ಹಳಿಯಾಳ: ತಾಲೂಕಾ ಆಡಳಿತ, ಪುರಸಭೆ, ತಾಲೂಕಾ ಪಂಚಾಯತ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಳಿಯಾಳದ ಬಾಬು ಜಗಜ್ಜೀವನರಾಮ ಭವನದಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿಯನ್ನು ಆಚರಿಸಲಾಯಿತು.
ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಘೋಟ್ನೇಕರ ಟಿಪ್ಪು ಸುಲ್ತಾನನ ಜಯಂತಿ ಆಚರಣೆ ಹಮ್ಮಿಕೊಂಡಿರುವ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ ಎಂದ ಅವರು ಟಿಪ್ಪುವಿನ ಬಗ್ಗೆ ಹೊಗಳಿದರು. ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಮಾತನಾಡಿದರು.
ನರಗುಂದದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಇಬ್ರಾಹಿಂ ಸೌದಾಗರ ಉಪನ್ಯಾಸ ನೀಡಿದರು. ಮುಸ್ಲಿಂ ಸಮಾಜದ ಮೌಲಾನಾ ಅಬ್ದುಲ್ ಹೈಪಟೇಲ್, ಮುಪ್ತಿಮುಸ್ತಾಕ ರಸೂಲ ನಾಯಕ, ಮುಫ್ತಿ ಫಯಾಜ ಸಾನಿಧ್ಯ ವಹಿಸಿದ್ದರು. ವೇದಿಕೆಯ ಮೇಲೆ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟೀಲ್, ಮಹೇಶ್ರಿ ಸಂಜು ಮಿಶ್ಯಾಳಿ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ತಾಪಂ ಇಓ ರಮೇಶ ಕುರಿಯವರ, ಮುಸ್ಲಿಂ ಸಮಾಜದ ಮುಖಂಡರಾದ ಖಯ್ಯಾಮ ಮುಗದ, ಫಯಾಜ್ ಶೇಖ, ಗುಲಾಬಷಾ ಲತಿಫನವರ ಮೊದಲಾದವರು ಇದ್ದರು.
Leave a Comment