ಗೋಕರ್ಣ: ಗೋಕರ್ಣದ ಮೊಡರ್ನ ಎಜ್ಯುಕೇಶನ್ ಟ್ರಸ್ಟ(ರಿ.)ನ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತೀ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿಯಾದ ಕುಮಾರ ಪ್ರಣವ ಗಜಾನನ ಭಾಗ್ವತ ಇತನು ಐಡಿಯಲ್ ಪ್ಲೇ ಅಬಾಕಸ್ ಸೆಂಟರ್ ಅಂಕೋಲದಲ್ಲಿ ತರಬೇತಿ ಪಡೆಯುತ್ತಿದ್ದು, ದಿನಾಂಕ 28/10/2018 ರಂದು ಉಡುಪಿಯಲ್ಲಿ ಏರ್ಪಡಿಸಿದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 800ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಇತನು ಉತ್ತಮ ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ. ಈತನ ಸಾಧನೆ ಮೆಚ್ಚಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂತೋಷ ನಾಯಕ ತೊರ್ಕೆ, ಮೆನೆಜಿಂಗ್ ಟ್ರಸ್ಟಿಗಳಾದ ಡಾ.ಎಮ್.ಡಿ.ನಾಯ್ಕ , ಶಿಕ್ಷಕ ವರ್ಗ, ಪಾಲಕರು, ಸ್ನೇಹಿತರು ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.
Leave a Comment