
ಸಿದ್ದಾಪುರ :
ಜಿಲ್ಲೆಯಲ್ಲಿ ನಾಮಧಾರಿಗಳು ಬಹುಸಂಖ್ಯಾತರಿದ್ದೇವೆ. ಆರ್ಥಿಕ ಸುಧಾರಣೆಯ ಜೊತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಶಿಕ್ಷಣ ಕೊಡುವ ಮೂಲಕ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಬೇಕಾಗಿದೆ ಎಂದು ಉದ್ಯಮಿ ಭೀಮಣ್ಣ ನಾಯ್ಕ ಶಿರಸಿ ಹೇಳಿದರು.
ಅವರು ಪಟ್ಟಣದ ರಾಘವೇಂದ್ರಮಠದ ಸಭಾಂಗಣದಲ್ಲಿ ತಾಲೂಕು ಆರ್ಯ ಈಡಿಗ ನಾಮಧಾರಿ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಸಮಾಜದ ಎಲ್ಲರೂ ಒಂದಾಗಿ ಸಂಘಟನೆಯ ಶಕ್ತಿಯನ್ನು ಬಲಗೊಳಿಸಬೇಕು ಎಂದರು.

ಇಂದು ಉನ್ನತ ಶಿಕ್ಷಣಕ್ಕೆ ಹೋಗಲು ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಆರ್ಥಿಕ ತೊಂದರೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು. ನಿಮ್ಮ ಜೊತೆಗೆ ಸಮಾಜ ಇದೆ ಸಂಘಟನೆ ಇರುವದನ್ನು ಮರೆಯಬಾರದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿಯ ಡಿವೈಎಸ್ಪಿ ಉಮೇಶ ನಾಯ್ಕ ಮಾತನಾಡಿ ಇನ್ನೊಬ್ಬರು ಸಹಾಯಮಾಡುತ್ತಾರೆಂದಲ್ಲ, ನಾನು ಸಾಧಿಸಬೇಕೆಂಬ ಛಲವನ್ನ ವಿದ್ಯಾರ್ಥಿಗಳು ಗಳಿಸಿಕೊಳ್ಳಬೇಕು ಎಂದರು.
ಎಸ್ಎಸ್ಎಲ್ ಸಿ, ಪಿಯುಸಿ, ಪದವಿ, ಹಾಗೂ ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ತಾಲೂಕು ಆರ್ಯ ಈಡಿಗ ನಾಮಧಾರಿ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಜಿ. ಐ. ನಾಯ್ಕ, ಅಧ್ಯಕ್ಷತೆ ವಹಿಸಿದ್ದರು.
ಎಪಿಎಂಸಿ ಅಧ್ಯಕ್ಷ ಕೆ.ಜಿ ನಾಗರಾಜ, ಗುತ್ತಿಗೆದಾರ ಹನುಮಂತ ನಾಯ್ಕ ಕುಣಜಿ, ಬಿ.ಆರ್ ನಾಯ್ಕ ಹೆಗ್ಗಾರಕೈ, ಡಾ.ಲಕ್ಷ್ಮೀಕಾಂತ ನಾಯ್ಕ, ಜಿ.ಪಂ ಸದಸ್ಯೆ ಸುಮಂಗಲಾ ವಸಂತ ನಾಯ್ಕ, ರಂಗನಾಥ ಬಿ.ಎನ್ ಶಿರಸಿ, ಸಿ.ಎನ್ ನಾಯ್ಕ, ಕೆ.ಆರ್ ವಿನಾಯಕ ಇತರರಿದ್ದರು.
ಆರ್.ಆರ್ ನಾಯ್ಕ ಅವರಗುಪ್ಪ ಸ್ವಾಗತಿಸಿದರು. ಲೋಕೆಶ ಕೆ ನಾಯ್ಕ ವರದಿ ಓದಿದರು. ಉಮೇಶ ಪ್ರಾಸ್ತಾವಿಕ ಮಾತನಾಡಿದರು. ಎಂ.ಕೆ ನಾಯ್ಕ ಹೊಸಳ್ಳಿ ಪರಿಚಯಿಸಿದರು. ಮೊಹಿನಿ ನಾಯ್ಕ, ಎಂ.ಎನ್.ನಾಯ್ಕ ನಿರ್ವಹಿಸಿದರು.
Leave a Comment