• Skip to content
  • Skip to secondary menu
  • Skip to primary sidebar
  • Home
  • Business Directory
    • Add Listing
  • JOBS
  • Telecom offers
  • Entertainment
  • Sports
  • Contact Numbers

Canara Buzz

Daily Updated Canara News

  • Honavar
  • Kumta
  • Ankola
  • Bhatkal
  • Karwar
  • Sirsi
  • Siddapura
  • Haliyal

ಕಾನೂನು ಬದ್ದವಲ್ಲದ ಗುತ್ತಿಗೆ ಪದ್ದತಿಯ ವಿರುದ್ದ ಸದನದಲ್ಲಿ ಧ್ವನಿ ಎತ್ತುವಂತೆ – ವಿಪ‌ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಗೆ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೇದಿಕೆ ಆಗ್ರಹ.

December 7, 2018 by yogaraj sk Leave a Comment

health dept GUttige karmikara manavi - to SL ghotnekar

ಹಳಿಯಾಳ:- ಹಲವು ರೀತಿಯ ಕಾನೂನುಗಳ ಉಲ್ಲಂಘಟನೆಗೆ, ಸರ್ಕಾರ ಕಾರ್ಯಕ್ಷಮತೆ ಕುಂದುವುದಕ್ಕೆ ಮತ್ತು ಕನಿಷ್ಠ ಮಾನವೀಯ ಹಕ್ಕುಗಳು ಇಲ್ಲದಂತೆ ಮಾಡುತ್ತಿರುವ ಕಾನೂನು ಬದ್ದವಲ್ಲದ ಗುತ್ತಿಗೆ ಪದ್ದತಿಯ ವಿರುದ್ದ ಸದನದಲ್ಲಿ ಧ್ವನಿ ಎತ್ತುವಂತೆ ಆಗ್ರಹಿಸಿ ಕರ್ನಾಕಟ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೇದಿಕೆಯವರು ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ಗುತ್ತಿಗೆ ನೌಕರರ ಮಹಾಒಕ್ಕೂಟಕ್ಕೆ ಸಂಯೋಜಿತವಾಗಿರುವ ಈ ವೇದಿಕೆಯವರು ಕಾನೂನು ಬದ್ದವಲ್ಲದ ಗುತ್ತಿಗೆ ಪದ್ದತಿಯನ್ನು ಸ್ವತಃ ಸರ್ಕಾರಿ ಇಲಾಖೆಗಳಲ್ಲೇ ಜೀವಂತವಾಗಿಟ್ಟಿರುವುದು ನಾಡಿನ ದುರ್ದೈವ ಎಂದಿದ್ದಾರೆ.
ವಿಪ ಸದಸ್ಯರಿಗೆ ಸಲ್ಲಿಸಿದ ಮನವಿಯಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳು ಅಸ್ತಿತ್ವದಲ್ಲಿ ಇರುವ ಗುತ್ತಿಗೆ ಪದ್ದತಿಯು ವಾಸ್ತವದಲ್ಲಿ ಕಾನೂನು ಬದ್ದವಲ್ಲ 1969 ರ ಗುತ್ತಿಗೆ ಕಾರ್ಮಿಕ(ನಿಯಂತ್ರಣ ಮತ್ತು ರದ್ದತಿ) ಕಾಯ್ದೆ ಪ್ರಕಾರ ವರ್ಷ ಪೂರ್ತಿ ಕೆಲಸ ನಡೆಯುವ ಯಾವುದೇ ಕೆಲಸದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವಂತಿಲ್ಲ ಎಂದಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ ಅವರು ಕಾರ್ಮಿಕ ಸಚಿವರಾದಾಗ ರೂಪಿಸಿದ ಇಂಡಸ್ಟ್ರೀಯಲ್ ಎಂಪ್ಲಾಯಮೆಂಟ್ ಸ್ಟಾಂಡಿಂಗ್ ಆರ್ಡರ್ಸ್ ಆಕ್ಟ್ ಪ್ರಕಾರವು ಸೀಮಿತ ಅವಧಿಗೆ ನೌಕರರನ್ನು ಕೆಸಲಕ್ಕೆ ನೇಮಿಸಿಕೊಂಡು ನಂತರ ತೆಗೆದು ಹಾಕುವಂತಿಲ್ಲ ಆದರೇ ಈ ಕಾಯ್ದೆಗಳ ಜಾರಿಗೆ ಇರುವ ಕೆಲಸ ಹಾಗೂ ತಾಂತ್ರಿಕ ತೊಡಕುಗಳನ್ನು