ಹಳಿಯಾಳ:- ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಸೋಮವಾರ ಮಿನಿ ವಿಧಾನಸೌಧದಲ್ಲಿ ನಡೆದು, 2 ಅಭ್ಯರ್ಥಿಗಳು ಹಾಗೂ 2 ನಾಮಪತ್ರಗಳು ತೀರಸ್ಕøತವಾಗಿದ್ದು ಸದ್ಯ 25 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿವೆ.
ವಿವಿಧ ಪಕ್ಷಗಳು ಹಾಗೂ ಪಕ್ಷೇತರರಾಗಿ ಒಟ್ಟೂ 77 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು. ಇದರಲ್ಲಿ ವಾರ್ಡ ನಂ-3 ರಲ್ಲಿ ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಫಯಾಜಅಹಮ್ಮದ ರಫಿಕ ಕೋಟುರ ನಾಮಪತ್ರ ತೀರಸ್ಕøತವಾಗಿದೆ. ಚುನಾವಣೆ ಸ್ಪರ್ದಿಸಲು ವಯಸ್ಸಿನ ಮೀತಿ 21 ಇದೆ. ಆದರೇ ಫಯಾಜ 19 ವರ್ಷ ವಯಸ್ಸಿನವನಾಗಿದ್ದು ಚುನಾವಣೆ ಸ್ಪರ್ದಿಸಲು ವಯಸ್ಸಿನ ಮೀತಿ ಕಡಿಮೆ ಇರುವ ಕಾರಣ ನಾಮಪತ್ರವನ್ನು ತೀರಸ್ಕøತಗೊಳಿಸಲಾಗಿದೆ ಎಂದು ಚುನಾವಣಾಧಿ ವಿದ್ಯಾಧರ ಗುಳಗುಳಿ ತಿಳಿಸಿದ್ದಾರೆ.
ವಾರ್ಡ ನಂ-10 ರಲ್ಲಿ ಕಾಂಗ್ರೇಸ್ನಿಂದ ನಾಮಪತ್ರ ಸಲ್ಲಿಸಿದ್ದ ನಾಮದೇವ ಮಿಂಡೋಳ್ಕರಗೆ ಕಾಂಗ್ರೇಸ್ ಪಕ್ಷದಿಂದ ಬಿ-ಫಾರ್ಮ ದೊರಕದೆ ಇರುವುದರಿಂದ ಅವರ ನಾಮಪತ್ರ ತೀರಸ್ಕøತವಾಗಿದೆ. ಇಲ್ಲಿ ಅಭ್ಯರ್ಥಿಯು ತೀರಸ್ಕøತವಾದಂತೆ.
ವಾರ್ಡ ನಂ-12 ರಲ್ಲಿ ಜೆಡಿಎಸ್ ಹಾಗೂ ಕಾಂಗ್ರೇಸ್ 2 ಪಕ್ಷದಿಂದ ಶಬನಾ ಅಂಕೋಲೆಕರ ನಾಮಪತ್ರ ಸಲ್ಲಿಸಿದ್ದರು. ಆದರೇ ಕಾಂಗ್ರೇಸ್ ಪಕ್ಷದಿಂದ ಬಿ-ಫಾರ್ಮ ದೊರಕದೆ ಇರುವುದರಿಂದ ಅವರ ನಾಮಪತ್ರ ತೀರಸ್ಕøತವಾಗಿದೆ. ಆದರೇ ಜೆಡಿಎಸ್ನಿಂದ ಬಿಫಾರ್ಮ ದೊರಕಿದ್ದು ಅಭ್ಯರ್ಥಿ ಕಣದಲ್ಲಿ ಉಳಿದಿದ್ದಾರೆ.
ವಾರ್ಡ ನಂ-20ರಲ್ಲಿ ಕಾಂಗ್ರೇಸ್ ಪಕ್ಷದಿಂದ ಹಾಗೂ ಪಕ್ಷೇತರನಾಗಿ 2 ನಾಮಪತ್ರ ಸಲ್ಲಿಸಿದ್ದ ಫಾರುಕ್ ಬಾಳೆಕುಂದ್ರಿಯವರಿಗೆ ಕಾಂಗ್ರೇಸ್ ಪಕ್ಷದ ಬಿ-ಫಾರ್ಮ ಸಿಗದೆ ಇರುವುದರಿಂದ ನಾಮಪತ್ರ ತೀರಸ್ಕøತವಾಗಿದೆ. ಆದರೇ ಪಕ್ಷೇತರನಾಗಿ ಬಾಳೆಕುಂದ್ರಿಯ ನಾಮಪತ್ರ ಸ್ವೀಕೃತವಾಗಿದೆ.
ಇನ್ನೂ ದಿ.23 ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಹಿಂಪಡೆಯಲು ಕಾಲಾವಕಾಶವಿದೆ ಎಂದು ಅಧಿಕಾರಿ ವಿದ್ಯಾಧರ ಗುಳಗುಳಿ ತಿಳಿಸಿದ್ದಾರೆ.
Leave a Comment