ಹಳಿಯಾಳ:- ದಿ.29 ರಂದು ಬೆಳಿಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಹಳಿಯಾಳ ಪುರಸಭೆಯ 23 ವಾರ್ಡಗಳಲ್ಲಿ ಅಭ್ಯರ್ಥಿಗಳ ಪರ ಅವರ ಪಕ್ಷಗಳ ಮುಖಂಡರು ಮಂಗಳವಾರದಂದು ಭರ್ಜರಿ ಮತಯಾಚನೆಯಲ್ಲಿ ತೊಡಗಿದ್ದು ಕಂಡು ಬಂದಿತು.
ರಾಜ್ಯ ರಾಜಕಾರಣದಲ್ಲಿ ತನ್ನದೆ ಛಾಪು ಮೂಡಿಸಿರುವ ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿ ಹಳಿಯಾಳ ಪುರಸಭೆ ಚುನಾವಣೆಯ ಅಖಾಡವು ರಂಗೇರಿದ್ದು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷದಿಂದ 23 ವಾರ್ಡಗಳಿಗಾಗಿ ತಲಾ 23 ಅಭ್ಯರ್ಥಿಗಳು. ಜೆಡಿಎಸ್ ಪಕ್ಷ ಕೇವಲ 15 ಸೀಟುಗಳಿಗೆ ಸಿಮಿತವಾಗಿದ್ದರೇ, 9ಜನ ಪಕ್ಷೇತರ ಅಭ್ಯರ್ಥಿಗಳು ಹೀಗೆ 70 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ತಮ್ಮ ತಮ್ಮ ವಾರ್ಡಗಳಲ್ಲಿ ಭರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಕಾಂಗ್ರೇಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಪಟ್ಟಣದಲ್ಲಿ ಸ್ಟಾರ್ ಪ್ರಚಾರಕರಾಗಿದ್ದರೇ, ಬಿಜೆಪಿಯಿಂದ ಮಾಜಿ ಶಾಸಕ ಸುನೀಲ್ ಹೆಗಡೆ, ಮಾಜಿ ವಿಧಾನ ಪರಿಷತ್ ಸದಸ್ಯ ವಿಡಿ ಹೆಗಡೆ ಸ್ಟಾರ್ ಪ್ರಚಾರಕರಾಗಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಣೆಯಲ್ಲಿ ತೊಡಗಿದ್ದಾರೆ.
ಪುರಸಭೆ ಚುನಾವಣೆ ಬಿಜೆಪಿ ಮತ್ತು ಕಾಂಗ್ರೇಸ್ ನಡುವೆ ನೇರ ಸ್ಪರ್ದೆ ನಡೆಯುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ದಿಸಿ ಠೇವಣಿ ಕಳೆದುಕೊಂಡ ಕೆ.ಆರ್.ರಮೇಶ ಅಂದಿನಿಂದ ಹಳಿಯಾಳದಲ್ಲಿ ಕಾಣಿಸದೆ ಇರುವುದು ಜೆಡಿಎಸ್ ಪಕ್ಷ ಹೆಸರಿಗೆ ಎನ್ನುವಂತೆ ಅಭ್ಯರ್ಥಿಗಳನ್ನು ನಿಲ್ಲಿಸಿದೆ ಎಂಬ ಮಾತು ಹಳಿಯಾಳದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಜೆಡಿಎಸ್ ಹಳಿಯಾಳ ಕ್ಷೇತ್ರಾಧ್ಯಕ್ಷ ಎನ್.ಎಸ್.ಜಿವೋಜಿ ಸದ್ಯ ಈ ಚುನಾವಣೆಯ ಸಾರಥ್ಯ ವಹಿಸಿದ್ದಾರೆ ಆದರೇ ಜೆಡಿಎಸ್ ಹಾಗೂ ಪಕ್ಷೇತರರು ಯಾವ ಲೆಕ್ಕಕ್ಕೂ ಇಲ್ಲದೇ ಪುರಸಭೆ ಬಿಗ್ಫೈಟ್ ಮಾತ್ರ ಬಿಜೆಪಿ ಹಾಗೂ ಕಾಂಗ್ರೇಸ್ ನಡುವೆ ಎನ್ನುವುದು ಪಟ್ಟಣಿಗರ ಮಾತು.
Leave a Comment