ಹಳಿಯಾಳ:- ಹಳಿಯಾಳ ಪುರಸಭೆ 23 ವಾರ್ಡಗಳಿಗೆ ಚುನಾವಣೆಗೆ ಅಗಸ್ಟ 31 ರಂದು ಮತದಾನವಾದ ಬಳಿಕ ಪಟ್ಟಣದಲ್ಲಿ ಇಬ್ಬರು ಕಾಂಗ್ರೇಸ್ ಅಭ್ಯರ್ಥಿಗಳ ಬೆಂಗಲಿಗರು ಅವರು ಆಯ್ಕೆಯಾಗಿಯೇ ಬಿಟ್ಟರು ಎನ್ನುವಂತೆ ಫಲಿತಾಂಶದ ಮುನ್ನವೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಪಟ್ಟಣದಲ್ಲಿ ಎಲ್ಲರನ್ನೂ ಹುಬ್ಬೆರುವಂತೆ ಮಾಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಾರ್ಡ ನಂ-17, ಯಲ್ಲಾಪೂರ ನಾಕಾ ಬಳಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪುರಸಭೆಯ ಹಿರಿಯ ಸದಸ್ಯ ಸುರೇಶ ತಳವಾರ ಅವರ ಬೆಂಬಲಿಗರು ಹಾಗೂ ವಾರ್ಡ ನಂ-3 ಗೌಳಿಗಲ್ಲಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ನವೀನ ಕಾಟಕರ ಬೆಂಬಲಿಗರು ಅವರು ವಿಜಯ ಸಾಧಿಸಿಯೇ ಬಿಟ್ಟರು ಎನ್ನುವಂತೆ ಫಲಿತಾಂಶದ ಮುನ್ನವೇ ಪಟಾಕಿ ಸಿಡಿಸಿದ್ದು. ವಿರೋಧಿಗಳನ್ನು ಹಾಗೂ ಪಟ್ಟಣದ ಜನತೆಯನ್ನು ಹುಬ್ಬೆರಿಸುವಂತೆ ಮಾಡಿದ್ದು. ಈ ವಿಷಯ ಪಟ್ಟಣದಲ್ಲಿ ಕಾಡ್ಗಿಚ್ಚಿನಂತೆ ಹರಡಿ ಎಲ್ಲೆಂದರಲ್ಲಿ ಈ ಬಗ್ಗೆಯೇ ಚರ್ಚೆ ನಡೆಯುತ್ತಿರುವುದು ಕಂಡು ಬರುತ್ತಿದೆ.
ದಿ.3 ಸೊಮವಾರದಂದು ಪಟ್ಟಣದ ಧಾರವಾಡ ರಸ್ತೆಯಲ್ಲಿರುವ ಶಿವಾಜಿ ಮಹಾವಿದ್ಯಾಲಯದಲ್ಲಿ ಹಳಿಯಾಳ ಪುರಸಭೆ ಹಾಗೂ ದಾಂಡೇಲಿ ನಗರಸಭೆಯ ಚುನಾವಣೆಯ ಮತ ಏಣಿಕೆ ಕಾರ್ಯ ಬೆಳಿಗ್ಗೆ 7ರಿಂದ ಆರಂವಾಗಲಿದ್ದು ಮಧ್ಯಾಹ್ನ 12 ಗಂಟೆಯ ಒಳಗೆ ಹಳಿಯಾಳದ 23 ಹಾಗೂ ದಾಂಡೇಲಿಯ 31 ವಾರ್ಡಗಳ ಫಲಿತಾಂಶ ಹೋರಬಿಳಲಿದೆ.
ಶೀವಾಜಿ ವಿದ್ಯಾಲಯದಲ್ಲಿಯ ಸ್ಟ್ರಾಂಗ್ ರೂಮನಲ್ಲಿ ಬೀಗಿ ಪೋಲಿಸ್ ಬಂದೋಬಸ್ತನಲ್ಲಿ ಮತಪೆಟ್ಟಿಗೆಗಳನ್ನು ಇರಿಸಲಾಗಿದ್ದು. ಎಲ್ಲರ ಚಿತ್ತ ಫಲಿತಾಂಶದತ್ತ ಇರುವುದು ಸೋಮವಾರ ಫಲಿತಾಂಶ ಘೋಷಣೆಯ ಬಳಿಕ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೋಲಿಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ನೂರಾರು ಪೋಲಿಸರು ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
Leave a Comment