ಹಳಿಯಾಳ: ಹಳಿಯಾಳದಲ್ಲಿ ಭಾನುವಾರ ಬಿಟ್ಟು ಬಿಡದೆ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಭಾನುವಾರ ಹಳಿಯಾಳದಲ್ಲಿ ವಾರದ ಸಂತೆಯಾಗಿದ್ದರಿಂದ, ಸಂತೆಯೂ ಮಳೆಯಲ್ಲಿ ನೆನೆಯುವಂತಾಯಿತು ಅಲ್ಲದೇ ವ್ಯಾಪಾರಸ್ಥರು ಹಾನಿ ಅನುಭವಿಸಿದರು.
ಶನಿವಾರ ಸಾಯಂಕಾಲದಿಂದ ಪ್ರಾರಂಭವಾಗಿರುವ ಮಳೆ ರಾತ್ರಿ 1ಗಂಟೆಯ ನಂತರ ನಿರಂತರವಾಗಿ ಸುರಿಯಲಾರಂಭಿಸಿದೆ. ಭಾನುವಾರ ಬೆಳಿಗ್ಗೆಯಿಂದ ಭಾರಿ ಮಳೆ ಸುರಿದಿದ್ದು. ಕೆಲ ಕಾಲ ಮಾತ್ರ ಸಣ್ಣ ಪ್ರಮಾಣದ ಜಿನುಗು ಮಳೆಯಾಗಿದ್ದು ಹೊರತು ಪಡಿಸಿದರೇ ಭಾನುವಾರ ಹಳಿಯಾಳ ಭಾಗದಲ್ಲಿ ಉತ್ತಮ ವರ್ಷಧಾರೆಯಾಗಿದೆ.
ಹಳಿಯಾಳದಲ್ಲಿ ಭಾನುವಾರ ವಾರದ ಸಂತೆಯಾಗಿದ್ದು ಸುತ್ತಲು ಹತ್ತಾರು ಹಳ್ಳಿಗಳಿಂದ ಹಾಗೂ ವಿವಿಧ ತಾಲೂಕುಗಳಿಂದ ವ್ಯಾಪಾರಸ್ಥರು ಪಟ್ಟಣಕ್ಕೆ ಆಗಮಿಸಿ ವ್ಯಾಪಾರ ನಡೆಸುತ್ತಾರೆ. ಆದರೇ ಭಾನುವಾರ ನಿರಂತರ ಮಳೆ ಸುರಿದ ಪರಿಣಾಮ ಹೆಚ್ಚಿನ ಜನತೆ ಮಾರುಕಟ್ಟೆಯತ್ತ ಹೆಜ್ಜೆ ಇಡದೆ ಇರುವುದರಿಂದ ವ್ಯಾಪಾರ ಕ್ಷೀಣಿಸಿ. ಮಧ್ಯಾಹ್ನದ ಬಳಿಕ ವ್ಯಾಪಾರಸ್ಥರು ತಾವು ತಂದ ಕಾಯಿ-ಪಲ್ಯೆ ಪದಾರ್ಥಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಬೇಕಾದ ಪರಿಸ್ಥಿತಿ ಉಂಟಾಯಿತು. ಪಟ್ಟಣದ ಸಂತೆಯ ನೂರಾರು ಮೀಟರ್ ಪ್ರದೇಶವೆಲ್ಲವೂ ಹಳದಿ ತಾಡಪತ್ರಿಗಳಿಂದ ಕಂಗೊಳಿಸುತ್ತಿದ್ದ ದೃಶ್ಯ ಕಂಡು ಬಂದಿತು.
Leave a Comment