
ಹಳಿಯಾಳ :- ಸೋಮವಾರ ನಿಧನರಾದ ಕೇಂದ್ರ ರಸಗೊಬ್ಬರ ಖಾತೆ ಸಚಿವರಾಗಿದ್ದ ಬಿಜೆಪಿಯ ಅನಂತಕುಮಾರ್ ಶಾಸ್ತ್ರೀಯವರಿಗೆ ಹಳಿಯಾಳ ಬಿಜೆಪಿ ಘಟಕದಿಂದ ಶೃದ್ದಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ಶೃದ್ದಾಂಜಲಿ ಸಭೆ ನಡೆಸಿದ ಬಿಜೆಪಿಗರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿ ಅಗಲಿದ ನಾಯಕನಿಗೆ ಶೃದ್ದಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಬಿಜೆಪಿ ಹಿರಿಯ ಮುಖಂಡ ಮಂಗೇಶ ದೇಶಪಾಂಡೆ ಅನಂತಕುಮಾರ ಅವರ ಸಂಘಟನಾ ಚತುರತೆಯಿಂದ ಇಂದು ಬಿಜೆಪಿ ಈ ಭಾಗದಲ್ಲಿ ಅಧಿಕಾರ ಪಡೆದಿದೆ ಬಿಜೆಪಿಗೆ ಅವರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ನೆಲೆ ಗಟ್ಟಿ ಇಲ್ಲದ ಸಂದರ್ಭದಲ್ಲಿ ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸಿ ಪಕ್ಷವನ್ನು ಮುಂದೆ ತಂದಿದ್ದು ಅವರ ಸಾಧನೆಯಾಗಿದೆ. ಅವರ ವಿಚಾರಧಾರೆಯನ್ನು ಎಲ್ಲರೂ ಅಳವಡಿಸಿಕೊಂಡು ಪಕ್ಷವನ್ನು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ತರುವಲ್ಲಿ ಕೆಲಸ ನಿರ್ವಹಿಸಿದರೇ ಅದುವೇ ಅನಂತಕುಮಾರಜಿ ಅವರಿಗೆ ನಿಜವಾದ ಶೃದ್ದಾಂಜಲಿ ಆಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿ ನರಸಾನಿ, ವಿಲಾಸ ಯಡವಿ, ಪ್ರದೀಪ ಹಿರೆಕರ, ಸಂತೋಷ ಘಟಕಾಂಬಳೆ, ವಿಎಮ್ ಪಾಟೀಲ್, ಶಾಂತಾ ಹಿರೆಕರ, ಜಯಲಕ್ಷ್ಮಿ ಚವ್ಹಾನ, ಸಂಗೀತಾ ಜಾಧವ, ಉದಯ ಹೂಲಿ , ಅನಿಲ ಮುತ್ನಾಳ ಮೊದಲಾದವರು ಇದ್ದರು.

Leave a Comment