ಹಳಿಯಾಳ: ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಆ.31 ರಂದು ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದ್ದು, 14 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕಾಂಗ್ರೇಸ್ ಅತಿದೊಡ್ಡ ಪಕ್ಷವಾಗಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಶೂನ್ಯದಿಂದ 7 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಿಜೆಪಿ ಪಕ್ಷ ಪ್ರಥಮ ಬಾರಿಗೆ ಪುರಸಭೆ ಪ್ರವೇಶಿಸಿದೆ. ಹೀನಾಯ ಸೋಲುಂಡಿರುವ ಜೆಡಿಎಸ್ ಪಕ್ಷ ಒಂದು ಸ್ಥಾನ ಹಾಗೂ ಒರ್ವ ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬಿರಿದ್ದಾರೆ.
ಕಾಂಗ್ರೇಸ್ ಹಾಗೂ ಬಿಜೆಪಿ ತಲಾ 23 ಅಭ್ಯರ್ಥಿಗಳು, ಪಕ್ಷೇತರ 9 ಹಾಗೂ ಜೆಡಿಎಸ್ 15 ಅಭ್ಯರ್ಥಿಗಳು ಹೀಗೆ 70 ಅಭ್ಯರ್ಥಿಗಳು ಕಣದಲ್ಲಿದ್ದರು.
ಹಳಿಯಾಳ ಪುರಸಭೆಗೆ ಚುನಾವಣಾ ಆಯ್ಕೆಯಾದವರು :-
ವಾರ್ಡ ನಂ-1 ಚಂದ್ರಕಾಂತ ಜಿ ಕಮ್ಮಾರ-ಬಿಜೆಪಿ(ಗೆಲುವು) ಪಡೆದ ಮತಗಳು 482 ಸಮೀಪಸ್ಪರ್ದಿ ಕಾಂಗ್ರೇಸ್ನ ಶ್ರೀನಿವಾಸ ಬಡಿಗೇರ(ಸೋಲು)-263 ಗೆಲುವಿನ ಅಂತರ 219.

ವಾರ್ಡ-2- ಯಲ್ಲಪ್ಪಾ ಕೆಸರೆಕರ-ಕಾಂಗ್ರೇಸ್(ಗೆಲುವು) 314 ಹಾಗೂ ಶಂಕರ ಪಟ್ಟೇಕರ-ಬಿಜೆಪಿ(ಸೋಲು)267 ಅಂತರ 47.

ವಾರ್ಡ ನಂ-3- ಕಾಂಗ್ರೇಸ್ನ ನವೀನ ಕಾಟಕರ 350 ಮತ(ಗೆಲುವು) ಪ್ರತಿಸ್ಪರ್ದಿ ಬಿಜೆಪಿಯ ನಾಗರಾಜ ಯಲ್ಲಪ್ಪಾ ಸಾಣಿಕೊಪ್ಪ-205(ಸೋಲು)-ಅಂತರ 145.

ವಾರ್ಡ ನಂ-4, ಪ್ರಭಾಕರ ಗಜಾಕೋಶ-ಕಾಂಗ್ರೇಸ್-284(ಗೆಲುವು), ಮಂಜುನಾಥ ಗಜಾಕೋಶ-ಬಿಜೆಪಿ(ಸೋಲು)280 ಸೋಲು- ಅಂತರ 4

ವಾರ್ಡ ನಂ-5, ಸಂತೋಷ ಘಟಕಾಂಬಳೆ-ಬಿಜೆಪಿ(ಗೆಲುವು)-203 ಎದುರಾಳಿ ಸಿದ್ರಾಮಪ್ಪಾ ದಾನಪ್ಪನವರ-ಪಕ್ಷೇತರ-194(ಸೋಲು) ಅಂತರ-9.

ವಾರ್ಡ ನಂ-6, ಅಜರುದ್ದಿನ ಬಸರಿಕಟ್ಟಿ-ಕಾಂಗ್ರೇಸ್-634(ಗೆಲುವು) ಪ್ರತಿಸ್ಪರ್ದಿ ಪ್ರಕಾಶ ಹರಕುಣಿ- ಜೆಡಿಎಸ್-76(ಸೋಲು) ಗೆಲುವಿನ ಅಂತರ-558.

ವಾರ್ಡ ನಂ-7, ಪಕ್ಷೇತರ ಅಭ್ಯರ್ಥಿ ಶಂಕರ ನಿಂಗಪ್ಪಾ ಬೆಳಗಾಂವಕರ-199(ಗೆಲುವು) ಎದುರಾಳಿ ಸಂತೋಷ ಬೆಳಗಾಂವಕರ-ಕಾಂಗ್ರೇಸ್-171(ಸೋಲು) ಅಂತರ 28.

ವಾರ್ಡ ನಂ-8, ಮುಸತಹಾಜ್ ಬಸಾಪೂರ-ಕಾಂಗ್ರೇಸ್-295(ಗೆಲುವು) ಎದುರಾಳಿ ಸಲಿಮಾಬಿ ಇಟ್ಟಂಗಿವಾಲೆ-ಬಿಜೆಪಿ-142(ಸೋಲು) ಅಂತರ 153.

ವಾರ್ಡ ನಂ-9, ಸುರೇಶ ವಗ್ರಾಯಿ-ಕಾಂಗ್ರೇಸ್-374(ಗೆಲುವು) ಪ್ರತಿಸ್ಪರ್ದಿ ಗೋಪಾಲ ಗರಗ-ಬಿಜೆಪಿ-294(ಸೋಲು) ಅಂತರ 80.