ಬಳಸಿಕೊಂಡು ನಿಯಮವನ್ನು ಉಲ್ಲಂಘೀಸಲಾಗುತ್ತಿದೆ. ಇದರಿಂದ ಕೆಲಸದ ಭದ್ರತೆ ಇಲ್ಲವಾದುದ್ದರಿಂದ ಕನಿಷ್ಠ ವೇತನ ಕಾಯ್ದೆ, ಇಎಸ್‍ಐ, ಪಿಎಫ್, ತೇರಿಗೆ ಸೌಲಭ್ಯ ಕಾಯ್ದೆ, ಗ್ರಾಚ್ಯೂವಿಟಿ, ಗುತ್ತಿಗೆ ಕಾರ್ಮಿಕ ಕಾಯ್ದೆ, ವೇತನ ನೀಡಿಕೆ ಕಾಯ್ದೆಯು ಸೇರಿದಂತೆ ಹಲವು ಕಾಯ್ದೆಗಳು ಜಾರಿಯಾಗದೆ ಕಾರ್ಮಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ.
ಕಾಯ್ದೆಗಳನ್ನು ಜಾರಿ ಮಾಡಲು ಯಾರಾದರೂ ಕೇಳಿದರೇ ಅವರನ್ನು ಕೆಲಸದಿಂದ ತೆಗೆಯಲಾಗುತ್ತದೆ. ಈ ಬಗ್ಗೆ ಸಂಪೂರ್ಣ ಅರಿವಿದ್ದರು ಗುತ್ತಿಗೆ ಪದ್ದತಿಗೆ ಸರ್ಕಾರವು ಅನುವು ಮಾಡಿಕೊಟ್ಟಿರುವುದು ಅಲ್ಲದೇ ಸ್ವಂತ ಸರ್ಕಾರಿ ಇಲಾಖೆಗಳಲ್ಲೇ ಈ ಪದ್ದತಿಯನ್ನು ಜೀವಂತವಾಗಿಡಲಾಗಿರುವುದು ದುಃಖದ ಸಂಗತಿ ಎಂದು ಬೇಸರ ಹೊರಹಾಕಿರುವ ವೇದಿಕೆಯವರು ಕರ್ನಾಟಕದಲ್ಲಿ ಲಕ್ಷಾಂತರ ಗುತ್ತಿಗೆ ನೌಕರರು ಸರ್ಕಾರಿ ಇಲಾಖೆಗಳಲ್ಲಿ ಹೋರಗುತ್ತಿಗೆ, ಒಳಗುತ್ತಿಗೆ, ಗೌರವ ಧನ, ಸ್ಟೈಪಂಡ್ರಿ ಇತ್ಯಾದಿ ಹೆಸರುಗಳಡಿ ನೇಮಕಗೊಂಡು ಕೆಲಸ ಮಾಡುತ್ತಿದ್ದು ಇವರಿಗೆ ಭದ್ರತೆ ಇಲ್ಲವಾಗಿದೆ.
ಅಲ್ಲದೇ ಗುತ್ತಿಗೆದಾರರು ಈ ಗುತ್ತಿಗೆ ಕೆಲಸಕ್ಕೆ ಸೇರಿಕೊಳ್ಳಲು ಸಹ 20 ಸಾವಿರ ರೂ.ನಿಂದ 50 ಸಾವಿರ ರೂ. ಹಣವನ್ನು ಸಂಬಂಧಪಟ್ಟವರು ತೆಗೆದುಕೊಳ್ಳುತ್ತಿರುವ ಸಾಕಷ್ಟು ನಿದರ್ಶನಗಳು ಇವೆ ಹಾಗೂ ಕೆಲಸದ ಸ್ಥಳದಲ್ಲಿ ಅಸಮಾನತೆ, ತಾರತಮ್ಯ, ಶೋಷಣೆಗಳು ನಿರಂತರವಾಗಿ ನಡೆಯುತ್ತಿವೆ. 8ರಿಂದ 10 ತಿಂಗಳವರೆಗೆ ಗುತ್ತಿಗೆ ನೌಕರರಿಗೆ ವೇತನವನ್ನೇ ನೀಡದೆ ಸರ್ಕಾರದ ಇಲಾಖೆಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆ.
ಈ ಬಗ್ಗೆ ಗುತ್ತಿಗೆ ನೌಕರರ ಒಕ್ಕೂಟವು ನೀಡಿದ ದೂರಿನನ್ವಯ ರಾಜ್ಯ ಮಾನವ ಹಕ್ಕು ಆಯೋಗವು ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ಸಹ ನೀಡಿದೆ ಎಂದಿರುವ ವೇದಿಕೆಯವರು ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಬೇಕೆಂಬ ಸಂವಿಧಾನದ ಆಶಯ ಗುತ್ತಿಗೆ ಕಾರ್ಮಿಕ ಕಾಯ್ದೆಯ ನಿಯಮ ಮತ್ತು ಸುಪ್ರಿಂ ಕೊರ್ಟಿನ ತೀರ್ಪಿನ ಉಲ್ಲಂಘನೆಯು ಸತತವಾಗಿ ಆಗುತ್ತಿದ್ದು ಕೂಡಲೇ ತಾವುಗಳು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ನೊಂದ ಕಾರ್ಮಿಕರಿಗೆ ಧ್ವನಿಯಾಗಬೇಕೆಂದು ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸುವಾಗ ವೇದಿಕೆಯ ಬಿಪಿಎಮ್ ಚೆನ್ನಬಸವರಾಜ, ಡಾ.ವಿಶ್ವನಾಥ, ಡಾ.ಸಂಕೇತ, ಡಾ.ಶೀಲಾ, ಶಾಂತಾ ಎಚ್, ರೇಣುಕಾ, ಜರಿನಾ, ದೀಪಾ, ಬಸವರಾಜ ಮೊದಲಾದವರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related

