ಹಳಿಯಾಳ:
ಕಾಮೇಲ್ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ವಾರ್ಡ ನಂ-15ರ ಮತಗಟ್ಟೆ ಸಂಖ್ಯೆ 15ರಲ್ಲಿ ಮಾಜಿ ಶಾಸಕ, ಬಿಜೆಪಿ ಮುಖಂಡ ಸುನೀಲ್ ಹೆಗಡೆ, ಮಾಜಿ ವಿಧಾನ ಪರಿಷತ್ ಸದಸ್ಯ ವಿಡಿ ಹೆಗಡೆ ಹಾಗೂ ಕುಟುಂಬದವರು ಮತದಾನ ಮಾಡಿದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾಧ್ಯಮದವರೊಂದಿಗೆ ಮಾತನಾಡಿ ಕಳೆದ ಪುರಸಭೆಯ ಕಾಂಗ್ರೇಸ್ ಆಡಳಿತ ಮಂಡಳಿಯ ಭ್ರಷ್ಟಾಚಾರವನ್ನು ಕಣ್ಣಾರೆ ಕಂಡು ರೋಸಿ ಹೊಗಿರುವ ಜನತೆ ಈ ಬಾರಿ ಕಾಂಗ್ರೇಸ್ನ್ನು ತೀರಸ್ಕರಿಸಲಿದ್ದು. ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದು ಸುಮಾರು 18ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಪ್ರಥಮ ಬಾರಿಗೆ ಹಳಿಯಾಳ ಪುರಸಭೆಯಲ್ಲಿ ಬಿಜೆಪಿಯ ಕಮಲ ಅರಳಿಸುವುದು ಶತಸಿದ್ದ ಎಂದು ಭವಿಷ್ಯ ನುಡಿದರು.
ಪುರಸಭೆಯ 23 ವಾರ್ಡಗಳಿಗೆ ಸಂಬಂಧಿಸಿದಂತೆ 23 ಮತಗಟ್ಟೆಗಳನ್ನು ತೆರೆಯಲಾಗಿತ್ತು. 115 ಸಿಬ್ಬಂದಿಗಳು ಚುನಾವಣೆ ಕರ್ತವ್ಯ ನಿಭಾಯಿಸಿದರೇ, ಸಿಪಿಐ, ಪಿಎಸ್ಐ ಸೇರಿದಂತೆ 120 ಪೋಲಿಸ್ ಇಲಾಖೆ ಸಿಬ್ಬಂದಿಗಳು ಬಿಗಿ ಪೋಲಿಸ್ ಬಂದೋಬಸ್ತ ನೀಡಿ ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಂಡರು
Leave a Comment