
ಶಿರಸಿ:
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ದಿ. ಎಸ್ ಬಂಗಾರಪ್ಪನವರ 6ನೇ ಪುಣ್ಯಾರಾಧನಾ ಕಾರ್ಯಕ್ರಮವನ್ನು ಗಾಣಿಗ ಸಭಾ ಭವನದಲ್ಲಿ ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅಭಿಮಾನಿ ಬಳಗ (ರಿ) ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಭಿಮಾನಿ ಬಳಗದ ಅಧ್ಯಕ್ಷ ಎ.ಜಿ ನಾಯ್ಕ ಭರಣಿ ಮಾತನಾಡಿ ಬಂಗಾರಪ್ಪನವರು ನಮ್ಮ ಮಾರ್ಗದರ್ಶಕರಾಗಿದ್ದರು, ಅವರು ಸಮಾಜವಾದಿ ಸಿದ್ದಾಂತವನ್ನ ಪ್ರತಿಪಾದಿಸಿದ್ದರು. ಬಡವರ ಬಂಧುವಾಗಿದ್ದರು. ಇವತ್ತು ಅವರಿಂದ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಲಾಭ ಪಡೆದವರು ಬಂಗಾರಪ್ಪನವರನ್ನು ಮರೆತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ನಾವೆಲ್ಲರು ಬಂಗಾರಪ್ಪನವರ ಆದರ್ಶವನ್ನು ಪಾಲಿಸಿಕೊಂಡು ಹೋಗ ಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಶಿರಸಿ, ತುಕಾರಾಮ ನಾಯ್ಕ, ದೇವರಾಜ ನಾಯ್ಕ.ಭಾಶಿ, ಸದಾನಂದ ತಿಗಣಿ, ಮಂಜೇಶ ನಾಯ್ಕ, ಉಮೇಶ ವಕೀಲರು, ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಬ್ಲೇಶ್ವರ ನಾಯ್ಕ ಬೆಳಲೆ, ವಿನೋಧ ಶಿರಸಿ, ಪ್ರದೀಪ ನಾಯ್ಕ ಚಿಪಗಿ, ಪ್ರಸನ್ನ ನಂದಗಾರ್, ಭಾಸ್ಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಉಮೇಶ ನಾಯ್ಕ ಸೇಲೂರು ಸ್ವಾಗತಿಸಿದರು, ರತ್ನಾಕರ ನಾಯ್ಕ ವಂದಿಸಿದರು, ದೇವರಾಜ ನಾಯ್ಕ ಭಾಶಿ, ನಿರ್ವಹಿಸಿದರು.

Leave a Comment