ಹಳಿಯಾಳ: ಭಾರತ ಸ್ಕೌಟ್ಸ್ ಮತ್ತು ಗೈಡ್ ರಾಜ್ಯ ಸಂಸ್ಥೆ ಕರ್ನಾಟ ಕಅವರು ಸ್ಕೌಟ್ಸ್ ಮತ್ತು ಚಳುವಳಿಯಲ್ಲಿ ಸಕ್ರಿಯವಾಗಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ವರ್ಡ್ ಅಸೋಸಿಯೇಶನ್ ಆಫ್ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್ ನೀಡುವ ವಯಸ್ಕರ ಸಾಧನೆಯ ಪ್ರಶಸ್ತಿ ಹಾಗೂ ಯುವ ಲೀಡರ್ಶಿಪ್ ಕಮಿಷನರ್ ಪ್ರಶಸ್ತಿಯನ್ನು ಪಟ್ಟಣದ ನಿವೃತ್ತ ಪದೋನ್ನತ ಮುಖ್ಯಾಧ್ಯಾಪಕಿ ಲಿನೆಟ್ ಸೆರಾವೊ ಅವರಿಗೆ ಪ್ರಧಾನ ಮಾಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ‘ಸ್ಕೌಟರ್ ದೀನದಯಾಳು ನಾಯ್ಡು’ ಅವರ ಶತಮಾನೋತ್ಸವ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಲಿನೆಟ್ ಸೆರಾವೊ ಅವರಿಗೆ ಭಾ.ಸ್ಕೌ.ಗೈ ರಾಜ್ಯ ಸಂಸ್ಥೆಯು ಈ ಮೊದಲು ವಿಶಿಷ್ಟ ಸೇವೆ ನೀಡಿದ ಹಿರಿಯ ಗೈಡ್ಸ್ ಪ್ರಶಸ್ತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಳಿಯಾಳ ‘ಉತ್ತಮ ಸಂಪನ್ಮೂಲ ವ್ಯಕ್ತಿ’ ಪ್ರಶಸ್ತಿ ನೀಡಿ ಗೌರವಿಸಿದೆ.
Leave a Comment