
ಸಿದ್ದಾಪುರ :
ಕಕ್ಷಿದಾರರ ಪರದಾಟ , ಪೋಲಿಸರಿಗೆ ಧರ್ಮ ಸಂಕಟ , ಸಿಬ್ಬಂದಿಗಳಿಗೆ ವರ್ಗಾವಣೆಯ ಕಾಟ. ಇದು ಕಳೆದ 7 ತಿಂಗಳಿಂದ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಲ್ಲದೆ ಇರುವುದರಿಂದ ಉಂಟಾಗಿರುವ ಪರಿಸ್ಥಿತಿ.
ಸಿದ್ದಾಪುರದ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಹನುಮಂತ ಜಿ ಹೆಚ್ ರವರು 22 ಮೇ 2018 ರಂದು ಕನಕಪುರಕ್ಕೆ ವರ್ಗಾವಣೆಯಾಗಿದ್ದಾರೆ.
ಶನಿವಾರಕ್ಕೆ ಒಮ್ಮೆ ನ್ಯಾಯಾಧೀಶರು :-
ನ್ಯಾಯಾಧೀಶರ ವರ್ಗಾವಣೆ ಆದ ಬಳಿಕ ಈವರೆಗೆ ವಾರದಲ್ಲಿ ಒಂದು ದಿನ ಮಾತ್ರ ಅಂದರೆ ಶನಿವಾರ ಉಸ್ತುವಾರಿ ನ್ಯಾಯಾಧೀಶರು ಶಿರಸಿಯಿಂದ ಬರುತ್ತಿದ್ದಾರೆ. ಇದರಿಂದ ಪ್ರಕರಣಗಳ ವಿಚಾರಣೆ ಮತ್ತು ಇತ್ಯರ್ಥಗಳು ವಿಳಂಬವಾಗುತ್ತಿದ್ದು ಕಕ್ಷಿದಾರರು ಪರದಾಡುವಂತಾಗಿದೆ.
ಇನ್ನು ವಕೀಲಿ ವ್ರತ್ತಿಯನ್ನೇ ಅವಲಂಭಿಸಿರುವ ವಕೀಲರಿಗೂ ಸಮಸ್ಯೆ ಉಂಟಾಗಿದೆ.
ಶಿರಸಿಗೆ ಹೊಗಬೇಕು :-
ಇನ್ನು ಪೋಲಿಸರಂತು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದರೆ ಶಿರಸಿ ನ್ಯಾಯಾಲಯಕ್ಕೆ ಕರೆದುಕೊಂಡು ಹೊಗಬೇಕಾದ ಧರ್ಮ ಸಂಕಟಕ್ಕೆ ಒಳಗಾಗಿದ್ದಾರೆ.
ಮೊದಲೆ ಸಿಬ್ಬಂದಿ ಕೊರತೆ ಅನುಭವಿಸುತ್ತಿರುವ ಪೋಲಿಸರಿಗೆ ಆರೋಪಿಗಳನ್ನು ಶಿರಸಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಬೇಕಾಗಿರುವುದು ಹೆಚ್ಚಿನ ಜವಾಬ್ದಾರಿಯಾಗಿದೆ.
ಸಿಬ್ಬಂದಿ ಸಮಸ್ಯೆ :-
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲೂ ಸಿಬ್ಬಂದಿಗಳ ಕೊರತೆ ಇದೆ. ಸಿದ್ದಾಪುರ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಇಲ್ಲದಿರುವುದರಿಂದ ಸಿದ್ದಾಪುರ ನ್ಯಾಯಾಲಯದ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ನ್ಯಾಯಾಧೀಶರನ್ನು ಹೊರತುಪಡಿಸಿ 28 ಸಿಬ್ಬಂದಿ ಇರಬೇಕಾದ ನ್ಯಾಯಾಲಯದಲ್ಲಿ ಕೆಲವೆ ಕೆಲವು ಸಿಬ್ಬಂದಿಗಳು ಮಾತ್ರ ಇದ್ದಾರೆ. ಇವರನ್ನು ಕೂಡ ವರ್ಗಾವಣೆ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕೂಡಲೇ ನ್ಯಾಯಾಧೀಶರ ನೇಮಕ ಅನಿವಾರ್ಯ :-
ಅನೇಕ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು ವಾರಕ್ಕೊಮ್ಮೆ ನ್ಯಾಯಾದೀಶರು ಬರುವದರಿಂದಾಗಿ ಪ್ರಕರಣಗಳ ಇತ್ಯರ್ಥಕ್ಕೆ ವಿಳಂಬವಾಗುತ್ತಿದೆ. ಕೂಡಲೆ ಸಿದ್ದಾಪುರಕ್ಕೆ ಖಾಯಂ ನ್ಯಾಯಾದೀಶರನ್ನು ನೇಮಕ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
Leave a Comment