ಹಳಿಯಾಳ:- 4ಜಿ ಸೇವೆ ಆರಂಭಿಸಲು ಏರಟೆಲ್ ಕಂಪೆನಿಯವರು ಪಟ್ಟಣದಲ್ಲಿ ಕೆಬಲ್ ಲೈನ್ ಅಳವಡಿಸಲು ರಸ್ತೆ ಬದಿ ಗುಂಡಿಗಳನ್ನು ತೆಗೆಯುತ್ತಿರುವಾಗ ಪಟ್ಟಣಕ್ಕೆ ನೀರು ಪೂರೈಸುತ್ತಿರುವ ಪೈಪಲೈನ್ಗಳಿಗೆ ಹಾನಿ ಮಾಡಿ ಲಕ್ಷಾಂತರ ಲೀ.ನೀರು ಚರಂಡಿ ಪಾಲಾಗುತ್ತಿರುವುದಕ್ಕೆ ಪಟ್ಟಣದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿ ಏರಟೆಲ್ ಕಂಪೆನಿಯವರು 4 ಜಿ ಕೆಬಲ್ ಲೈನ್ ಅಳವಡಿಸಲು ಯಂತ್ರಗಳ ಮೂಲಕ ರಸ್ತೆ ಬದಿ ರಂಧ್ರಗಳನ್ನು ತೊಡುತ್ತಿದ್ದಾರೆ. ಪುರಸಭೆಯ ಗಮನಕ್ಕೆ ತಂದು ನೀರು ಪೂರೈಸುವ ಪೈಪಲೈನ್ಗಳ ಮಾಹಿತಿ ಪಡೆಯದೇ ರಾತ್ರಿ 1 ಗಂಟೆ ನಂತರ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರು ಸುಮಾರು 4 ಕಡೆಗಳಲ್ಲಿ 24*7 ನೀರು ಪೂರೈಸುವ ಪೈಪ್ಲೈನಗಳಿಗೆ ಭಾರಿ ಹಾನಿ ಉಂಟು ಮಾಡಿದ್ದು ಲಕ್ಷಾಂತರ ಲೀ. ಶುದ್ದ ಕುಡಿಯುವ ನೀರು ಚರಂಡಿಯ ಪಾಲಾಗಿದೆ.
ಪ್ರಕರಣ ದಾಖಲು :- ಈ ಕುರಿತು ಪಟ್ಟಣದ ಜನ ಹಾಗೂ ವಿವಿಧ ಸಂಘಟನೆಯವರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪುರಸಭೆಯವರು ಎಚ್ಚೆತ್ತುಕೊಂಡು ಗುತ್ತಿಗೆದಾರರ ವಿರುದ್ದ ಹಳಿಯಾಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಪುರಸಭೆಗೆ ಹಾನಿ ಮಾಡಿದ್ದಕ್ಕೆ ದಂಡವನ್ನು ವಿಧಿಸಲಾಗಿದೆ ಎಂದು ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ದಂಡ ವಿಧಿಸಲಾಗುವುದು:– ಇನ್ನೂ ಕೆಬಲ್ ಲೈನ್ ಅಳವಡಿಸಲು ಅನುಮತಿ ನೀಡಿರುವ ಹಳಿಯಾಳ ಪಿಡಬ್ಲೂಡಿಯವರು ಕೂಡ ಈ ಬಗ್ಗೆ ಕಾಮಗಾರಿ ನಡೆಸುವವರ ವಿರುದ್ದ ಕಠಿಣ ಕ್ರಮ ಕೈಗೊಂಡು ರಸ್ತೆ, ಫುಟಪಾತ್ ಹಾಳು ಮಾಡಿದ್ದರ ಕುರಿತು ದಂಡ ವಿಧಿಸಲಾಗುವುದು ಎಂದು ಪಿಡಬ್ಲೂಡಿ ಅಧಿಕಾರಿ ಕುಲಕಣ ್ ತಿಳಿಸಿದ್ದಾರೆ.
ಈ ಹಿಂದೆ ಜಿಯೋ ಕಂಪೆನಿಯವರು ಹಳಿಯಾಳದಲ್ಲಿ ಇದೆ ರೀತಿಯ ಕಾಮಗಾರಿ ನಡೆಸುತ್ತಿರುವಾಗ ಹೀಗೆಯೇ ಜನಸಾಮಾನ್ಯರಿಗೆ ತೊಂದರೆ ನೀಡಿದ್ದರಲ್ಲದೇ ರಸ್ತೆ, ಫುಟಪಾತ್ ಹಾಗೂ ನೀರು ಪೂರೈಸುವ ಪೈಪಲೈನಗಳಿಗೆ ಭಾರಿ ಹಾನಿ ಮಾಡಿದ್ದರು ಆದರೇ ಅವರು ವಿರುದ್ದ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಈಗ ಏರಟೆಲ್ನವರು ಕಾಮಗಾರಿ ನಡೆಸುತ್ತಿದ್ದು ಸದ್ಯ ಪ್ರಾರಂಭವಾಗಿರುವ ಕಾಮಗಾರಿಗೆ ಇನ್ನೂ ಹಳಿಯಾಳದಲ್ಲಿ ಎಷ್ಟು ಹಾನಿ ಮಾಡಿ ಜನರಿಗೆ ತೊಂದರೆ ನೀಡಲಿದ್ದಾರೋ ಎನ್ನುವುದು ಪಟ್ಟಣದ ಜನರ ಆತಂಕವಾಗಿದೆ.
ನೀರು ಪೂರೈಕೆಯಲ್ಲಿ ವ್ಯತೆಯ:- ಪಟ್ಟಣದ ಹಲವೆಡೆ ಈಗಾಗಲೇ ನೀರು ಪೂರೈಕೆಯಲ್ಲಿ ವ್ಯತೆಯ ಮಾಡಲಾಗುತ್ತಿದೆ. ಈಗ ಪೈಪಲೈನಗಳು ಹಾನಿಗೊಳಗಾಗಿದ್ದರಿಂದ ಮತ್ತೇ ನೀರಿನ ಸರಬರಾಜಿನಲ್ಲಿ ಸಮಸ್ಯೆ ಎದುರಾಗಲಿದ್ದು ಸಾರ್ವಜನೀಕರು ಸಹಕರಿಸುವಂತೆ ಪುರಸಭೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
Leave a Comment