ಹಳಿಯಾಳ:- ಪಟ್ಟಣದ ಕೆಲವು ಭಾಗದಲ್ಲಿ ಬಕ್ರಿದ್ ಹಬ್ಬವನ್ನು ಸರಳವಾಗಿ ಆಚರಿಸಿರುವ ಮುಸ್ಲಿಂ ಸಮುದಾಯದವರು ಕೊಡಗಿನ ನೆರೆ ಸಂತ್ರಸ್ಥರಿಗೆ 96,701 ರೂ. ಪರಿಹಾರ ನಿಧಿ ಸಂಗ್ರಹಿಸಿದ್ದು ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾಗಿ ಜಮಿಯತ್ ಉಲಮಾ ಸಂಸ್ಥೆಯ ಜಿಲ್ಲಾದ್ಯಕ್ಷ ಮುಪ್ತಿ ಫಯಾಜ ಅಹ್ಮದ್ ಕಾಸ್ಮಿ ತಿಳಿಸಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸತತ ಮಳೆಯಿಂದ ಜಲಪ್ರಳಯ ಉಂಟಾಗಿ ಮನೆಗಳನ್ನು ,ಆಸ್ತಿಪಾಸ್ತಿಗಳನ್ನು ಹಾಗೂ ಅನೇಕರು ತಮ್ಮ ಕುಟುಂಬಗಳನ್ನು ಕಳೆದುಕೊಂಡಿದ್ದು ಅವರಿಗೆ ಬೇಗನೆ ನೆಲೆ ಹಾಗೂ ಪರಿಹಾರ ಸಿಗುವಂತಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದಿರುವ ಅವರು ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ಜನತೆಗಾಗಿ ಜಮಿಯತ್ ಉಲಮಾ ಸಂಘಟನೆಯಿಂದ ಮತ್ತು ಹಳಿಯಾಳ ಮುಸ್ಲಿಂ ಸಮುದಾಯದ ವತಿಯಿಂದ ನೆರೆ ಸಂತ್ರಸ್ಥಿರಿಗಾಗಿ ಸುಮಾರು 96,701 ರೂಪಾಯಿಗಳನ್ನು ಪರಿಹಾರ ನಿಧಿ ಸಂಗ್ರಹಿಸಲಾಗಿದ್ದು ರಾಜ್ಯ ಸಂಘಟನೆಗೆ ಈ ಪರಿಹಾರ ನಿಧಿಯನ್ನು ಹಸ್ತಾಂತರಿಸಲಾಗಿದ್ದು ಅವರು ಪರಿಹಾರ ವಿತರಣೆ ಮಾಡಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾದ್ಯಕ್ಷ ಮುಪ್ತಿ ಮುಸ್ತಾಕ ರಸುಲ್ ನಾಯಕ ನದವಿ, ಮೌಲಾನ ನಸರುಲ್ಲಾ ಕಾಸ್ಮಿ, ಸದಸ್ಯರಾದ ಹಾಫಿದ ರಿಯಾಜ ಅಹ್ಮದ, ಹಾಪೀಜ ಅಶರಫ್ ದಡವಾಡ, ಸುಭಾನಿ ಹುಬ್ಬಳ್ಳಿ, ಹಾಜಿ ಖಯಾಂ ಮುಗದ, ಗುಲಾಭಷಾ ಲತಿಫನವರ, ಅಲಿಂ ಬಸರಿಕಟ್ಟಿ, ಅಬ್ದುಲ್ ಸತ್ತಾರ ಇತರರು ಇದ್ದರು.
Leave a Comment