• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

7 ತಿಂಗಳಿಂದ ಸಿದ್ದಾಪುರ ನ್ಯಾಯಾಲಯದಲ್ಲಿ ಖಾಯಂ ನ್ಯಾಯಾಧೀಶರಿಲ್ಲದೆ ವಿಳಂಬವಾಗುತ್ತಿವೇ ಪ್ರಕರಣದ ಇತ್ಯರ್ಥ.

December 24, 2018 by Nagaraj Naik Leave a Comment

watermarked IMG 20181224 WA0046
ಸಿದ್ದಾಪುರ :
ಕಕ್ಷಿದಾರರ ಪರದಾಟ ,  ಪೋಲಿಸರಿಗೆ ಧರ್ಮ ಸಂಕಟ , ಸಿಬ್ಬಂದಿಗಳಿಗೆ ವರ್ಗಾವಣೆಯ ಕಾಟ. ಇದು ಕಳೆದ 7 ತಿಂಗಳಿಂದ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಲ್ಲದೆ ಇರುವುದರಿಂದ ಉಂಟಾಗಿರುವ ಪರಿಸ್ಥಿತಿ.
 ಸಿದ್ದಾಪುರದ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಹನುಮಂತ ಜಿ ಹೆಚ್ ರವರು 22 ಮೇ 2018 ರಂದು ಕನಕಪುರಕ್ಕೆ ವರ್ಗಾವಣೆಯಾಗಿದ್ದಾರೆ.
ಶನಿವಾರಕ್ಕೆ ಒಮ್ಮೆ ನ್ಯಾಯಾಧೀಶರು :- 
ನ್ಯಾಯಾಧೀಶರ ವರ್ಗಾವಣೆ‌ ಆದ ಬಳಿಕ ಈವರೆಗೆ ವಾರದಲ್ಲಿ ಒಂದು ದಿನ ಮಾತ್ರ ಅಂದರೆ ಶನಿವಾರ ಉಸ್ತುವಾರಿ ನ್ಯಾಯಾಧೀಶರು ಶಿರಸಿಯಿಂದ ಬರುತ್ತಿದ್ದಾರೆ. ಇದರಿಂದ ಪ್ರಕರಣಗಳ ವಿಚಾರಣೆ ಮತ್ತು ಇತ್ಯರ್ಥಗಳು ವಿಳಂಬವಾಗುತ್ತಿದ್ದು ಕಕ್ಷಿದಾರರು  ಪರದಾಡುವಂತಾಗಿದೆ.
 ಇನ್ನು ವಕೀಲಿ ವ್ರತ್ತಿಯನ್ನೇ ಅವಲಂಭಿಸಿರುವ ವಕೀಲರಿಗೂ ಸಮಸ್ಯೆ ಉಂಟಾಗಿದೆ.
ಶಿರಸಿಗೆ ಹೊಗಬೇಕು :- 
 ಇನ್ನು ಪೋಲಿಸರಂತು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದರೆ ಶಿರಸಿ ನ್ಯಾಯಾಲಯಕ್ಕೆ ಕರೆದುಕೊಂಡು ಹೊಗಬೇಕಾದ ಧರ್ಮ ಸಂಕಟಕ್ಕೆ ಒಳಗಾಗಿದ್ದಾರೆ.
ಮೊದಲೆ ಸಿಬ್ಬಂದಿ ಕೊರತೆ ಅನುಭವಿಸುತ್ತಿರುವ ಪೋಲಿಸರಿಗೆ ಆರೋಪಿಗಳನ್ನು ಶಿರಸಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಬೇಕಾಗಿರುವುದು ಹೆಚ್ಚಿನ ಜವಾಬ್ದಾರಿಯಾಗಿದೆ.
ಸಿಬ್ಬಂದಿ‌ ಸಮಸ್ಯೆ :- 
 ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲೂ ಸಿಬ್ಬಂದಿಗಳ ಕೊರತೆ ಇದೆ. ಸಿದ್ದಾಪುರ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಇಲ್ಲದಿರುವುದರಿಂದ ಸಿದ್ದಾಪುರ ನ್ಯಾಯಾಲಯದ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ನ್ಯಾಯಾಧೀಶರನ್ನು ಹೊರತುಪಡಿಸಿ 28 ಸಿಬ್ಬಂದಿ ಇರಬೇಕಾದ ನ್ಯಾಯಾಲಯದಲ್ಲಿ ಕೆಲವೆ ಕೆಲವು ಸಿಬ್ಬಂದಿಗಳು ಮಾತ್ರ ಇದ್ದಾರೆ. ಇವರನ್ನು ಕೂಡ ವರ್ಗಾವಣೆ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕೂಡಲೇ‌ ನ್ಯಾಯಾಧೀಶರ ನೇಮಕ ಅನಿವಾರ್ಯ :-
ಅನೇಕ ಸಿವಿಲ್ ಹಾಗೂ  ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು ವಾರಕ್ಕೊಮ್ಮೆ ನ್ಯಾಯಾದೀಶರು ಬರುವದರಿಂದಾಗಿ ಪ್ರಕರಣಗಳ ಇತ್ಯರ್ಥಕ್ಕೆ ವಿಳಂಬವಾಗುತ್ತಿದೆ. ಕೂಡಲೆ ಸಿದ್ದಾಪುರಕ್ಕೆ ಖಾಯಂ ನ್ಯಾಯಾದೀಶರನ್ನು ನೇಮಕ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: SIDDAPURA, Trending Tagged With: 7 ತಿಂಗಳಿಂದ, ಇತ್ಯರ್ಥ, ಕಕ್ಷಿದಾರರ ಪರದಾಟ, ಕಕ್ಷಿದಾರರು, ಕ್ರಿಮಿನಲ್ ಪ್ರಕರಣಗಳು ಬಾಕಿ, ಖಾಯಂ ನ್ಯಾಯಾಧೀಶರಿಲ್ಲದೆ, ನ್ಯಾಯಾಧೀಶರ ವರ್ಗಾವಣೆ‌, ಪೋಲಿಸರಿಗೆ ಧರ್ಮ ಸಂಕಟ, ವಿಳಂಬವಾಗುತ್ತಿವೇ ಪ್ರಕರಣದ, ಶನಿವಾರಕ್ಕೆ ಒಮ್ಮೆ ನ್ಯಾಯಾಧೀಶರು, ಶಿರಸಿಗೆ ಹೊಗಬೇಕು, ಸಿದ್ದಾಪುರ ನ್ಯಾಯಾಲಯ, ಸಿಬ್ಬಂದಿ‌ ಸಮಸ್ಯೆ, ಸಿಬ್ಬಂದಿಗಳಿಗೆ ವರ್ಗಾವಣೆಯ ಕಾಟ, ಸಿವಿಲ್

Explore More:

About Nagaraj Naik

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...