• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಬರೀಮಲೈ ದೇವಸ್ಥಾನದ ಧರ್ಮಪರಂಪರೆಗಳ ರಕ್ಷಣೆ ಮಾಡಲು ಸಂಸತ್ತಿನಲ್ಲಿ ಕಾನೂನು ಮಾಡಬೇಕು ಹಾಗೂ ಪ್ರತಿಭಟನೆ ಮಾಡುತ್ತಿರುವ ಭಕ್ತರ ಮೇಲೆ ಹೇರಿದ ಅಪರಾಧಗಳನ್ನು ತಕ್ಷಣ ರದ್ದುಪಡಿಸಬೇಕು

November 30, 2018 by Vivek Shet Leave a Comment

rashtriya hindu andolan honnavar

ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಎಲ್ಲ ವಯಸ್ಸಿನ ಮಹಿಳೆಯರು ದೇವಸ್ಥಾನದೊಳಗೆ ಪ್ರವೇಶ ಮಾಡಬಹುದು, ಎಂದು ಸರ್ವೋಚ್ಚ ನ್ಯಾಯಾಲಯವು ನಿರ್ಣಯವನ್ನು ನೀಡಿದೆ. ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದ ನಂತರ ಕೇರಳ ರಾಜ್ಯದ ತಿರುವನಂತಪುರಮ್, ಕೊಲ್ಲಮ್, ಅಲಾಪ್ಪುಜಾ, ಪಠಾನಮತಿಟ್ಟಾ, ಎರ್ನಾಕುಲಮ್ ಮತ್ತು ಪಾಲಕ್ಕಾಡ್‍ನಲ್ಲಿ ಅನೇಕ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಮಹಿಳೆಯರು ಮತ್ತು ಪುರುಷರು ಬ್ರಹತ್ಪ್ರಮಾಣದಲ್ಲಿ ನಿಷೇಧ ಮೆರವಣಿಗೆಗಳನ್ನು ಆಯೋಜಿಸಿಲಾಯಿತು ಹಾಗೂ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿದರು. ಹೀಗೆ ಪ್ರತಿಭಟನೆ ಮಾಡಿದ 3500 ಕ್ಕಿಂತಲೂ ಹೆಚ್ಚು ಭಕ್ತರನ್ನು ಕೇರಳದ ಪೆÇಲೀಸರು ಬಂಧಿಸಿ ಅವರ ಮೇಲೆ ಅಪರಾಧಗಳನ್ನು ದಾಖಲಿಸಿದ್ದಾರೆ. ಧರ್ಮಪರಂಪರೆಯ ರಕ್ಷಣೆಗಾಗಿ ಕಾನೂನು ಮಾರ್ಗದಲ್ಲಿ ಪ್ರತಿಭಟನೆ ಮಾಡುವ ಭಕ್ತರ ಮೇಲೆ ಅಪರಾಧವನ್ನು ದಾಖಲಿಸುವುದು ಹಾಗೂ ಅವರನ್ನು ಬಂಧಿಸುವುದು ದುರ್ಭಾಗ್ಯ ಹಾಗೂ ನಿಂದನೀಯ ವಿಷಯವಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಭಕ್ತರ ಮೇಲೆ ದಾಖಲಿಸಿದ ಅಪರಾಧಗಳನ್ನು ತಕ್ಷಣ ರದ್ದುಪಡಿಸಬೇಕು ಹಾಗೂ ಶಬರೀಮಲೈ ದೇವಸ್ಥಾನದ ಧರ್ಮಪರಂಪರೆಗಳ ರಕ್ಷಣೆಗಾಗಿ ಕೇಂದ್ರ ಸರಕಾರ ಸಂಸತ್ತಿನಲ್ಲಿ ಕಾನೂನು ಮಾಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರಶೇಖರ ಮೇಸ್ತಇವರು ಹೊನ್ನಾವರದ ಶರಾವತಿ ವೃತ್ತದಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನದಲ್ಲಿ ವಿನಂತಿಸಿದರು.

