
ಹಳಿಯಾಳ: ಜನರು ಅಭಿವೃದ್ದಿ ಪರ ಇದ್ದಾರೋ, ಇಲ್ಲವೋ ? ಎನ್ನುವ ಸಂಶಯ ತಮಗೆ ಮೂಡುತ್ತಿದೆ ಆದರೂ ಜನರ ತೀರ್ಪಿಗೆ ತಲೆಬಾಗುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದ್ದಾರೆ.
ಪಟ್ಟಣದಲ್ಲಿ ಕಾಂಗ್ರೇಸ್ ಪಕ್ಷ ಬಹುಮತ ಸಾಧಿಸುತ್ತಿದ್ದಂತೆ ತುರ್ತಾಗಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಆರ್.ವಿ.ದೇಶಪಾಂಡೆ ಅವರ ಅಭಿವೃದ್ದಿ ಕಾರ್ಯಗಳು, ಪರಿಶ್ರಮ, ಅಭಿವೃದ್ದಿ ಪರ ನಿಲುಮೆಯೇ ಇಂದು ಹಳಿಯಾಳ ಪುರಸಭೆ ಹಾಗೂ ದಾಂಡೇಲಿ ನಗರಸಭೆಯಲ್ಲಿ ಕಾಂಗ್ರೇಸ್ ಪಕ್ಷ ಬಹುಮತ ಸಾಧಿಸಲು ಕಾರಣವಾಗಿದೆ ಆದರೇ ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನೀರಿಕ್ಷೆಯಿತ್ತು ಎಂದರು.
ಪ್ರಾಮಾಣಿಕವಾಗಿ ಚುನಾವಣೆಯಲ್ಲಿ ದುಡಿದ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಘೋಟ್ನೇಕರ ಕೆಲವು ವಾರ್ಡಗಳಲ್ಲಿ ಪಕ್ಷದ ಕಾರ್ಯಕರ್ತರೇ ಸಹಕಾರ ನೀಡದಿರುವುದು ಮನಸ್ಸಿಗೆ ನೋವು ಮಾಡಿದೆ ಎಂದ ಅವರು ಆದರೇ ಈಗಾಗಲೇ ಹಳಿಯಾಳ-ದಾಂಡೇಲಿಯಲ್ಲಿ ಪ್ರಗತಿಯಲ್ಲಿದ್ದ ಕಾಮಗಾರಿಗಳ ಜೊತೆಗೆ ಜನರ ಬೇಡಿಕೆ ಅನುಗುಣವಾಗಿ ಹೆಚ್ಚಿನ ಅಭಿವೃದ್ದಿ ಕಾಮಗಾರಿಗಳು ಸಚಿವರ ಮಾರ್ಗದರ್ಶನದಲ್ಲಿ ನಡೆಯಲಿದ್ದು ಅಭಿವೃದ್ದಿಯೇ ತಮ್ಮ ಗುರಿ ಎಂದು ಹೇಳಿದರು.
Leave a Comment