ಹಳಿಯಾಳ: ತಮಿಳನಾಡು-ಗೋವಾಕ್ಕೆ ಯಾವುದೇ ನಷ್ಟವಿಲ್ಲದ ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಹಾಗೂ ಮಹದಾಯಿ ಯೋಜನೆ ಜಾರಿಗೊಳಿಸುವಲ್ಲಿ ಹಿಂದೆಟು ಹಾಕದೆ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕದವರು ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಅವರಿಗೆ ಸಲ್ಲಿಸಿದರು.
ಮೇಕೆದಾಟು ಆಣೆಕಟ್ಟು ಯೋಜನೆ ಕಳೆದ 4-5 ವರ್ಷಗಳಿಂದ ಚರ್ಚೆಗೆ ಬಂದಿದ್ದು ಅಂದಿನಿಂದಲೂ ತಮಿಳನಾಡು ಸರ್ಕಾರ ವಿರೋದಿಸುತ್ತಲೆ ಬಂದಿದೆ. ಸುಮಾರು 5900 ಕೋಟಿ ವೆಚ್ಚದ ಬೃಹತ ಯೋಜನೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಅಡೆತಡೆಗಳನ್ನು ನಿವಾರಿಸಿಕೊಂಡು ಇದೀಗ ಕೇಂದ್ರ ಜಲ ಆಯೋಗದ ಅನುಮತಿಯನ್ನು ಪಡೆದಿದ್ದು ವಿಸ್ತøತ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗೆ ತಮಿಳನಾಡು ಸರ್ಕಾರ ವಿರೋಧ ಮಾಡಿತ್ತಿರುವುದು ಸಮಂಜಸವಲ್ಲ ರಾಜ್ಯ ಸರ್ಕಾರ ಯಾವುದೇ ಅಡೆತಡೆಗಳಿಗೆ ಜಗ್ಗದೆ ಈ ಯೋಜನೆ ಜಾರಿಗೊಳಿಸಲು ಪ್ರಯತ್ನಸಬೇಕು.
ಅದೆ ರೀತಿ ಉತ್ತರ ಕರ್ನಾಟಕದ ಜನತೆಯ ಕುಡಿಯುವ ನೀರಿನ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಕಳಸಾ ಬಂಡುರಿ ಯೋಜನೆಗೆ ಕರ್ನಾಟಕ ಚಾಲನೆ ನೀಡಲು ಮುಂದಾಗಿದ್ದು ಆದರೇ ನೇರೆ ರಾಜ್ಯ ಗೋವಾ ಸರ್ಕಾರ ಇದಕ್ಕೆ ಅಡ್ಡಿ ಉಂಟು ಮಾಡುತ್ತಿರುವುದು ಖಂಡನೀಯವಾಗಿದೆ. ಯೋಜನೆ ಶೀಘ್ರದಲ್ಲಿ ಜಾರಿಯಾಗುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವಾಗ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ಜಿಲ್ಲಾ ಕಾರ್ಯಾಧ್ಯಕ್ಷ ಸುದರ್ಶನ ಆರ್.ಸಿ, ವಿಲ್ಸನ್ ಫರ್ನಾಂಡಿಸ್, ಪ್ರವೀಣ ಕೊಠಾರಿ, ವಿನೋದ ಗಿಂಡೆ, ರಮೇಶ ಬಡಿಗೇರ ಸಂಪತ ಬೇಣಚೆಕರ, ಮಂಜುನಾಥ ಕಲಕುಂಡಿ, ರಾಜೇಶ ಚಕ್ರಸಾಲಿ, ಗೋಪಾಲ ಗರಗ, ಶಿರಾಜ ಮುನವಳ್ಳಿ, ಬಸವರಾಜ ತಳವಾರ ಇದ್ದರು.
Leave a Comment