ದಿನಾಂಕ: 13/10/2018 ರಂದು ಶನಿವಾರ ಎಸ್.ಡಿ.ಎಂ. ಪ.ಪೂ. ಮಹಾವಿದ್ಯಾಲಯದಲ್ಲಿ ‘ಸಂಸ್ಕøತ ಭಾಷಾಯಾಃ ಮಹತ್ವಮ್’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ಸಂಪನ್ನಗೊಂಡಿತು. ಅತಿಥಿಗಳಾಗಿ ಆಗಮಿಸಿದ ಡಾ. ಎ.ವಿ. ಬಾಳಿಗಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಉಪನ್ಯಾಸಕರಾದ ಡಾ. ಶಂಕರ ಭಟ್ಟ ಇವರು ಸಂಸ್ಕøತ ಒಂದು ಪರಿಷ್ಕøತ ಭಾಷೆಯಾಗಿದೆ. ಗಣಿತ, ವಿಜ್ಞಾನ, ವಾಸ್ತುಶಾಸ್ತ್ರ, ಸಸ್ಯಶಾಸ್ತ್ರ ಹೀಗೆ ಹಲವು ವಿಚಾರಗಳಲ್ಲಿ ಭಾರತೀಯರ ಕೊಡುಗೆ ಅಪಾರವಾದದ್ದು. ಆದ್ದರಿಂದ ಇದನ್ನು ನಾವು ಅರಿಯಬೇಕೆಂದರು. ಅಧ್ಯಕ್ಷಸ್ಥಾನವನ್ನು ವಹಿಸಿಕೊಂಡ ಪ್ರಾಚಾರ್ಯರಾದ ಪ್ರೊ. ಎಂ. ಎಚ್. ಭಟ್ಟ ಇವರು ಸಂಸ್ಕøತ ಅಧ್ಯಯನವು ನಮ್ಮ ಜೀವನದ ಒಂದು ಭಾಗವಾಗಿರಬೇಕು ಎಂದು ಕರೆನೀಡಿದರು. ಕುಮಾರಿ. ಧನ್ಯಾ ವಿ.ಎಚ್. ಇವಳು ಪ್ರಾರ್ಥಿಸಿದಳು. ಉಪನ್ಯಾಸಕರಾದ ಶ್ರೀ. ವಿನಾಯಕ ಭಟ್ಟ ಇವರು ಗಣ್ಯರನ್ನು ಸ್ವಾಗತಿಸಿದರು. ಶ್ರೀ. ವಿದ್ಯಾಧರ ನಾಯ್ಕ ಇವರು ವಂದಿಸಿದರು.
Leave a Comment