Filed Under: Haliyal news, Local News Tagged With: ಕಾನೂನು ಬದ್ದವಲ್ಲದ ಗುತ್ತಿಗೆ ಪದ್ದತಿ, ಗುತ್ತಿಗೆ ನೌಕರರ ವೇದಿಕೆ ಆಗ್ರಹ, ಮಹಾಒಕ್ಕೂಟಕ್ಕೆ ಸಂಯೋಜಿತ, ರಾಜ್ಯ ಆರೋಗ್ಯ ಇಲಾಖೆಯ, ವಿಪ‌ ಸದಸ್ಯ ಎಸ್.ಎಲ್.ಘೋಟ್ನೇಕರ, ವಿರುದ್ದ, ಸದನದಲ್ಲಿ ಧ್ವನಿ ಎತ್ತುವಂತೆ

yogaraj sk

About yogaraj sk

Reader Interactions

Leave a Reply Cancel reply

Primary Sidebar

Thousands of people visit Canara Buzz everyday. You can advertise on our website at affordable prices starting from just ₹1000. Write to [email protected] with your details and we will call you back.

© 2019 Canara Buzz · Privacy Policy · Disclaimer · Terms & Conditions · Hosted by WPfog

loading Cancel
Post was not sent - check your email addresses!
Email check failed, please try again
Sorry, your blog cannot share posts by email.