ಹಳಿಯಾಳ:- ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಬೆಳಿಗ್ಗೆಯಿಂದ ತುರುಸಿನ ಮತದಾನ ನಡೆದಿದೆ. ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಘಟಾನುಘಟಿ ನಾಯಕರು ಹಳಿಯಾಳದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಪಟ್ಟಣದ ಸರ್ದಾರ್ ವಲ್ಲಭಭಾಯಿ ಉದ್ಯಾನವದಲ್ಲಿಯ ವಾರ್ಡನಂ-14 ರ ಮತಗಟ್ಟೆ ಸಂಖ್ಯೆ 14 ರಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಪತ್ನಿ ರಾಧಾ, ಮಕ್ಕಳಾದ ಪ್ರಶಾಂತ ಹಾಗೂ ಪ್ರಸಾದ ಮತದಾನ ಮಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ದೇಶಪಾಂಡೆ ರಾಜ್ಯದಲ್ಲಿಯೂ ಕಾಂಗ್ರೇಸ್ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಅಲ್ಲದೇ ಹಳಿಯಾಳದಲ್ಲೂ ಬಹುಮತ ಸಾಧಿಸಿ ಮತ್ತೇ ಪುರಸಭೆಯ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಶಂಕರ ಬೆಳಗಾಂವಕರ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಅಧಿಕಾರ ಅನುಭವಿಸಿದವರು ಈ ರೀತಿ ವರ್ತನೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Leave a Comment