ಹಳಿಯಾಳ:- ದೇಶಾದ್ಯಂತ ಪ್ಲಾಸ್ಟರ್ ಓಫ್ ಪ್ಯಾರಿಸ್(ಪಿಓಪಿ) ಗಣೇಶ ವಿಗ್ರಹಗಳನ್ನು ಮಾರುವುದಕ್ಕೆ ನಿಷೇಧ ಹೇರಲಾಗಿದೆ. ಆದರೇ ಹಳಿಯಾಳ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ಪಿಓಪಿ ವಿಗ್ರಹ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು ಕೂಡಲೇ ಕಠಿಣ ಕ್ರಮ ಜರುಗಿಸುವಂತೆ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ಆಗ್ರಹಿಸಿದೆ.
ಪರಿಸರ ಹಾಗೂ ಜಲಮೂಲಗಳಿಗೆ ಹಾನಿಕಾರಕವಾಗಿರುವ ಪಿಓಪಿ ವಿಗ್ರಹಗಳನ್ನು ಸಾವಿರಾರು ಪ್ರಮಾಣದಲ್ಲಿ ಹಳಿಯಾಳದಲ್ಲಿ ತಂದು ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ತಾಲೂಕಿನ ಬಿದ್ರೋಳ್ಳಿ ಗ್ರಾಮದಲ್ಲಿಯೇ ಪಿಓಪಿಯಿಂದ ಸುಮಾರು 5 ಅಡಿಗೂ ದೊಡ್ಡದಾದ ಹಾಗೂ ಸಣ್ಣ ನೂರಾರು ವಿಗ್ರಹಗಳನ್ನು ತಯಾರಿಸಲಾಗುತ್ತಿದ್ದು. ಈ ಕುರಿತು ಸಂಬಂಧಪಟ್ಟ ತಾಲೂಕಾಡಳಿತದವರು ಕ್ರಮ ಜರುಗಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಸಿಲಾಗಿದೆ.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ವಿಲಾಸ ಕಣಗಲಿ, ಪದಾಧಿಕಾರಿಗಳಾದ ಶಿರಾಜ ಮುನವಳ್ಳಿ, ಗಣೇಶ ಗೊಸಪ್ಪನವರ, ಸಂಜು ಚಲವಾದಿ, ಮಹೇಶ ಹುಲಕೊಪ್ಪ, ಪವನ ಹಳ್ಳುರ, ಪರಶುರಾಮ, ವಿನೋದ, ಸಿಕಂದರ ಮುಲ್ಲಾ, ಚೇತನ ಇತರರು ಇದ್ದರು.
Leave a Comment