ಹಳಿಯಾಳ:- ಜಿಲ್ಲೆಯಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಗಳ ಚುನಾವಣೆ ನಡೆಯುತ್ತಿದ್ದು. ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂಧರ್ಬದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ನೇಮಕಾತಿ ಪ್ರಕ್ರೀಯೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗುವ ಕಾರಣ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಳಿಕ ನೇಮಕಾತಿ ಪ್ರಕ್ರೀಯೆ ಕಾರ್ಯ ನಡೆಸುವಂತೆ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ರಾಜ್ಯ ಸಮೀತಿ ಅಧ್ಯಕ್ಷ ಹರೀಶ ನಾಯ್ಕ ಜಿಲ್ಲಾಧಿಕಾರಿಯಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ನೇಮಕಾತಿ ಪ್ರಕ್ರೀಯೆ ನಡೆದಿದೆ. ದಿ.01-08-2018 ರಂದು ಜಿಲ್ಲಾಧಿಕರಿಗಳ ಕಛೇರಿಯ ಸತ್ತೋಲೆ 15 ದಿನಗಳ ಒಳಗೆ ಆಕ್ಷೇಪಣೆ ಇದಲ್ಲಿ ತಿಳಿಸಲು ಹೇಳಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಬೇಕೆಂದು ಸರಕಾರ ಅಧಿಸೂಚನೆ ಹೊರಡಿಸಿದೆ. ಮಹಾನಗರ ಪಾಲಿಕೆ ಮತ್ತು ನಗರ ಸಭೆಗಳಲ್ಲಿ ಕೆಲಸ ಮಾಡುವ ಒಟ್ಟೂ ಕಾರ್ಮಿಕರಲ್ಲಿ ಪ್ರತಿಶತ 50% ರಷ್ಟು ಮತ್ತು ಪುರಸಭೆ ಪಟ್ಟಣ ಪಂಚಾಯತಿಯಲ್ಲಿಕೆಲಸ ಮಾಡುವ ಪೌರಕಾರ್ಮಿಕರು ಪ್ರತಿಶತ 100% ಕಾಯಂ ಆಗಬೇಕೆಂದು ಹೇಳಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಕೆಲಸ ಮಾಡುವ ನೌಕರರ ಸಂಖ್ಯೆ ಮತ್ತು ಪ್ರಕಟಿತ ಸಂಖ್ಯೆ ವ್ಯತ್ಯಾಸ ಮಾಡಿದೆ ಎಂದಿದ್ದಾರೆ.
ನೇರ ನೇಮಕಾತಿಗೆ 45 ವರ್ಷದ ಒಳಗಿನವರು ಕನ್ನಡ ಮಾತನಾಡಬಲ್ಲವರು 2 ವರ್ಷಕ್ಕೆ ಹೆಚ್ಚು ಸೇವೆಸಲ್ಲಿದ ಕಾರ್ಮಿಕರು ನೇಮಕಾತಿಗೆ ಅರ್ಹರಾಗಿರುತ್ತಾರೆ. ನೇರ ನೇಮಕಾತಿಯಲ್ಲಿ ಮೀಸಲಾತಿ ಪಾಲಿಸಬೇಕಾಗಿದೆ ದಲಿತ ವರ್ಗದವರೆ ತಲಾತಲಾಂತರದಿಂದಲೂ ಸ್ವಚ್ಚತಾ ಕೆಲಸ ಮಾಡಿಕೊಂಡು ಬಂದಿರುವುದು ಗಮನಾರ್ಹ ಮೀಸಲಾತಿ ಮತ್ತು 45 ವರ್ಷ ದಾಟಿದ ಹಿನ್ನಲೆಯಲ್ಲಿ ಹಲವರು ನೇಮಕತಿಯಿಂದ ವಂಚಿತರಾಗಿರುತ್ತಾರೆ. ಅಂತಹರವನ್ನು ನೇರ ವೇತನ ಪಾವತಿ ಪಟ್ಟಿಗೆ ಸೇರಿಸಿಬೇಕೆಂದು ಸರಕಾರ ಅಧಿಸೂಚನೆ ಹೇಳಿದೆ.
ಜಿಲ್ಲೆಯ ಬಹುತೇಕ ನಗರ ಸ್ಥಳಿಯ ಸಂಸ್ಥೆಗಳು ನೇಮಕಾತಿ ಪ್ರಕ್ರೀಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡಿದ ಮಾನದಂಡ ಇಲ್ಲದವರನ್ನು ಆಯ್ಕೆ ಮಾಡಲಾಗಿದೆ. ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರವವರನ್ನು ಪೌರಕಾರ್ಮಿಕರಲ್ಲಾ ಎಂದು ಜಿಲ್ಲಾಧಿಕಾರಿಗಳಿಗೆ ವರದಿ ಒಪ್ಪಿಸಿದೆ. ನೇಮಕಾತಿ ಆಗದ ಪೌರಕಾರ್ಮಿಕರಿಗೆ ನೇರ ವೇತನಕೊಡಬೇಕೆಂದು ಸರಕಾರ ಆದೇಶ ನೀಡಿದರೂ ಬುದ್ದೀಪೂರ್ವಕವಾಗಿ ಪೌರಕಾರ್ಮಿಕರನ್ನು ಕೈಬಿಟ್ಟು ಗುತ್ತಿಗೆ ಪದ್ದತಿ ಜಾರಿಗೆ ಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಹರೀಶ ನಾಯ್ಕ ಚುನಾವಣೆಯ ಬಳಿಕ ಇನ್ನೊಮ್ಮೆ ಪರಿಶೀಲಿಸಿ ಬಳಿಕ ನೇಮಕಾತಿ ಪ್ರಕ್ರಿಯೇ ನಡೆಸುವಂತೆ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.
Leave a Comment