ಹಳಿಯಾಳ: ಪಟ್ಟಣದ ಪ್ರಸಿದ್ದ ಶ್ರೀ ತುಳಜಾಭವಾನಿ ಹಾಗೂ ಇತರ ಪರಿವಾರ ಮಂದಿರಗಳಲ್ಲಿ ನವರಾತ್ರಿ ಉತ್ಸವವು ದಿ.10 ರಿಂದ ಪ್ರಾರಂಭವಾಗಿದ್ದು ಸಕಲ ಧಾರ್ಮಿಕ ವಿಧಿ ವಿಧಾಗಳೊಂದಿಗೆ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ದಿ.18 ವರೆಗೆ ಶೃದ್ದಾಭಕ್ತಿಯಿಂದ ಆಚರಿಸಲಾಗುತ್ತಿದೆ.
ಪ್ರತಿನಿತ್ಯ ಪೂಜೆ, ಹೋಮ ಹವನ, ಅಲಂಕಾರ, ರುದ್ರಾಭಿಷೇಕದೊಂದಿಗೆ ಪೂಜಾ ಕಾರ್ಯ ಪ್ರಾರಂಭಿಸಲಾಗಿದ್ದು ಪ್ರತಿದಿನ ವಿವಿಧ ಪೂಜೆಗಳು ದಿ.17 ರಂದು ಶ್ರೀ ನವಚಂಡಿ ಹವನ ದಿ. 18 ರಂದು ಗುರುವಾರ ಅಶ್ವಿಜ ಶುದ್ಧ ನವಮಿ ಹಾಗೂ ವಿಜಯದಶಮಿ ಕಾರ್ಯಕ್ರಮ, ಶಮಿ ಪೂಜನ, ಊಡಿ ತುಂಬುವುದು ಹಾಗೂ ದಸರಾ ಆಚರಣೆ ನಡೆಯಲಿದೆ.
ಪ್ರತಿದಿನ ಸಂಜೆ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ದಿ.14 ರವಿರದಂದು ವಿದ್ವಾನ ಅನಂತಮೂರ್ತಿ ಭಟ್ ಎಲುಗಾರರಿಂದ ನವರಾತ್ರಿ ವಿಶೇಷ ಕುರಿತು ಉಪನ್ಯಾಸ, ದಿ.15 ರಂದು ಡಾ.ಶಕ್ತಿ ಪಾಟಿಲ್ ಧಾರವಾಡ ಹಾಗೂ ಸಂಗಡಿಗರಿಂದ ಭಕ್ತಿ ಸಂಗೀತ ಮತ್ತು 16 ರಂದು ಪ್ರಶಾಂತ ದಿಕ್ಷೀತ್ ಧಾರವಾಡ ಹಾಗೂ ಸಂಗಡಿಗರಿಂದ ಭಕ್ತಿ ಸಂಗೀತ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ತುಳಜಾಭವಾನಿ ಧಾರ್ಮಿಕ ಶೈಕ್ಷಣಿಕ ಮತ್ತು ಧರ್ಮಾರ್ಥ ಟ್ರಸ್ಟ್ ಸಮೀತಿ ಪ್ರಕಟಣೆಯಲ್ಲಿ ತಿಳಿಸಿದೆ.
Leave a Comment