ಹಿಂದೂಗಳ ಭಾವನೆಗಳು ಕೆರಳುವ ಮೊದಲು ಸರ್ಕಾರ ಸನ್ನಿ ಲಿಯೋನ ನಟಿಸುತ್ತಿರುವ
`ವೀರಮ್ಮಾದೇವಿ’ ಚಲನಚಿತ್ರದ ಚಿತ್ರೀಕರಣವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು!
ದಕ್ಷಿಣ ಭಾರತದ ವೀರಾಂಗನೆ `ವೀರಮ್ಮಾದೇವಿ’ಯ ಜೀವನಾಧಾರಿತ ಪ್ರದರ್ಶನಗೊಳ್ಳಲಿರುವ ಚಲನಚಿತ್ರದಲ್ಲಿ ಕೆನಡಾದ ಪ್ರಜೆಯಾಗಿರುವ `ಪೋರ್ನ ನಟಿ’ ಮತ್ತು ಈಗಿನ ಭಾರತೀಯ ಚಲನಚಿತ್ರರಂಗದಲ್ಲಿ ಕುಪ್ರಸಿದ್ಧವಾಗಿರುವ ಸನ್ನಿ ಲಿಯೋನ್ ಹಿಂದೂ ಸಾಮ್ರಾಜ್ಞಿ ರಾಣಿ `ವೀರಮ್ಮಾದೇವಿ’ಯ ಪಾತ್ರವನ್ನು ನಿರ್ವಹಿಸಲಿದ್ದಾಳೆ. ಇದು ಅಕ್ಷಮ್ಯ ಹಾಗೂ ನಿಷೇದಾರ್ಹವಾಗಿದೆ. ಈ ಚಲನಚಿತ್ರದ ಚಿತ್ರೀಕರಣ ಈಗ ಪ್ರಾರಂಭವಾಗಿದ್ದು, ಚಲನಚಿತ್ರವು ಹಿಂದೂಗಳ ಭಾವನೆಯನ್ನು ಕೆರಳಿಸುತ್ತಿದೆ. ಅನೇಕ ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ಸನ್ನಿ ಲಿಯೋನಳ ಪ್ರತಿಕೃತಿಯನ್ನು ಸುಟ್ಟಿದ್ದು, ನಿಷೇಧ ಆಂದೋಲನ ಮುಂತಾದವುಗಳ ಮುಖಾಂತರ ವಿರೋಧಿಸುತ್ತಿದ್ದಾರೆ. ಈ ಕಾರಣದಿಂದ ಹಿಂದೂಗಳ ಭಾವನೆ ಕೆರಳುವ ಪೂರ್ವದಲ್ಲಿಯೇ ಕೇಂದ್ರ ಸರಕಾರ ಹಾಗೂ ಕರ್ನಾಟಕ ಸರಕಾರ ಸನ್ನಿ ಲಿಯೋನ ನಟಿಸುತ್ತಿರುವ `ವೀರಮ್ಮಾದೇವಿ’ ಚಲನಚಿತ್ರದ ಚಿತ್ರೀಕರಣವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು, ಚಲನಚಿತ್ರದ ಚಿತ್ರೀಕರಣಕ್ಕಾಗಿ ನೀಡಲಾಗುವ ಎಲ್ಲ ಅನುಮತಿಗಳನ್ನು ರದ್ದುಗೊಳಿಸಬೇಕು ಅಲ್ಲದೇ, ಅವಶ್ಯಕತೆ ಎನಿಸಿದಲ್ಲಿ ಕೇಂದ್ರ ಸರಕಾರವು ಈ ಚಲನಚಿತ್ರವನ್ನು ನಿರ್ಬಂಧಿಸಬೇಕು ಎಂದು ಈ ಸಮಯದಲ್ಲಿ ಕೋರಲಾಯಿತು. ಒಂದು ವೇಳೆ ಸರಕಾರವು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸದೇ ಇದ್ದಲ್ಲಿ ,ಇದಕ್ಕಿಂತ ತೀವ್ರ ಸ್ವರೂಪದ ವ್ಯಾಪಕವಾಗಿ ಪ್ರತಿಭಟನೆಯನ್ನು ಜರುಗಿಸಲಾಗುವುದೆಂದು ಎಚ್ಚರಿಕೆಯನ್ನು ಸಹ ನೀಡಲಾಯಿತು.
ಇದೇ ಸಮಯದಲ್ಲಿ ಕೇರಳದ ನನ್ ಮೇಲಾಗಿರುವ ಬಲತ್ಕಾರ ಪ್ರಕರಣದಲ್ಲಿನ ಮುಖ್ಯ ಸಾಕ್ಷಿದಾರರಾಗಿದ್ದ ಫಾದರ್ ಕುರಿಯಾಕೋಸ್ ಇವರ ಸಂಶಯಾಸ್ಪದ ಮರಣದ ತನಿಖೆ ಮಾಡಬೇಕು ಹಾಗೂ ಆರೋಪಿ ಬಿಶಪ್ ಫ್ರೈಂಕೋ ಮುಲಕ್ಕಲ್ ಇವರ ಜಾಮೀನನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಸಹ ಇಡಲಾಯಿತು !
ಈ ಸಂಧರ್ಭದಲ್ಲಿ ಅಯ್ಯಪ್ಪ ಸ್ವಾಮಿಗಳಾದ ಶ್ರೀ ಸಂತೋಷ ಮೇಸ್ತ, ಸ್ವಾಮಿ ರಾಹುಲ್ ಮೇಸ್ತ, ಸ್ವಾಮಿ ಸಚಿನ್ ಮೇಸ್ತ, ಹಿಂದೂ ಧರ್ಮಾಭಿಮಾನಿಗಳಾದ ಶ್ರೀ ರಮೇಶ ನಾಯ್ಕ, ಶ್ರೀ ಎಮ್.ಡಿ.ಮಡಿವಾಳ, ಶ್ರೀ ರಾಘು ಶೇಟ, ಶ್ರೀ ಸತ್ಯನಾರಾಯಣ ಶೇಟ, ಶ್ರೀ ಪ್ರಥಮ ಮೇಸ್ತ, ಸೌ.ನವೀತಾ ಕಾಮತ, ಸೌ.ಕಲ್ಪನಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

rashtriya hindu andolan honnavar

 

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News, Canara News Tagged With: ತಕ್ಷಣ ರದ್ದುಪಡಿಸಬೇಕು, ಧರ್ಮಪರಂಪರೆಗಳ ರಕ್ಷಣೆ, ಪ್ರತಿಭಟನೆ ಮಾಡುತ್ತಿರುವ, ಭಕ್ತರ ಮೇಲೆ ಹೇರಿದ ಅಪರಾಧ, ಮಾಡಬೇಕು, ವೀರಮ್ಮಾದೇವಿ' ಚಲನಚಿತ್ರ, ಶಬರಿಮಲೆ ದೇವಸ್ಥಾನ, ಶಬರೀಮಲೈ ದೇವಸ್ಥಾನ, ಸಂಸತ್ತಿನಲ್ಲಿ ಕಾನೂನು

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...