
ಹಳಿಯಾಳ:- ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ವಿಚಾರದಲ್ಲಿ ಕೇಂದ್ರ ಬಿಜೆಪಿ ವಿಳಂಬ ನೀತಿ ಅನುಸರಿಸದೆ ಕೂಡಲೇ ಸುಗ್ರೀವಾಜ್ಞೆ ಹೊರಡಿಸಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಆಗ್ರಹಿಸಿದ್ದಾರೆ.
ಭಾನುವಾರ ಪಟ್ಟಣದ ಎಮ್ಎಲ್ಸಿ ಕಾರ್ಯಾಲಯದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ರಾಮ ಭಕ್ತರು ಬಿಜೆಪಿಯಲ್ಲಿ ಮಾತ್ರವಿಲ್ಲ ಎಲ್ಲ ಪಕ್ಷಗಳನ್ನು ರಾಮಭಕ್ತರಿದ್ದಾರೆ. ರಾಮಮಂದಿರದ ಈ ಧಾರ್ಮಿಕ ಭಾವನೆಯ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದರು ಎಂದು ಕರೆ ನೀಡಿದರು.
ಈ ಹಿಂದೆ ಬಿಜೆಪಿಯವರು ರಾಮಮಂದಿರ ಕಟ್ಟಲು ದೇಶದೆಲ್ಲೆಡೆಯಿಂದ ಇಟ್ಟಿಗೆ ಸೇರಿದಂತೆ ಹಲವಾರು ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಆದರೇ ಈವರೆಗೆ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ ಎಂದು ಆಪಾದಿಸಿದ ಅವರು ಸದ್ಯ ಮಂದಿರ ಕಟ್ಟಲು ಮುಸ್ಲಿಂ ಮುಖಂಡರು ಸೇರಿದಂತೆ ಯಾವೊಬ್ಬರ ತಕರಾರು ಕೂಡ ಇಲ್ಲ. ಅಯೋಧ್ಯೆಯಲ್ಲು ಹಾಗೂ ಕೇಂದ್ರದಲ್ಲೂ ಸರ್ಕಾರ ಹೊಂದಿರುವ ಬಿಜೆಪಿಯವರು ಈಗ ಚೆಂಡು ಅವರ ಅಂಗಳದಲ್ಲಿದ್ದು ಕೂಡಲೇ ಸುಗ್ರೀವಾಜ್ಞೆ ಜಾರಿಗೊಳಿಸಿ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಲಕ್ನೋದಲ್ಲಿ ಮುಸ್ಲಿಂ ಬಂಧುಗಳಿಗೆ ಮಸೀದಿ ನಿರ್ಮಾಣ ಮಾಡಿಕೊಡುವ ಮೂಲಕ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಇತಿಶ್ರೀ ಹಾಡಬೇಕು ಎಂದ ಘೊಟ್ನೇಕರ ದೇಶದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲಿ ಎನ್ನುವ ಮಹದಾಶೆ ತಮ್ಮದಾಗಿದೆ ಅಲ್ಲದೇ ಇನ್ನು ಮುಂದೆ ಯಾರು ರಾಮಮಂದಿರ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡಿ ತಮ್ಮ ಬೆಳೆ ಬೆಯಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಪ್ಯಾರಿ ವಿರುದ್ದ ಹೋರಾಟ :- ಇನ್ನೂ ಹಳಿಯಾಳ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶದಲ್ಲಿ ಆದ್ಯತೆ ನೀಡದೆ ಅನ್ಯಾಯವೆಸಗಲಾಗುತ್ತಿದೆ. ಕಾರ್ಖಾನೆ ಪ್ರಾರಂಭಕ್ಕೂ ಮುನ್ನ ಕಂಪೆನಿ ನುಡಿದಂತೆ ಇಂದು ನಡೆಯುತ್ತಿಲ್ಲ ಎಂದು ಆರೋಪಿಸಿದ ಅವರು ಸ್ಥಳೀಯರಿಗೆ ಉದ್ಯೋಗಾವಕಾಶದ ಜೊತೆಗೆ ಗುತ್ತಿಗೆಗಳನ್ನು ಸ್ಥಳೀಯರಿಗೆ ನೀಡಬೇಕು ಎಂದು ಆಗ್ರಹಿಸಿದರು. ಕಂಪೆನಿಯು ಸ್ಥಳೀಯರಿಗೆ ಮತ್ತೇ ಅನ್ಯಾಯ ಮುಂದುವರೆಸಿದರೇ ಊಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಅಧಿಕಾರಿಗಳ ಮೇಲೆ ವಿಶ್ವಾಸವಿಲ್ಲ :- ಮರಳು ಸಮಸ್ಯೆ ಒಂದು ವಾರದಲ್ಲಿ ಬಗೆಹರಿಯುತ್ತೇ ಎಂದು ಸಚಿವ ಆರ್.ವಿ.ದೇಶಪಾಂಡೆಯವರು ನೀಡಿದ ಹೇಳಿಕೆ ತಮಗೆ ಸಮಾಧಾನ ತಂದಿಲ್ಲ ಬದಲಾಗಿ ಮರಳುಗಾರಿಕೆ ಪ್ರಾರಂಭವಾಗಿ, ಸಾರ್ವಜನೀಕರಿಗೆ ಮರಳು ಸಿಕ್ಕಮೇಲೆ ತಮಗೆ ಸಂತೋಷವಾಗುತ್ತದೆ ಎಂದ ಘೊಟ್ನೇಕರ ಸಚಿವ ದೇಶಪಾಂಡೆ ಮೇಲೆ ನಮಗೆ ವಿಶ್ವಾಸವಿದೆ ಆದರೇ ಅಧಿಕಾರಿಗಳ ಮೇಲೆ ಇಲ್ಲವಾಗಿದ್ದು ದೀಪಾವಳಿ ಹಬ್ಬ ಮುಗಿದ ಬಳಿಕ ಕೆಲವು ಭ್ರಷ್ಟ ಅಧಿಕಾರಿಗಳ ವಿರುದ್ದ ಬಾಂಬ್ ಸಿಡಿಸುವ ಎಚ್ಚರಿಕೆಯನ್ನು ನೀಡಿದರು.
ಸುದ್ದಿಗೊಷ್ಠಿಯಲ್ಲಿ ಪುರಸಭಾ ಸದಸ್ಯ ಅನಿಲ ಚವ್ವಾಣ, ಮೋಹನ ಮೆಲಗಿ, ಎಪಿಎಮ್ಸಿ ಸದಸ್ಯ ಸಂತೋಷ ಮಿರಾಶಿ, ಮುಖಂಡ ಅಶೋಕ ಘೋಟ್ನೇಕರ ಇತರರು ಇದ್ದರು.
Leave a Comment