ಕಾರವಾರ: – ರಾಜ್ಯ ಸರಕಾರದ ರೈತ ವಿರೋಧಿ ನೀತಿ ಹಾಗೂ ರೈತ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಗುರುವಾರ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ಕಾರವಾರದ ಭಾರತೀಯ ಜನತಾ ಪಕ್ಷದ ಕಛೇರಿಯಿಂದ ಆರಂಭವಾದ ಪ್ರತಿಭಟನಾ ಮೇರವಣಿಗೆ ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು.
ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ರೈತರ ಸಮಸ್ಯೆಗೆ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿಗಳು ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಕಬ್ಬು ಬೆಳೆಗಾರರಿಗೆ ನೀಡಬೇಕಾಗಿರುವ ಬಾಕಿ ಹಣ ಸಂದಾಯ ಮಾಡಬೇಕೆಂದು ಮನವಿಯ ಮೂಲಕ ಆಗ್ರಹಿಸಲಾಗಿದೆ.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಾತನಾಡಿದ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಈ ಸಮ್ಮೀಶ್ರ ಸರ್ಕಾರ
ರೈತ ವಿರೋಧಿ , ಮಹಿಳಾ ವಿರೋಧಿಯಾಗಿದೆ ಎಂದು ಟಿಕೆಗಳ ಸುರಿಮಳೆಗೈದರು ಅಲ್ಲದೇ ಒಬ್ಬ ಮುಖ್ಯಮಂತ್ರಿ ಎಂದರೆ ರಾಜನ ಸ್ಥಾನದಲ್ಲಿ ಇರುವಂತಹ ವ್ಯಕ್ತಿ ಮಹಿಳೆಗೆ ಅವಮಾನ ಆಗುವ ರೀತಿಯಲ್ಲಿ ಮಾತುಗಳನ್ನು ಆಡಿರುವುದು ರಾಜ್ಯದ ದುರ್ದೈವ ಎಂದರು.
ಒಬ್ಬ ರೈತ ಮಹಿಳೆಗೆ ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ ಎಂದು ಕೇಳುವ ಮುಖ್ಯಮಂತ್ರಿ ಹೇಗೆ ರೈತಪರನಾಗಿರುತ್ತಾರೆ…??? ಈಗಾಗಾಲೇ ಜನರಿಗೆ ರೈತ ಪರ ಮುಖ್ಯಮಂತ್ರಿಯ ಹಣೆಬರಹ ತಿಳಿದಿದೆ ಎಂದರು.

ರೈತರ ಸಾಲ ಮನ್ನಾ ಮಾಡುತ್ತೇನೆಂದು ಚುನಾವಣೆಗೆ ಮುನ್ನ ಭರವಸೆ ನೀಡಿರುವ ನೀವು ಒಂದು ಅಧಿವೇಶನ ಕಳೆದು ಎರಡನೇ ಅಧಿವೇಶನ ಬಂದರೂ ಒಬ್ಬ ರೈತನ ಸಾಲಮನ್ನಾ ನಿಮ್ಮಿಂದ ಸಾಧ್ಯ ಆಗಿಲ್ಲ. ರೈತರನ್ನು ಇಷ್ಟು ಕೀಳಾಗಿ ನೋಡುತ್ತಿದ್ದೀರಾ ಅನ್ನೋದು ತಿಳಿಯುತ್ತಿದೆ ಎಂದರು. ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡದ ನೀವು ರೈತರ ಬಗ್ಗೆ ಈ ರೀತಿಯ ಮಾತುಗಳನ್ನು ಹೇಗೆ ಆಡುತ್ತೀರಿ ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಕೆ.ಜಿ. ನಾಯ್ಕ, ಹಳಿಯಾಳ ಬಿ.ಜೆ.ಪಿ. ಪ್ರಮುಖ ಮಾಜಿ ಶಾಸಕರಾದ ಸುನೀಲ್ ಹೆಗಡೆ ಹಾಗೂ ಪ್ರಮುಖರುಗಳಾದ ಜಗದೀಶ್ ನಾಯಕ್, ರಾಜೇಂದ್ರ ನಾಯಕ್, ಮನೋಜ್ ಭಟ್, ಎನ್ ಎಸ್ ಹೆಗಡೆ, ಅನಿಲ ಮುತ್ನಾಳ್, ಸಂತಾನ ಸಾವಂತ, ಶೀವಾಜಿ ನರಸಾನಿ, ಶಂಕರ ಗಳಗಿ, ವಾಸುದೇವ ಪೂಜಾರಿ ಮೊದಲಾದವರು ಇದ್ದರು.



Leave a Comment