ಹಳಿಯಾಳ: ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ, ಕಳೆದ ವರ್ಷ ನುರಿಸಿದ ಪ್ರತಿ ಟನ್ ಕಬ್ಬಿನ ಬಾಕಿ ಹಣ 305 ರೂಪಾಯಿಗಳನ್ನು ರೈತರಿಗೆ ನೀಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರ ರೈತರು ದಿ.6ರಿಂದ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ 14 ದಿನಗಳನ್ನು ಪೂರೈಸಿದ್ದು. ನ್ಯಾಯ ಸಿಗುವವರೆಗೆ ಧರಣಿ ನಿಲ್ಲುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಕಳೆದ 14 ದಿನಗಳಿಂದ ಕಬ್ಬು ಬೆಳೆಗಾರ ರೈತರು ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಈವರೆಗೆ ಕಾರ್ಖಾನೆಯವರಾಗಲಿ, ತಾಲೂಕಾಡಳಿತ, ಜನಪ್ರತಿನಿಧಿಗಳಾಗಲಿ ಅಥವಾ ಜಿಲ್ಲಾಡಳಿತವಾಗಲಿ ಗಮನ ಹರಿಸದೆ. ಸೌಜನ್ಯಕ್ಕೂ ತಮ್ಮನ್ನು ಭೆಟಿಯಾಗಿಲ್ಲ ಎಂದು ರೈತರು ತಮ್ಮ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಸಿಎಂ ಬುಲಾವ್:- ರೈತರು ಪ್ರಾರಂಭಿಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರ ಶಾಂತಕುಮಾರ ಹಳಿಯಾಳ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರ ಸಮಸ್ಯೆಯ ಬಗ್ಗೆ ಸಿಎಂ ಕುಮಾರಸ್ವಾಮಿಯವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ಅದರಂತೆ ಅವರು ಸಿಎಂ ಅವರ ಬಳಿ ರೈತರ ಸಮಸ್ಯೆಯನ್ನು ವಿವರಿಸಿದ್ದು ದಿ.20 ಸೋಮವಾರ ಮಧ್ಯಾಹ್ನ 4 ಗಂಟೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರನ್ನು ಭೇಟಿಯಾಗಲು ಕಾಲಾವಕಾಶ ನೀಡಿದ್ದಾರೆಂದು ತಿಳಿಸಿರುವ ಹಳಿಯಾಳ ಕಬ್ಬು ಬೆಳೆಗಾರ ಸಂಘದ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಹಳಿಯಾಳ, ಕಲಘಟಗಿ, ಮುಂಡಗೋಡ, ಅಳ್ನಾವರ, ಕಿತ್ತೂರು ಹೀಗೆ ಹಳಿಯಾಳ ಕಾರ್ಖಾನೆ ವ್ಯಾಪ್ತಿಯ ಪ್ರಮುಖ ರೈತ ಮುಖಂಡರನ್ನೊಳಗೊಂಡ ನಿಯೋಗ ಭಾನುವಾರ ರಾತ್ರಿಯೇ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದೆ ಎಂದು ಮಾಹಿತಿ ನೀಡಿದರು.
ಸಿಎಂ ಭೇಟಿಗೂ ತೆರಳುತ್ತಿದ್ದರು ಸಹಿತ ಹಳಿಯಾಳದ ಕಾರ್ಖಾನೆ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮಾತ್ರ ನಿಲ್ಲುವುದಿಲ್ಲ ರೈತರ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಮುಂದುವರೆಯಲಿದ್ದು. ಪ್ರತಿದಿನ ತಾಲೂಕಿನ 2-3 ಹಳ್ಳಿಗಳ ರೈತರು ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಕಾಜಗಾರ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಎಮ್ ಘಾಡಿ, ಅಶೋಕ ಮೇಟಿ, ಯುಕೆ ಬೋಬಾಟಿ, ಅಜೋಬಾ ಕರಂಜೆಕರ, ಕುಮಾರ ಬೋಬಾಟಿ ಇತರರು ಇದ್ದರು.
Leave a Comment