ವಾರ್ಡ ನಂ-10, ಮೊಹನ ಮೇಲಗಿ ಕಾಂಗ್ರೇಸ್-293(ಗೆಲುವು), ಆನಂದ ಕಂಚನಾಳಕರ-ಬಿಜೆಪಿ-279(ಸೋಲು)- ಅಂತರ 14.

ವಾರ್ಡ ನಂ-11, ದ್ರೌಪದಿ ಅಗಸರ-ಕಾಂಗ್ರೇಸ್- 341(ಗೆಲುವು), ರಾಜೇಶ್ವರಿ ವಾಸು ಪೂಜಾರಿ-ಬಿಜೆಪಿ-212(ಸೋಲು) ಅಂತರ 129.

ವಾರ್ಡ ನಂ-12, ಶಭನಾ ಸೈಯದಲಿ ಅಂಕೋಲೆಕರ-ಜೆಡಿಎಸ್-225(ಗೆಲುವು), ಸಾಯಿರಾಬಾನು ಮುಗದ- ಕಾಂಗ್ರೇಸ್-204(ಸೋಲು) ಅಂತರ 21.

ವಾರ್ಡ ನಂ-13, ರಾಜೇಶ್ವರಿ ಲಿಂಗರಾಜ ಹಿರೇಮಠ-ಬಿಜೆಪಿ-283(ಗೆಲುವು), ಪೂಜಾ ದೇಸಾಯಿಸ್ವಾಮಿ-ಕಾಂಗ್ರೇಸ್-201(ಸೋಲು) ಅಂತರ 82.

ವಾರ್ಡ ನಂ-14, ಉದಯಕುಮಾರ ಶ್ರೀಕಾಂತ ಹೂಲಿ-ಬಿಜೆಪಿ-222(ಗೆಲುವು), ಸತ್ಯಜೀತ ಗಿರಿ-ಕಾಂಗ್ರೇಸ್-191(ಸೋಲು) ಅಂತರ 31.

ವಾರ್ಡ ನಂ-15, ಶಾಂತಾ ಹನುಮಂತ ಹಿರೆಕರ-ಬಿಜೆಪಿ-345(ಗೆಲುವು) ಹಾಗೂ ಹನೋರಿಯಾಮಾಲಾ ಬ್ರಗಾಂಜಾ-ಕಾಂಗ್ರೇಸ್-277(ಸೋಲು) ಅಂತರ 68.

ವಾರ್ಡ ನಂ-16, ಸುವರ್ಣಾ ಮಾದರ –ಕಾಂಗ್ರೇಸ್-254(ಗೆಲುವು), ನೀತಾ ಭಂಡಗಿ-ಬಿಜೆಪಿ-159(ಸೋಲು) ಅಂತರ 95.

ವಾರ್ಡ ನಂ-17, ಸುರೇಶ ತಳವಾರ-ಕಾಂಗ್ರೇಸ್-371(ಗೆಲುವು) ಪ್ರತಿಸ್ಪರ್ದಿ ಬಿಜೆಪಿಯ ಯಲ್ಲಪ್ಪಾ ಹೊನ್ನೊಜಿ-347(ಸೋಲು) ಅಂತರ 24.

ವಾರ್ಡ ನಂ-18, ರೂಪಾ ಅನಿಲ ಗಿರಿ-ಬಿಜೆಪಿ-319(ಗೆಲುವು) ಹಾಗೂ ರೇಷ್ಮಾ ಮನಿಯಾರ –ಕಾಂಗ್ರೇಸ್-244(ಸೋಲು) ಅಂತರ 75.

ವಾರ್ಡ ನಂ-19, ಲಕ್ಷ್ಮೀ ವಡ್ಡರ-ಕಾಂಗ್ರೇಸ್-399(ಗೆಲುವು), ಯಲ್ಲವ್ವಾ ಕೊರವರ- ಬಿಜೆಪಿ-252(ಸೋಲ)- ಅಂತರ 147.

ವಾರ್ಡ ನಂ-20, ಫಯಾಜಅಹಮ್ಮದ ಶೇಖ-ಕಾಂಗ್ರೇಸ್-514(ಗೆಲುವು) ಇನ್ನೂ ಬಿಜೆಪಿಯ ಸುಭಾಷ ನಾಯ್ಕ-149(ಸೋಲು) ಅಂತರ 365.

ವಾರ್ಡ ನಂ-21, ಅನಿಲ ಪಿರಾಜಿ ಗೌಳಿ(ಚವ್ವಾಣ)-ಕಾಂಗ್ರೇಸ್-326, ಎದುರಾಳಿ ಸಂತಾನ ಸಾವಂತ-ಬಿಜೆಪಿ-217(ಸೋಲು) ಅಂತರ 109.

ವಾರ್ಡ-22, ಸಂಗೀತಾ ಜಾಧವ-ಬಿಜೆಪಿ-340(ಗೆಲುವು), ಪ್ರತಿಸ್ಪರ್ದಿ ಕಾಂಗ್ರೇಸ್ನ ಸುನಿತಾ ಜಾಧವ-301(ಸೋಲು) ಅಂತರ 39.

ವಾರ್ಡ ನಂ-23, ಶಮಿನಾಬಾನು ಜಂಬುವಾಲೆ-ಕಾಂಗ್ರೇಸ್-307(ಗೆಲುವು) ಎದುರಾಳಿ ಮಾಲಾ ಹುಂಡೇಕರ- ಬಿಜೆಪಿ-242(ಸೋಲು) ಅಂತರ 65.
Leave a Comment