾವತಿ ಉಪ್ಪಾರ ದೂರು ದಾಖಲಿಸಿದ್ದಾರೆ. ಹಳಿಯಾಳದ ಅಂಗಡಿಯಲ್ಲಿ ಸರಿಯಾಗಿ ವ್ಯಾಪಾರ ಆಗುತ್ತಿಲ್ಲ ಬೇರೆಡೆ ಹೋಗಿ ಉದ್ಯೋಗ ಮಾಡಿ ಸಂಪಾದನೆ ಮಾಡಿಕೊಂಡು ಬರುವುದಾಗಿ ಹೇಳಿ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಹೋಗಿದ್ದು ಇವರೆಗೆ ದೂರವಾಣಿ ಕರೆಯು ಮಾಡದೆ ಸಂಬಂಧಿಕರ ಮನೆಗೂ ಹೊಗದೆ ನಾಪತ್ತೆಯಾಗಿದ್ದಾನೆಂದು ದೂರು ನೀಡಲಾಗಿದೆ ಎಂದು ತಿಳಿಸಿರುವ ಪಿಎಸ್ಐ ಅವರು ಇವರ ಬಗ್ಗೆ ಸುಳಿವು ದೊರೆತಲ್ಲಿ ಹಳಿಯಾಳ ಪೋಲಿಸ್ ಠಾಣೆ ದೂ. ಸಂಖ್ಯೆ 08284-220333, ಕಟ್ರೋಲ್ ರೂಮ್-0832-226550ಗೆ ಸಂಪರ್ಕಿಸುವಂತೆ ಕೊರಿದ್ದಾರೆ.
Leave a Comment