ಹಳಿಯಾಳ : ಪ್ರೀತ್ಸೆ ಎಂದು ಪ್ರತಿದಿನ ಹಿಂಬಾಲಿಸಿ ಕಿರುಕುಳ ನೀಡಿದ ಆರೋಪಿಗೆ ಹಳಿಯಾಳ ನ್ಯಾಯಾಲಯವು 7 ತಿಂಗಳ ಸಾಧಾ ಶಿಕ್ಷೆ ಹಾಗೂ 2300 ರೂ ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದೆ.
ದಾಂಡೇಲಿಯ ಹಾಲಮಡ್ಡಿ ಗ್ರಾಮದ ಸೋಮನಿಂಗ ಬರಮಣಗಿ ಹಲಗೇಕರ ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾನೆ. ಆರೋಪಿಯು ಅದೇ ಗ್ರಾಮದ ಯುವತಿಯನ್ನು ಪ್ರೀತಿಸು ಎಂದು ಪಿಡಿಸುತ್ತಿದ್ದನು ಅಲ್ಲದೇ ಅವಳಿಗೆ ಅನವಶ್ಯಕ ಕಿರುಕುಳ ನೀಡುವುದು, ಹಿಂಬಾಲಿಸುವುದು ಮತ್ತು ಚಲನವಲನಗಳ ಮೇಲೆ ನಿಗಾವಹಿಸುವುದನ್ನು ಮಾಡುತ್ತಿದ್ದನು ಎಂದು ದಾಂಡೇಲಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಕಳೆದ 26 ಪೆಬ್ರುವರಿ 2017 ರಂದು ದೂರು ದಾಖಲಿಸಲಾಗಿತ್ತು.
ಪಿಎಸೈ ಪಿ.ಬಿ.ಕೊಣ್ಣೂರು ಅವರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಜೆಎಂಎಫ್ಸಿ ನ್ಯಾಯಾಧೀಶರಾದ ಬಸವರಾಜ ಸನದಿ ಅವರು ಆರೋಪಿಗೆ 7 ತಿಂಗಳ ಸಾದಾ ಶಿಕ್ಷೆ ಜೊತೆಗೆ 2300 ರೂ ದಂಡ ಅದರಲ್ಲಿ ಫಿರ್ಯಾಧಿಗೆ ಪರಿಹಾರ ರೂಪದಲ್ಲಿ 1000 ರೂಗಳನ್ನು ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಅಜಿತ ಜಿನ್ನಪ್ಪ ಜನಗೌಡ ವಾದ ಮಂಡಿಸಿದ್ದರು.
Leave a Comment