ಹಳಿಯಾಳ: ರಾಜ್ಯದ ಸಹಕಾರಿ ರಂಗದಲ್ಲಿಯೇ ಅತ್ಯಂತ ಕ್ರಿಯಾಶೀಲ ಮತ್ತು ಜೀವಾಳ ಸಹಕಾರಿ ರಂಗವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯ ಅದಕ್ಕೆ ಟಿ.ಎಸ್.ಎಸ್ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ಸಹಕಾರಿ ರಂಗದಲ್ಲಿ ಗೈಯುತ್ತಿರುವ ಸೇವೆಯೇ ಮುಖ್ಯ ನಿರ್ದಶನಗಳಾಗಿವೆ ವಿಧಾನ ಪರಿಷತ್ ಸದಸ್ಯರಾಗಿರುವ ಕೆ.ಡಿ.ಸಿ.ಸಿ ಬ್ಯಾಕ ಚೇರಮನ್ ಎಸ್.ಎಲ್.ಘೋಟ್ನೆಕರ ಅವರು ಹೇಳಿದರು.
ಇಲ್ಲಿಯ ಕೆ.ಡಿ.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸದ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ನಡೆದ ” ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವ ನಿರ್ಮಾಣ” ಎಂಬ ಕಾರ್ಯಾಗಾರವನ್ನು ಉದ್ಗಾಟಿಸಿ ಅವರು ಮಾತನಾಡಿದರು. ಸಹಕಾರಿ ಸಹಭಾಗಿತ್ವದಲ್ಲಿ ಜನಸಾಮಾನ್ಯರನ್ನು ಪರಿಣಾಮಕಾರಿಯಾಗಿ ತಲಪುಬಹುದು ಎಂಬುದನ್ನು ಸಹಕಾರಿ ದುರೀಣ ಶಾಂತಾರಾಮ ಹೆಗಡೆ ನಾಯಕತ್ವದಲ್ಲಿ ಟಿ.ಎಸ್.ಎಸ್ ಸಾಬಿತುಪಡಿಸಿದೆ ಎಂದರು. ಜಿಲ್ಲೆಯಲ್ಲಿನ ಸಹಕಾರಿ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಮತ್ತು ಪುನಶ್ಚೇತನಕ್ಕೆ ಕೆ.ಡಿ.ಸಿ.ಸಿ ಬ್ಯಾಂಕ ಬದ್ದವಾಗಿದೆ ಎಂದರು. ಸಹಕಾರ ಸಂಘಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸರ್ಕಾರಗಳು ಹಲವಾರು ಸವಲತ್ತುಗಳನ್ನು ಸಂಘಗಳ ಮೂಲಕವೇ ನೀಡುತ್ತಿದ್ದು, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ರೈತರಿಗೆ ತಲಪಿಸುವ ಕಾರ್ಯವನ್ನು ಜಿಲ್ಲೆಯಲ್ಲಿ ಸಹಕಾರಿ ರಂಗ ಯಶಸ್ವಿಯಾಗಿ ಮಾಡುತ್ತಿದೆ ಎಂದರು.
ಸಹಕಾರಿ ಮುಖಂಡ ಇಂದಿರಾಕಾಂತ ಕಾಮಕರ ಮಾತನಾಡಿ ಪ್ರಸಕ್ತ ದಿನಮಾನಗಳಲ್ಲಿ ಸಹಕಾರಿ ರಂಗಕ್ಕೆ ಹೆಚ್ಚಿನ ಆದ್ಯತೆ ಬಂದಿರುವುದರಿಂದ ಸಹಕಾರಿ ಸಂಘಗಳು ಒತ್ತಡಕ್ಕೊಳಗಾಗಿ ಸೇವೆ ಮಾಡುವ ಅನಿವಾರ್ಯತೆ ಎದುರಾಗಿದೆ. ಒಳ್ಳೇಯ ಆಡಳಿತ ಮಂಡಳಿ ಹಾಗೂ ಒಳ್ಳೇಯ ಸಿಬ್ಬಂದಿಗಳಿದ್ದು ಸಮನ್ವಯತೆಯಿಂದ ಕಾರ್ಯ ಮಾಡಿದರೇ ಸಹಕಾರಿ ಸಂಘಗಳು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಸಾಧ್ಯ ಎಂದರು.
ಕರ್ನಾಟಕ ಇನ್ಸ್ಟಿಟ್ಯೂಟ್ ಕೋ-ಆಪ್ ಮ್ಯಾನಜಮೇಂಟ್ನ ರಾಜೇಶ ಯಾವಗಲ್ “” ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವ ನಿರ್ಮಾಣ” ಉಪನ್ಯಾಸ ನೀಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷರಾದ ಶಿವಪುತ್ರಪ್ಪ ನುಚ್ಛಂಬ್ಲಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
Leave a Comment