ಹೊನ್ನಾವರ , ಉತ್ತರಕನ್ನಡ ಜಿಲ್ಲೆಯ, ಭಟ್ಕಳದ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ, ನಡೆದ 1ನೇ ಮುಕ್ತ ರಾಷ್ಟ್ರ ಕರಾಟೆ ಚಾಂಪಿಯನಶಿಪ್‍ಗೆ ಹೊನ್ನಾವರದ ರೋಯಲ್ ಅಕಾಡೆಮಿಯ ವಿದ್ಯಾರ್ಥಿಗಳು ಫೈಟ್ ಮತ್ತು ಕತಾದಲ್ಲಿ ಭಾಗವಹಿಸಿ ವಿಜಯಿಗಳಾಗಿದ್ದಾರೆ.
ಅಕ್ಷಯ.ಎಸ್.ಮೇಸ್ತಾ (ಪ್ರಥಮ, ಪ್ರಥಮ), ಚಂದನಾ.ರಮೇಶ.ಮೇಸ್ತಾ (ಪ್ರಥಮ, ದ್ವಿತೀಯ), ಭುವನ್.ಮಹೇಶ.ಮೊಗೇರ(ಪ್ರಥಮ), ಯಶಿಕಾ.ಕಿರಣ್‍ಕುಮಾರ.ನಾಯ್ಕ (ತೃತೀಯ,ತೃತೀಯ), ಜಯಸೂರ್ಯ.ಪಿ.ಈಟಿ (ಪ್ರಥಮ, ದ್ವಿತೀಯ), ಶಶಾಂಕ.ರಮೇಶ.ಮೇಸ್ತಾ (ಪ್ರಥಮ), ವಿನೀತ.ವಿ.ಎನ್ (ತೃತೀಯ,ದ್ವಿತೀಯ) ಶ್ರವಣ.ವಿನಯ್.ಹೆಗಡೆ(ದ್ವಿತೀಯ, ದ್ವಿತೀಯ), ಆರ್. ಪೂರ್ವಿ(ದ್ವಿತೀಯ,ದ್ವಿತೀಯ), ಮತ್ತು ಗೌತಮ.ಯು.ಮೇಸ್ತಾ(ಪ್ರಥಮ,ತೃತೀಯ) ಬಹುಮಾನವನ್ನು ಗೆದ್ದು ವಿಜಯಶಾಲಿಗಳಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲಾ ಟ್ರಿಡಿಶನಲ್ ಶೊಟೊಕೋನ್ ಅಡಿಯಲ್ಲಿ ಹೊನ್ನಾವರದ ಶಾರಧಾಂಭಾ ಕಲ್ಯಾಣ ಮಂಟಪದ ರೋಯಲ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಪಾಲಕರು ಮತ್ತು ಜಿಲ್ಲೆಯ ಜನರಲ್ ಸೆಕ್ರೇಟರಿ ಎಚ್.ಆರ್. ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದಾರೆ.
Leave a Comment